ಲೊಕ್ಯಾಂಟೋ ಌಪ್ ಬಳಸುವವರೇ ಇಲ್ಲಿ ಕೇಳಿ
ಯುವತಿ ಹೆಸರಲ್ಲಿ ಕರೆ ಮಾಡಿ ಸಲಿಗೆ ಮಾಡ್ತಾರೆ ಈ ಗ್ಯಾಂಗ್
ಮೆಸೇಜ್ ನಂಬಿ ಹೋದ್ರೆ ವಾಪಾಸ್ ಬರ್ತಿರೋ ಗೊತ್ತಿಲ್ಲ
ಲೊಕ್ಯಾಂಟೋ ಌಪ್ ಬಳಸುವವರೇ ಎಚ್ಚರ. ಈ ಆ್ಯಪ್ ಬಳಸಿದ್ದ ವ್ಯಕ್ತಿಯೊಬ್ಬರಿಂದ 60ಸಾವಿರ ರೂಪಾಯಿ ಹಣ ಸುಲಿಗೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತರನ್ನು ನದೀಂಪಾಷಾ ಮತ್ತು ನಾಗೇಶ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಲೊಕ್ಯಾಂಟೋ ಆ್ಯಪ್ ಮೂಲಕ ನಕಲಿ ಖಾತೆಯನ್ನ ಕ್ರಿಯೇಟ್ ಮಾಡಿ, ಗಾಳವನ್ನ ಹಾಕುತ್ತಿದ್ದರು. ಯುವತಿಯೊಬ್ಬಳ ಹೆಸರಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ, ಪುರುಷರನ್ನು ಯಾಮಾರಿಸುತ್ತಿದ್ದರು. ಆ ಖಾತೆಗೆ ಯಾರೇ ಸಂಪರ್ಕಕ್ಕೆ ಸಿಕ್ಕರೂ ಬನ್ನಿ ಅಂತ ಕರೆಸಿಕೊಳ್ಳುತ್ತಿದ್ದರು.
ಯಾರಾದರು ಪ್ರೊಫೈಲ್ ಕ್ಲಿಕ್ ಮಾಡಿದರೆ ಯುವತಿ ಹೆಸರಲ್ಲಿ ಕರೆ ಮಾಡಿ ಸಂಪರ್ಕ ಸಾಧಿಸುತ್ತಿದ್ದರು. ನಂತರ ಲೊಕೇಷನ್ ಕಳಿಸಿ, ಇಲ್ಲಿಗೆ ಬನ್ನಿ ಎಂದು ಕರೆಸಿಕೊಳ್ಳುತ್ತಿದ್ದರು. ಇದನ್ನು ನಂಬಿ ಬಂದ ಜನರಿಗೆ ಬೆದರಿಸಿ, ಸುಲಿಗೆ ಮಾಡುತ್ತಿದ್ದರು.
ಹೀಗೆ ವ್ಯಕ್ತಿಯೊಬ್ಬ ಲೊಕ್ಯಾಂಟೋ ಆ್ಯಪ್ ಮೂಲಕ 60 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಅದಕ್ಕೂ ಮುನ್ನ ಆರೋಪಿಗಳು ವ್ಯಕ್ತಿಗೆ ಲೊಕೇಷನ್ ಹಾಕಿ ಬರಲು ಹೇಳಿದ್ದಾರೆ. ವ್ಯಕ್ತಿ ಆಟೋದಲ್ಲಿ ಬಂದು ಲೊಕೇಷನ್ ಹಾಕಿದ್ದಾನೆ. ಬಳಿಕ ಚಾಕು ತೋರಿಸಿ ಸುಲಿಗೆ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಹೆಚ್ ಎಸ್ ಆರ್ ಠಾಣೆ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ಆರೋಪಿಗಳು ಸಿಕ್ಕಿದ್ದು, ಪೊಲೀಸರು ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ