newsfirstkannada.com

ಅವಧಿಗೂ ಮುನ್ನವೇ ಲೋಕಸಭಾ ಚುನಾವಣೆ?; 155 ಕ್ಷೇತ್ರಗಳಿಗೆ ಶೀಘ್ರವೇ BJP ಅಭ್ಯರ್ಥಿ ಘೋಷಣೆ

Share :

30-08-2023

    ಡಿಸೆಂಬರ್‌ನಲ್ಲೇ ಚುನಾವಣೆಗೆ ಹೋಗಬಹುದು ಎಂದ ದೀದಿ, ನಿತೀಶ್

    350 ಕ್ಷೇತ್ರ ಗೆದ್ದು ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸೋ ವಿಶ್ವಾಸ

    ಸೆಪ್ಟೆಂಬರ್ 1 ರಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಮಿತ್ ಶಾ ಸಭೆ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಇನ್ನೂ 9 ತಿಂಗಳು ಬಾಕಿಯಿದೆ. ಆದರೆ ಅವಧಿಗೂ ಮುನ್ನವೇ ದೇಶದಲ್ಲಿ ಎಲೆಕ್ಷನ್ ಎದುರಾಗುತ್ತಾ ಅನ್ನೋ ಅನುಮಾನಗಳು ಮೂಡಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನಾಯಕರು ಇದೇ ಡಿಸೆಂಬರ್‌ನಲ್ಲೇ ಚುನಾವಣೆಗೆ ಹೋಗಬಹುದು ಅನ್ನೋ ಹೇಳಿಕೆ ನೀಡಿದ್ದರು. ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ದೇಶದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎನ್ನುತ್ತಿದ್ದಾರೆ.

ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಅವರ ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಪಕ್ಷ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. 150 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಬಿಜೆಪಿ ಥಿಂಕ್ ಟ್ಯಾಂಕ್‌ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮುಂದಿನ ಚುನಾವಣೆಯಲ್ಲಿ 350 ಕ್ಷೇತ್ರಗಳನ್ನು ಗೆದ್ದು ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸುವುದು ಬಿಜೆಪಿ ನಾಯಕರ ಅಜೆಂಡಾ. ಲೋಕ ಸಮರದ ಈ ರಣತಂತ್ರದಲ್ಲಿ 150 ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಈ 150 ಅಭ್ಯರ್ಥಿಗಳ ಆಯ್ಕೆಗೆ ವಿಶೇಷವಾದ ಮಾನದಂಡವನ್ನು ಅನುಸರಿಸುತ್ತಿದ್ದು, 155-160 ಲೋಕಸಭಾ ಕ್ಷೇತ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. 2014 ಹಾಗೂ 2019ರ ಲೋಕಸಭಾ ಚುನಾವಣೆಯ ವೇಳೆ ಎಲ್ಲಿ ಬಿಜೆಪಿ ಸೋತಿದ್ಯೋ ಆ ಕ್ಷೇತ್ರಗಳಲ್ಲೇ ಮೊದಲು ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಹಿರಿಯ ಕಾರ್ಯಕಾರಿ ಸದಸ್ಯರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ 2 ದಿನ INDIA ಒಕ್ಕೂಟ ಮೆಗಾ ಸಮಾವೇಶ; ಲೋಗೋ ಅನಾವರಣ, ಸೀಟ್ ಹಂಚಿಕೆ ಅನೌನ್ಸ್ ಸಾಧ್ಯತೆ

ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಗಾಗಲೇ ಚರ್ಚೆಗಳು ನಡೆದಿದೆ. ದೇಶದ 543 ಲೋಕಸಭಾ ಕ್ಷೇತ್ರಗಳನ್ನು ABCD ಎಂದು ವಿಗಂಡಿಸಲಾಗಿದೆ. ಅಂದ್ರೆ 2014, 2019ರಲ್ಲಿ ಸೋತ ಲೋಕಸಭಾ ಕ್ಷೇತ್ರಗಳು C ಹಾಗೂ D ವಿಭಾಗದಲ್ಲಿದ್ದು, ದುರ್ಬಲ ಕ್ಷೇತ್ರಗಳೆಂದು ಗುರುತಿಸಲಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರವೂ ಸೇರಿದೆ. 150 ರಲ್ಲಿ ಸುಮಾರು 75 ಕ್ಷೇತ್ರಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಬಿಜೆಪಿ ನಾಯಕರು ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ ಅಥವಾ ನವೆಂಬರ್ ಮೊದಲ ವಾರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಸೆಪ್ಟೆಂಬರ್ 1 ರಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರು, ಬಿಜೆಪಿ ನಾಯಕರಿಗೆ ಮಹತ್ವದ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅವಧಿಗೂ ಮುನ್ನವೇ ಲೋಕಸಭಾ ಚುನಾವಣೆ?; 155 ಕ್ಷೇತ್ರಗಳಿಗೆ ಶೀಘ್ರವೇ BJP ಅಭ್ಯರ್ಥಿ ಘೋಷಣೆ

https://newsfirstlive.com/wp-content/uploads/2023/07/bjp-2023-3.jpg

Load More