/newsfirstlive-kannada/media/post_attachments/wp-content/uploads/2024/11/BNG_LIVAR.jpg)
ಬೆಂಗಳೂರು: ವೃದ್ಧರೊಬ್ಬರಿಗೆ ಕಸಿ ಮಾಡುವ ಸಂಬಂಧ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಜೀವಂತ ಲಿವರ್ (ಯಕೃತ್) ಅನ್ನು ಇಂಡಿಗೋ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜೀರೋ ಟ್ರಾಫಿಕ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ಜೀವಂತ ಲಿವರ್​ ಅನ್ನು ತರಲಾಗಿದೆ.
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ 63 ವರ್ಷದ ವೃದ್ಧರೊಬ್ಬರಿಗೆ ಲಿವರ್ ಅವಶ್ಯಕತೆ ಇದ್ದ ಕಾರಣ ಬೆಳಗಾವಿಯ 16 ವರ್ಷದ ಮೃತ ಬಾಲನೊಬ್ಬನ ಕುಟುಂಬವನ್ನು ಸಂಪರ್ಕಿಸಲಾಗಿತ್ತು. ಈ ಸಂಬಂಧ ನಗರದ ಸ್ಪರ್ಶ ಆಸ್ಪತ್ರೆ ವೈದ್ಯರು ಬಾಲಕನ ಕುಟುಂಬದ ಜೊತೆ ಮಾತನಾಡಿ ಇದಕ್ಕೆ ಒಪ್ಪಿಗೆ ಪಡೆದುಕೊಂಡಿದ್ದರು.
ಹೀಗಾಗಿ ಅಪಘಾತದಿಂದ ಗಾಯಗೊಂಡು ಹುಬ್ಬಳಿಯ ಕೆಎಲ್​​ಇ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಜೀವ ಬಿಟ್ಟಿದ್ದನು. ಈ ಬಾಲಕನ ಲಿವರ್ ಅನ್ನು ಬೆಂಗಳೂರಿಗೆ ಇಂಡಿಗೋ ವಿಮಾನದ ಮೂಲಕ ರವಾನೆ ಮಾಡಲಾಗಿತ್ತು. ಜೀರೋ ಟ್ರಾಫಿಕ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ಲಿವರ್​ ಅನ್ನು ತರಲಾಗಿತ್ತು. ಇನ್ನು ಲಿವರ್ ಸ್ಪರ್ಶ ಆಸ್ಪತ್ರೆಗೆ ತಲುಪುತ್ತಿದ್ದಂತೆ ವೈದ್ಯರು ಶಸ್ತ್ರಚಿಕಿತ್ಸೆ ಆರಂಭಿಸಿದ್ದಾರೆ.
ಜೀವಂತ ಲಿವರ್ ರವಾನೆ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದರು. ಜನನಿಬಿಡ ಏರ್​ಪೋರ್ಟ ರಸ್ತೆ ಮೂಲಕ ಔಟರ್​ ರಿಂಗ್ ರೋಡ್​​ನಿಂದ ಯಶವಂತಪುರಕ್ಕೆ ಸುರಕ್ಷಿತವಾಗಿ ರವಾನೆ ಮಾಡಲಾಗಿದೆ. ಎಲ್ಲಿಯೂ ಯಾವುದೇ ಸಮಸ್ಯೆ ಆಗದಂತೆ ನಿಗದಿತ ಸಮಯಕ್ಕೆ, ಸುರಕ್ಷಿತವಾಗಿ ತಲುಪುವಂತೆ ಪೊಲೀಸರು ಶ್ರಮ ವಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us