ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಪ್ರೇಮಿಗಳ ಕೊಲೆ
8 ತಿಂಗಳಲ್ಲಿ ಒಂದಲ್ಲ ಎರಡಲ್ಲ ಹಲವು ಹತ್ಯೆಗಳು
ಮಹಿಳೆಗೆ ಕರೆ ಮಾಡಿದ್ದಕ್ಕೆ ಹಳೆ ಲವರ್ ಮರ್ಡರ್
ಇತ್ತೀಚೆಗೆ ಲಿವಿಂಗ್ ಟುಗೆದರ್ ಅನ್ನೋ ಸಂಬಂಧ ಸಾಕಷ್ಟು ಚಾಲ್ತಿಯಲ್ಲಿದೆ. ಇದರಿಂದಾನೇ ದಿಲ್ಲಿ, ಮುಂಬೈಗಳಲ್ಲಿ ಭೀಕರ ಹತ್ಯೆ ಘಟನೆಗಳೂ ನಡೆದಿರೋದು ವರದಿಯಾಗಿದೆ. ಹಾಗಂತ ನಮ್ಮ ಬೆಂಗಳೂರೇನೂ ಈ ಪ್ರಕರಣಗಳಿಂದ ಹೊರತಾಗಿಲ್ಲ. ಇಲ್ಲೂ ಲಿವಿಂಗ್ ಟುಗೆದರ್ ಸಂಬಂಧ ಹಲವರ ಜೀವನವನ್ನೇ ಎಂಡ್ ಮಾಡಿದೆ. ದಿನೇ ದಿನೇ ಲಿವ್ ಇನ್ ಟುಗೆದರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಸಂಸ್ಕೃತಿ. ಇತ್ತೀಚೆಗೆ ನಮ್ಮ ದೇಶದ ಯುವ ಜನತೆಯೂ ಈ ಲಿವಿಂಗ್ ಟುಗೆದರ್ ಎಂಬ ಯಮ ಪಾಶದಲ್ಲಿ ಸಿಲುಕಿ ಬದುಕನ್ನೇ ಹಾಳು ಮಾಡಿಕೊಳ್ತಿದ್ದಾರೆ. ಇದಕ್ಕೆ ದೆಹಲಿಯ ಶ್ರದ್ಧಾ ವಾಲ್ಕರ್. ಮೊನ್ನೆ ಮೊನ್ನೆಯಷ್ಟೇ ಮುಂಬೈನಲ್ಲಿ ನಡೆದ ಸರಸ್ವತಿ ವೈದ್ಯ ಭೀಕರ ಹತ್ಯೆಗಳೇ ಸಾಕ್ಷಿ. ಚಿನ್ನ, ಮುದ್ದು, ರನ್ನ, ನೀನು ನನ್ನ ಪ್ರಾಣ ಎಂದೆಲ್ಲ ಆರಂಭದಲ್ಲಿ ಪುಸಿ ಹೊಡೆದವರು. ಕೊನೆಗೆ ಸಣ್ಣ ಸಣ್ಣ ವಿಷಯಕ್ಕೆ ಪ್ರಾಣವನ್ನೇ ತೆಗೆಯುವ ಮಟ್ಟಕ್ಕೆ ಹೋಗ್ತಿರೋದು ದುರಂತ ಸಂಗತಿ.

8 ತಿಂಗಳಲ್ಲಿ ಒಂದಲ್ಲ ಎರಡಲ್ಲ 7 ಭಯಾನಕ ಹತ್ಯೆ
ದೂರದ ದೆಹಲಿ, ಮುಂಬೈ ಮಾತ್ರವಲ್ಲ. ನಮ್ಮ ಬೆಂಗಳೂರಿನಲ್ಲೂ ಲಿವಿಂಗ್ ಟುಗೆದರ್ ಆಫ್ಟರ್ ಮರ್ಡರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದೆ. ಇತ್ತೀಚೆಗೆ ಪ್ರೇಮಿಗಳ ಕೊಲೆ ಕೇಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಆತಂಕಕ್ಕೆ ನೂಕಿದೆ. ಕಳೆದ 8 ತಿಂಗಳಲ್ಲಿ 7 ಲಿವಿಂಗ್ ಕೊಲೆ ಕೇಸ್ಗಳು ಬೆಂಗಳೂರಿನಲ್ಲಿ ದಾಖಲಾಗಿವೆ.
ಪ್ರಕರಣ: 1
ಸ್ಥಳ: ಅಶೋಕ ನಗರ ಠಾಣಾ ವ್ಯಾಪ್ತಿ
ಕಾರಣ: ಬರ್ತ್ಡೇ ಗಿಫ್ಟ್ ವಿಚಾರಕ್ಕೆ ಕೊಲೆ
ಫೆಬ್ರವರಿ, ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಜಗಳ ಶುರುವಾಗಿ ಪ್ರೇಯಸಿ ಕೌಸರ್ನನ್ನು ಪ್ರಿಯತಮ ನದೀಮ್ ಪಾಷ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಪ್ರಕರಣ: 2
ಸ್ಥಳ : ಅಮೃತಹಳ್ಳಿ ಠಾಣಾ ವ್ಯಾಪ್ತಿ
ಕಾರಣ: ತನ್ನ ಹುಡುಗಿ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಹತ್ಯೆ
ಈ ಹತ್ಯೆ ನಡೆದಿದ್ದು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ.. ಲಿವಿಂಗ್ ಟುಗೆದರ್ನಲ್ಲಿದ್ದ ಯುವತಿ, ತನ್ನ ಪ್ರಿಯಕರನಲ್ಲದೇ ಮತ್ತೊಬ್ಬ ಯುವಕನ ಜೊತೆಗೂ ಸ್ನೇಹ, ಸಲುಗೆ ಬೆಳೆಸಿದ್ದಳು. ಇದರಿಂದ ಕೋಪಗೊಂಡ, ಯುವತಿಯ ಪ್ರಿಯಕರ ವಿಕ್ಟರ್, ತನ್ನ ಹುಡುಗಿ ಜೊತೆ ಸಲುಗೆ ಬೆಳೆಸಿದ್ದ, ಸುಲೇಮಾನ್ ಎಂಬಾತನನ್ನು ಮುಗಿಸಿಬಿಟ್ಟಿದ್ದ.
ಪ್ರಕರಣ: 3
ಸ್ಥಳ – ಜ್ಞಾನಭಾರತಿ ಠಾಣಾ ವ್ಯಾಪ್ತಿ
ಕಾರಣ: ಮಹಿಳೆಗೆ ಕರೆ ಮಾಡಿದ್ದಕ್ಕೆ ಹಳೆ ಲವರ್ ಮರ್ಡರ್ ಯತ್ನ
ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಮತ್ತು ಸಹಚರು ಶ್ರೀಕಾಂತ್ ಎಂಬಾತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ರು. ಇದಕ್ಕೆ ಕಾರಣ, ಈ ಹಿಂದೆ ಲಿವಿಂಗ್ ಟುಗೆದ್ದರ್ನಲ್ಲಿ ಮಹಿಳೆಗೆ ಶ್ರೀಕಾಂತ್ ಕರೆ ಮಾಡಿದ್ದ. ಈ ವಿಚಾರಕ್ಕೆ ಜಗಳ ನಡೆದು ಹಲ್ಲೆ ಮಾಡಲಾಗಿತ್ತು. ಪೊಲೀಸರು ಅರುಣ್ ಸೇರಿದಂತೆ ಹಲ್ಲೆ ನಡೆಸಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದರು.
ಪ್ರಕರಣ: 4
ಸ್ಥಳ – ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿ
ಕಾರಣ: ಮದುವೆ ಆಗು ಎಂದಿದ್ದಕ್ಕೆ ಮರ್ಡರ್
ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹತ್ಯೆ, ಕೊಲೆಯಾದ ಸುನಿತಾ ಮತ್ತು ಆರೋಪಿ ಪ್ರಿಯಕರ ಇಬ್ಬರು ಪ್ರೀತಿಸುತ್ತಿದ್ದರು. ಹಾಗೂ ಸರ್ವಸ್ವವನ್ನು ಅರ್ಪಿಸಿಕೊಂಡಿದ್ದರು. ಹೀಗಾಗಿ ಮದುವೆ ಆಗುವಂತೆ ಸುನಿತಾ ಕೇಳಿಕೊಂಡಿದ್ದಾಳೆ. ಈ ವಿಚಾರಕ್ಕೆ ಜಗಳ ಆಗಿ, ಪ್ರಿಯಕರ ಪ್ರಶಾಂತ್ ಸುನಿತಾಳ ಕಥೆ ಮುಗಿಸಿದ್ದ.
ಪ್ರಕರಣ: 5
ಸ್ಥಳ – ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ
ಕಾರಣ: ಪ್ರಿಯತಮೆ ಮೇಲೆ ಅನುಮಾನ, ಹತ್ಯೆ
ನೇಪಾಳ ಮೂಲದ ಕೃಷ್ಣಕುಮಾರಿ ಎಂಬಾಕೆಯನ್ನ ಪ್ರಿಯತಮ ಸಂತೋಷ್ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಇವರಿಬ್ಬರೂ ಕೆಲ ವರ್ಷಗಳಿಂದ ಲಿವಿಂಗ್ ಟು ಗೆದರ್ನಲ್ಲಿದ್ರು. ಆದ್ರೆ ಪ್ರಿಯತಮೆ ಕೃಷ್ಣಕುಮಾರಿ ಮೇಲೆ ಸಂತೋಷ್ ಅನುಮಾನ ಪಡ್ತಿದ್ದ. ಇದೇ ವಿಚಾರಕ್ಕೆ ಜಗಳ ನಡೆದು, ಕೊಲೆ ಮಾಡಿದ್ದ..
ಪ್ರಕರಣ: 6
ಸ್ಥಳ : ಜೀವನ್ ಭೀಮನಗರ
ಪ್ರಿಯಕರನಿಂದ ಪ್ರಿಯತಮೆಯ ಹತ್ಯೆ
ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದ, ಆಕಾಂಕ್ಷ ಎಂಬ ಯುವತಿಯ ಹತ್ಯೆ ಆಗಿತ್ತು. ಈಕೆಯ ಜೊತೆ ವಾಸವಿದ್ದ ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಪರಾರಿ ಆಗಿದ್ದ.
ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ 12 ವರ್ಷಗಳ ಹಿಂದೆ ಮದುವೆ ಆಗಿದ್ದ ಪತ್ನಿ ನಾಗರತ್ನಳನ್ನೇ ಆರೋಪಿ ಅಯ್ಯಪ್ಪ ಕೊಲೆ ಮಾಡಿದ್ದ. ದೂರ ಮುಂಬೈ, ದೆಹಲಿಗಳಲ್ಲಿ ನಡೆಯುತ್ತಿದ್ದ ರೀತಿಯಲ್ಲಿ ಈಗ ಬೆಂಗಳೂರಿನಲ್ಲೂ ಕೊಲೆಗಳು ನಡೆಯುತ್ತಿವೆ. ಅದರಲ್ಲೂ ಪ್ರೇಮಿಗಳ ಕೊಲೆ ಕೇಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಆಘಾತಕಾರಿ ಸಂಗತಿ. ಇಷ್ಟದ ಬದುಕನ್ನು ಕಟ್ಟಿಕೊಳ್ಳಲು ಹೋಗಿ, ಕೊನೆಗೆ ಈ ಭೂಮಿಯಿಂದಲೇ ಕಾಣೆ ಆಗ್ತಿದ್ದಾರೆ. ಇನ್ನಾದ್ರೂ ಯುವಜನತೆ ಇಂಥ ಮೋಹಕ್ಕೆ ಬಲಿಯಾಗದಂತೆ ಎಚ್ಚೆತ್ತುಕೊಳ್ಳಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ