ಈ ಬಾರಿ UPA ಕೂಟಕ್ಕೆ ಹೆಚ್ಚಿನ ಸ್ಥಾನ ಸಾಧ್ಯತೆ
2024ಕ್ಕೆ ಅಧಿಕಾರಕ್ಕೆ ಬರೋದು ಮಾತ್ರ NDA
ಯಾವ ಒಕ್ಕೂಟಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು..?
2024ರ ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಲೋಕಸಭಾ ಸಮರಗೆಲ್ಲಲು ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಗಳ ಮಧ್ಯೆ ಭಾರೀ ಜಿದ್ದಾ ಜಿದ್ದಿ ಏರ್ಪಟ್ಟಿದೆ.
ಈ ಮಧ್ಯೆ ಟೈಮ್ಸ್ ನೌ ಮತ್ತು ಇಟಿಜಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಎನ್ಡಿಎಗೆ ಸಿಹಿ ಸುದ್ದಿ ಸಿಕ್ಕಿದೆ. ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆಯ ಪ್ರಕಾರ ಈಗ ಲೊಕಸಭಾ ಚುನಾವಣೆ ನಡೆದ್ರೆ ಬಿಜೆಪಿ ಮೈತ್ರಿಕೂಟ 296 ರಿಂದ 326 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಬಹುದು. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 160 ರಿಂದ 190 ಸ್ಥಾನಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಬಹುದು ಎಂದು ಭವಿಷ್ಯ ನುಡಿದಿದೆ.
ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಯ ಕೆಲ ಸ್ಥಾನಗಳು ಕಡಿಮೆಯಾಗಲಿವೆ. ಆದರೂ ಕೇಂದ್ರದಲ್ಲಿ ಬಿಜೆಪಿ ಮತ್ತೆ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿ ವೈಎಸ್ಆರ್ಸಿಪಿ 24 ರಿಂದ 25, ಬಿಜೆಡಿ 12 ರಿಂದ 14, ಬಿಆರ್ಎಸ್ 9 ರಿಂದ 11 ಹಾಗೂ ಇತರೆ 11 ರಿಂದ 14 ಸ್ಥಾನಗಳಿಸಬಹುದು ಅಂತ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಟೈಮ್ಸ್ನೌ ಸಮೀಕ್ಷೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ