ರಾಜ್ಯದಲ್ಲಿ ಒಟ್ಟು 12300 ರಷ್ಟು ಮದ್ಯದಂಗಡಿಗಳಿವೆ
ಈ ರೇಟ್ಗೆ ಅಡ್ಜೆಸ್ಟ್ ಆಗೋದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ
ನಾವು ನಿರೀಕ್ಷೆ ಮಾಡಿರುವಷ್ಟು ತೆರಿಗೆ ಏನೂ ವಿಧಿಸಿಲ್ಲ
ಅಬಕಾರಿ ಸುಂಕದ ಮೇಲೆ ಕಣ್ಣಿಟ್ಟಿದ್ದ ಸರ್ಕಾರ ನಿನ್ನೆ ಬಜೆಟ್ನಲ್ಲಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ದರ ಹೆಚ್ಚಿಸುವುದಾಗಿ ಹೇಳಿದೆ. ಆದರೀಗ ಇದೇ ವಿಚಾರವಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ್ ಹೆಗಡೆ ನ್ಯೂಸ್ ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಜನ ಅಡ್ಜೆಸ್ಟ್ ಆಗಬೇಕಾಗುತ್ತೆ
ಅಬಕಾರಿ ಸುಂಕ ಹೆಚ್ಚಳ ಸರ್ಕಾರ ನಿನ್ನೆ ಘೋಷಣೆ ಮಾಡಿದೆ. ಹೀಗಾಗಿ ದರ ಏರಿಕೆ ಆಗುತ್ತೆ. ಇನ್ನೊಂದು ನಾಲ್ಕೈದು ಅಥವಾ ಒಂದು ವಾರದಲ್ಲಿ ಅನುಮೋದನೆ ಆಗಿ ದರ ಜಾರಿ ಆಗುತ್ತೆ. ಕೂಲಿ ಕಾರ್ಮಿಕರು, ಶ್ರಮಿಕ ವರ್ಗ ಏನು ಕುಡಿಯುತ್ತಾರೆ ಅವರಿಗೆ ಹೊರೆ ಅನ್ಸುತ್ತೆ. ದರ ಏರಿಕೆ ಮಾಡಿದ್ದಾರೆ ಫಾಲೋ ಮಾಡಲೇ ಬೇಕಾಗುತ್ತೆ. ಈ ರೇಟ್ ಗೆ ಅಡ್ಜೆಸ್ಟ್ ಆಗೋದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ ಜನ ಅಡ್ಜೆಸ್ಟ್ ಆಗಬೇಕಾಗುತ್ತೆ ಎಂದು ಕರುಣಾಕರ್ ಹೆಗಡೆ ಹೇಳಿದ್ದಾರೆ.
ಬಿಯರ್ ಬೆಲೆ 10 ರಿಂದ 20
ನಂತರ ಮಾತು ಮುಂದುವರಿಸಿದ ಅವರು, ನಾವು ನಿರೀಕ್ಷೆ ಮಾಡಿರುವಷ್ಟು ತೆರಿಗೆ ಏನೂ ವಿಧಿಸಿಲ್ಲ. 10% ನಮಗೆ ತೆರಿಗೆ ಜಾಸ್ತಿಯೇ ಆಗಿದೆ. ನಮಗೆ 50 ಪರ್ಸೆಂಟ್ ಖುಷಿ 50% ರಷ್ಟು ಬೇಜಾರು ಇದೆ. ಗ್ರಾಹಕರಿಗೆ ಸಾಕಷ್ಟು ಹೊಡೆತ ಬೀಳಲಿದೆ. ಸದ್ಯ ನಮ್ಮ ರಾಜ್ಯದಲ್ಲಿ 50 ರಿಂದ 60 ಸಾವಿರ ಕೋಟಿ ಕೋಟಿಯಷ್ಟು ವಹಿವಾಟು ನಡೆಯುತ್ತಿದೆ. ಇದರಲ್ಲಿ 32 ಸಾವಿರ ಕೋಟಿಯನ್ನ ಈ ಹಿಂದೆ ನೀಡಲಾಗುತ್ತಿತ್ತು. ಇದೀಗ 36 ಸಾವಿರದಷ್ಟು ಕೋಟಿಯನ್ನ ಈಗಾ ನೀಡಬೇಕಾಗುತ್ತದೆ. ಹೀಗಾಗಿ ಬಿಯರ್ ಬೆಲೆ 10 ರಿಂದ 20 ಹಾಗೂ ವಿಸ್ಕಿಯ ಬೆಲೆ 350 ರಿಂದ 400 ರೂ ಜಾಸ್ತಿಯಾಗಲಿದೆ. ಇದು ಗ್ರಾಹಕರಿಗೆ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ವರಮಾನ ಕಡಿಮೆಯಾಗಬಹುದು
ಸದ್ಯ ನಮ್ಮ ರಾಜ್ಯದಲ್ಲಿ ಒಟ್ಟು 12300 ರಷ್ಟು ಮದ್ಯದಂಗಡಿಗಳಿವೆ. ಸದ್ಯ ಮದ್ಯದಂಗಡಿಗಳಲ್ಲಿ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊಸ ಬೆಲೆ ನಿಗದಿಯಾಗಲಿದೆ. ಈಗ ನಮ್ಮ ರಾಜ್ಯಕ್ಕೆ 27 ಲಕ್ಷ ಕೇಸ್ ನಷ್ಟು ಮದ್ಯ ಬೇಕಾಗುತ್ತಿದೆ. ಈಗ ಬೇರೆ ರಾಜ್ಯದಲ್ಲಿ ಡ್ರಿಕ್ಸ್ ಬೆಲೆ ಕಡಿಮೆ ಇದೆ. ಹೀಗಾಗಿ ತುಂಬ ಜನ ಗಡಿನಾಡಿನಲ್ಲಿ ಹೋಗಿ ಖರೀದಿ ಮಾಡ್ತಾರೆ. ಇದರಿಂದಲೂ ನಮ್ಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರಮಾನ ಕಡಿಮೆಯಾಗಬಹುದು. ವ್ಯಾಪಾರಸ್ಥರು ಕೂಡ ಬೆಲೆ ಜಾಸ್ತಿ ಆಯ್ತು ಅಂತಿದ್ದಾರೆ. ಗ್ರಾಹಕರು ಕೂಡ ಮದ್ಯವನ್ನ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ್ ಹೆಗಡೆ ನ್ಯೂಸ್ ಫಸ್ಟ್ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ