newsfirstkannada.com

Lok Sabha Election: ಹಳೇ ದೋಸ್ತಿಗಳ ಸ್ನೇಹ ಬಯಸಿದ ಎನ್​​ಡಿಎ.. ಮೋದಿ ಒಕ್ಕೂಟಕ್ಕೆ ಹೊಸದಾಗಿ 5 ಮಿತ್ರಪಕ್ಷಗಳ ಬಲ..!?

Share :

17-07-2023

    ದ.ಭಾರತದಲ್ಲಿ ಬಿಜೆಪಿಗೆ ಊರುಗೋಲು ಆಗ್ತಾರಾ ನಾಯ್ಡು?

    ಬೆಂಗಳೂರಲ್ಲೇ ಸಭೆ ನಡೆದ್ರೂ HDKಗೆ ಆಹ್ವಾನ ನೀಡದ ವಿಪಕ್ಷ

    ಪಾಟ್ನಾದಲ್ಲಿ 15, ಬೆಂಗಳೂರಲ್ಲಿ ಹೆಚ್ಚುವರಿಯಾಗಿ 11 ಪಕ್ಷಗಳು ಭಾಗಿ?

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ UPA ಒಕ್ಕೂಟ ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ಕಳೆದುಕೊಂಡಿದೆ. ಮೋದಿ ಅಲೆಯಿಂದ 2019ರಲ್ಲಿ ಅನುಭವಿಸಿದ್ದ ಮುಖಭಂಗ ಮತ್ತೆ ಆಗಬಾರದು ಎಂದು ಎಚ್ಚೆತ್ತುಕೊಂಡಿರುವ ಈ ಮೈತ್ರಿ ಕೂಟ ಒಗ್ಗಟ್ಟಿನ ಜಪವನ್ನು ಹಣೆಯುತ್ತಿದೆ. ಬಿಹಾರದ ಪಾಟ್ನಾದಲ್ಲಿ ಸಭೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ಶುರುವಾಗಿದ್ದು, ಇವತ್ತಿನಿಂದ ಕಾಂಗ್ರೆಸ್​ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ರೆಸಾರ್ಟ್​ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ (ಕಾಂಗ್ರೆಸ್​) ಮಿತ್ರಪಕ್ಷಗಳ ನಾಯಕರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ವಿಪಕ್ಷಗಳನ್ನು ಮತ್ತೊಮ್ಮೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿದೆ. ಜೊತೆಗೆ ಬೆಂಗಳೂರಲ್ಲಿ ಎರಡನೇಯ ಸಭೆ ನಡೆಯುತ್ತಿರೋದು ಕೂಡ ವಿಶೇಷವಾಗಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಇವತ್ತಿನ ಔತಣಕೂಟಕ್ಕೆ ಬರೋದು ಡೌಟ್ ಎನ್ನಲಾಗಿದ್ದು, ನಾಳೆ ಬರುವ ನಿರೀಕ್ಷೆ ಇದೆ. ಇನ್ನು, ಆಮ್​​ ಆದ್ಮಿ, ಕಾಂಗ್ರೆಸ್​ ನೇತೃತ್ವದ ಮೈತ್ರಿಕೂಟಕ್ಕೆ ಜೈ ಅಂದಿರೋದು ವಿಪಕ್ಷಗಳ ಸಭೆಗೆ ಸ್ಪೆಷಲ್ ಕಳೆ ಬಂದಿದೆ.

ಕಾಂಗ್ರೆಸ್​ ನೇತೃತ್ವದ ಯುಪಿಎ ಒಕ್ಕೂಟ ಮೋದಿಯ NDA ಮೈತ್ರಿಕೂಟಗಳನ್ನು ಧಮನ ಮಾಡಲು ಪ್ರಯತ್ನಿಸುತ್ತಿದ್ದರೆ, ಇತ್ತ ಬಿಜೆಪಿ ಕೂಡ ಎಚ್ಚೆತ್ತುಕೊಂಡಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಹೊಸದಾಗಿ ‘ಸ್ನೇಹ ಹಸ್ತ’ ಬಯಸಿದೆ. ಹಿಂದೆ ಇದ್ದವರು, ಕೈಕೊಟ್ಟು ಹೋದವರು, ಹೊಸದಾಗಿ ಎನ್​​ಡಿಎ ಒಕ್ಕೂಟಕ್ಕೆ ಸೇರಲು ಬಯಸಿರೋರಿಗೆ ಬಿಜೆಪಿ ಮುಕ್ತ ಆಹ್ವಾನ ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಸ್ನೇಹ ಬಯಸಿದೆ.

ಬಿಜೆಪಿ ಟಾರ್ಗೆಟ್ ಏನು..?

ಕಳೆದ ಎರಡು ಅವಧಿಯಲ್ಲಿ ಎನ್​ಡಿಎಗೆ ಗೆಲುವು ನೀರು ಕುಡಿದಷ್ಟೇ ಸರಾಗವಾಗಿತ್ತು. ಆದರೆ, ಈ ಬಾರಿ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿ ತುಸು ಸ್ನೇಹ ಬಯಸಿದೆಯಂತೆ. ಅಂತೆಯೇ ಬಿಜೆಪಿಯ ಮೊದಲ ಕೆಲಸ ಏನೆಂದರೆ, ಇತ್ತೀಚೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆಗಳು ಆದವು. ಒಡೆದ ಮನೆಯಾಗಿರುವ ಎನ್​ಸಿಪಿಯ (Nationalist Congress Party) ಅಜಿತ್ ಪವಾರ್ ಅವರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆಯ ಚಕ್ರವ್ಯೂಹಕ್ಕೆ ಬಿಜೆಪಿ ನಾಂದಿ ಹಾಡುತ್ತಿದೆ.

HAM (Hindustani Awam Morcha) ಪಕ್ಷದ ಜಿತನ್ ರಾಮ್ ಮಾಂಝಿ, ಸುಹೆಲ್ದೇವ್ ಭಾರತೀಯ ಸಮಾಜ್ ಪಾರ್ಟಿಯ ಓಂ ಪ್ರಕಾಶ್ ರಾಜ್​ಬಿರ್ ವಾಪಸ್​ ಆಗ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ್​​ನಲ್ಲಿ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಮಾತ್ರವಲ್ಲ ಲೋಕಶಕ್ತಿ ಪಕ್ಷದ (ರಾಮ್ ವಿಲಾಸ್) ಚಿರಾಗ್ ಪಾಸ್ವನ್ ಕೂಡ ಬಿಜೆಪಿ ಬಗ್ಗೆ ಒಲವು ತೋರಿಸಿದ್ದು, ಬಿಜೆಪಿ ಒಕ್ಕೂಟಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿರೀಕ್ಷೆ ಇದೆ.

ಬಿಜೆಪಿಯಲ್ಲಿ ಭಾರೀ ಬದಲಾವಣೆ..?

ಹೀಗಿದ್ದೂ ಎನ್​ಡಿಎ ಒಕ್ಕೂಟ ಸುಮ್ಮನೆ ಕೈಕಟ್ಟಿ ಕೂರುವಂತಿಲ್ಲ. ಬೆಂಗಳೂರಲ್ಲಿ ನಡೆಯುತ್ತಿರುವ 26 ವಿಪಕ್ಷಗಳ ಒಗ್ಗೂಡಿಕೆಯಿಂದ ಎಲ್ಲೋ ಒಂದು ಕಡೆ ಆತಂಕ ಸೃಷ್ಟಿಸಿದೆ. ಯಾಕಂದರೆ ಬಿಹಾರದ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ 16 ವಿರೋಧ ಪಕ್ಷಗಳು ಭಾಗಿಯಾಗಿದ್ದವು. ತಿಂಗಳಾಂತ್ಯದಲ್ಲಿ ನಡೆಯುತ್ತಿರುವ ಎರಡನೇ ಸಭೆಯಲ್ಲಿ 11 ಪಕ್ಷಗಳು ಹೆಚ್ಚುವರಿಯಾಗಿ ಸೇರಿಕೊಂಡಿವೆ. ಹೀಗಾಗಿ ಇಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಣಯಗಳ ಆಧಾರ ಮೇಲೆ ಬಿಜೆಪಿ ಒಕ್ಕೂಟ ಕೂಡ ಪಕ್ಷದ ಚುನಾವಣಾ ನೀತಿ, ನಿಯಮಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಭವಿಷ್ಯದಲ್ಲಿ ಬಿಜೆಪಿಯ ನೂತನ ಮಿತ್ರರು ಯಾರು..?

ತೆಲುಗು ದೇಶಂ ಪಾರ್ಟಿ (ಟಿಡಿಪಿ)

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಕ್ಷ ಟಿಟಿಪಿ. ಇದು ಬಿಜೆಪಿಯ ಹಳೇ ಸ್ನೇಹಿತ. 2018ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಸೋಲಿಗೆ ಶರಣಾಯ್ತು. ಇನ್ನು ಬಿಜೆಪಿ ಯಾವುದೇ ಖಾತೆ ತೆರೆಯದೇ ಮುಖಭಂಗ ಅನುಭವಿಸಿತ್ತು. ಇನ್ನು ಡಿಟಿಪಿ ಮತ್ತು ಬಿಜೆಪಿ ಮೈತ್ರಿಕೂಟದ ಇತಿಹಾಸ ನೋಡೋದಾದ್ರೆ 1998 ರಿಂದ 2005ರಲ್ಲಿ ಮೈತ್ರಿಮಾಡಿಕೊಂಡಿದ್ದವು. ಅದಾದ ನಂತರ ಮತ್ತೆ 2014 ರಿಂದ 2018ರವರೆಗೆ ಸ್ನೇಹ ಚಿಗುರೊಡೆದಿತ್ತು.
ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರವಾಗಿ ನೆಲೆ ಕಂಡುಕೊಳ್ಳಬೇಕು ಅಂದರೆ ಆಂಧ್ರಪ್ರದೇಶದಂಥ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ನೆರವು ಅಗತ್ಯ ಇದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪುಟಿದೇಳಲು ಸ್ನೇಹದ ಅಗತ್ಯ ಇದೆ. ಬಿಜೆಪಿಯ ಇಂಡಿಯಾ ಪಾಲಿಟಿಕ್ಸ್ ಕಬ್ಜಾ ಕನಸಿಗೆ ಟಿಡಿಪಿ ಊರುಗೋಲು ಆದರೂ ಅಚ್ಚರಿ ಇಲ್ಲ!

ಶಿರೋಮಣಿ ಅಕಾಲಿ ದಳ (SAD)

ಶುಕ್​ಬಿರ್​ ಸಿಂಗ್ ಬಾದಲ್ ನೇತೃತ್ವದ ಪಕ್ಷ ಕೂಡ ಬಿಜೆಪಿಯ ಒಂದು ಕಾಲದ ಆಪ್ತ ಸ್ನೇಹಿತ. ಆದರೆ, ಕೇಂದ್ರ ಸರ್ಕಾರದ ನೂತನ ‘Farm Law’ (ಕೃಷಿ) ವಿರುದ್ಧ ಸಿಡಿದೆದ್ದು ದೋಸ್ತಿಯನ್ನು ಖತಂ ಮಾಡಿಕೊಂಡಿತ್ತು. ಇದೀಗ ಕೇಂದ್ರ ಸರ್ಕಾರ ತನ್ನ ನೂತನ ಕೃಷಿ ಕಾನೂನನ್ನು ವಾಪಸ್ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿದೋದು ಪಕ್ಕಾ ಆಗಿದೆ. ಕೇಂದ್ರದಲ್ಲಿ ಎನ್​ಡಿಎ ಒಕ್ಕೂಟದ ಸರ್ಕಾರ ರಚನೆ ಆಗೋದ್ರಲ್ಲಿ ಶಿರೋಮಣಿ ಅಕಾಲಿ ದಳದ ಪಾಲು ಸಾಕಷ್ಟಿದೆ. ಎನ್​ಡಿಎ ಒಕ್ಕೂಟದ ಜೊತೆ 1996ರಿಂದ 2020ರವರೆಗಿನ ಸುದೀರ್ಘ ಸ್ನೇಹದ ಇತಿಹಾಸ ಇದೆ. 1997 ರಿಂದ 2002ವೆರೆಗೆ ಹಾಗೂ 2007 ರಿಂದ 2017ರವೆಗೆ ಪಂಜಾಬ್​ನಲ್ಲಿ ದೋಸ್ತಿ ಸರ್ಕಾರ ಚಾಲ್ತಿಯಲ್ಲಿತ್ತು.

ಕಳೆದ ಬಾರಿ ರಾಷ್ಟ್ರಪತಿ ಚುನವಣೆ ನಡೆದಿತ್ತು. ಈ ಸಂದರ್ಭದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮುಗೆ ಬೆಷರತ್​ ಬೆಂಬಲ ನೀಡಿದ್ದರು. ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ SAD ಅಪಸ್ವರ ಎತ್ತಿದೆ. ಆದರೆ ಮೈತ್ರಿ, ಸ್ನೇಹ ಬಂದಾಗ ಅದ್ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಏನ್ ಬೇಕಾದರೂ ಆಗಬಹುದು.

ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ)

ಜಯಂತ್ ಚೌಧರಿ ನೇತೃತ್ವದ RLD ಪಕ್ಷವು, ಉತ್ತರ ಪ್ರದೇಶದ ರಾಜಕಾರಣದಲ್ಲಿ ಮುನ್ನೆಲೆಗೆ ಬರುತ್ತದೆ. 2022 ಮತ್ತು 2009ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಶಾಕ್ ನೀಡಿತ್ತು. ಸದ್ಯದ ಮಾಹಿತಿ ಪ್ರಕಾರ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜೊತೆಗಿನ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ NDA ಕ್ಯಾಂಪ್ ಸೇರಲಿದೆ ಎಂದು ಹೇಳಲಾಗಿದೆ.

ಆರ್​ಎಲ್​ಡಿ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭದ್ರ ಕೋಟೆಗಳನ್ನು ನಿರ್ಮಿಸಿಕೊಂಡಿದೆ. ಒಂದು ವೇಳೆ 2024ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಕ್ತಿ ಮತ್ತಷ್ಟು ಹೆಚ್ಚಲಿದೆ.

ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (RLP)

Rashtriya Loktantrik Party ಇದು ಕೂಡ ಬಿಜೆಪಿ ಹಳೇ ಸ್ನೇಹಿತ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಪಕ್ಷದ ಮುಖ್ಯಸ್ಥ ನಗೌರ್​ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದಾರೆ. ಅದಾಗ್ಯೂ 2020ರಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಎನ್​ಡಿಎ ಒಕ್ಕೂಟದಿಂದ ಹೊರ ಬಂದಿದ್ದರು.

ನವಿನ್ ಪಟ್ನಾಯಕ್

ಒಡಿಶಾದ ನವಿನ್ ಪಟ್ನಾಯಕ್ ಅವರ ಬಿಜು ಜನತಾ ದಳ ಕೂಡ ಎನ್​ಡಿಎ ಮೈತ್ರಿಗೆ ನೀಡಿದ್ದ ಬೆಂಬಲವನ್ನು ವಿಸ್ತರಿಸಿದೆ. ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ನವೀನ್ ಪಟ್ನಾಯಕ್, ಮುರ್ಮುಗೆ ಬೆಂಬಲ ಸೂಚಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಆಡಳಿತದ ಅವಧಿಯಲ್ಲಿ ಬಿಜು ಜನತಾ ದಳ ಎನ್​ಡಿಎ ಒಕ್ಕೂಟಕ್ಕೆ ಜೈ ಅಂದಿತ್ತು.

ಜನತಾ ದಳ (ಸೆಕ್ಯೂಲರ್)

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ದ ಜೆಡಿಎಸ್​, ಫಲಿತಾಂಶ ಮಾತ್ರ ಅಷ್ಟಕಷ್ಟೇ. ವಿಪಕ್ಷಗಳ ಸಭೆ ಬೆಂಗಳೂರಲ್ಲೇ ನಡೆಯುತ್ತಿದ್ದರೂ ಜೆಡಿಎಸ್​ಗೆ ಆಹ್ವಾನ ನೀಡಿಲ್ಲ. ಹೀಗಾಗಿ ಜೆಡಿಎಸ್​ನ ನಡೆ ತೀವ್ರ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೂಡ ಮುಗ್ಗರಿಸಿದೆ. ಹೀಗಾಗಿ ಬಲಿಷ್ಠ ಕಾಂಗ್ರೆಸ್​ ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್​ ಒಗ್ಗೂಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗಾಲೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿ ಪಕ್ಕಾ ಎನ್ನಲಾಗುತ್ತಿದ್ದು, ಆದರೆ ಅಧಿಕೃತವಾದ ಯಾವುದೇ ಸ್ಟೇಟ್​​ಮೆಂಟ್​ ಇನ್ನೂ ಹೊರ ಬಿದ್ದಿಲ್ಲ.

ಹೀಗಿರುವಾಗ ಇವತ್ತು ಜೆಡಿಎಸ್​​ ಸಭೆ ಕೂಡ ಮಾಡಿದ್ದು, ಇವತ್ತು ಮತ್ತು ನಾಳೆ ನಡೆಯುವ ಸಭೆಗೆ ವಿಪಕ್ಷಗಳು ತಮ್ಮನ್ನ ಕರೆದಿಲ್ಲ. ಇತ್ತ, ಎನ್​ಡಿಎ ಒಕ್ಕೂಟ ಕೂಡ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಧಿಕೃತವಾಗಿ ಆಹ್ವಾನ ನೀಡಿಲ್ಲ. ಹೀಗಾಗಿ ಸದ್ಯ ತಟಸ್ಥವಾಗಿರಲು ಜೆಡಿಎಸ್​ ನಿರ್ಧರಿಸಿದೆ ಎಂದು ತಿಳಿಸಿದೆ. ಆದರೆ, ನಿನ್ನೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಜೆಡಿಎಸ್ ನಿರ್ಣಾಯಕ ನಾಯಕ ಹೆಚ್​​ಡಿ ಕುಮಾರಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ರೆಡಿ ಇದ್ದೇವೆ ಅಂತಾ ಪರೋಕ್ಷಗಾಗಿ ಹೇಳಿದ್ದಾರೆ. ದೇವೇಗೌಡರ ಸಿದ್ಧಾಂತ, ಅವರ ರಾಜಕೀಯ ನಂಬಿಕೆಗಳನ್ನು ಬದಿಗಿಟ್ಟು ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದರೂ ಯಾವುದೇ ಅಚ್ಚರಿ ಇಲ್ಲ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Lok Sabha Election: ಹಳೇ ದೋಸ್ತಿಗಳ ಸ್ನೇಹ ಬಯಸಿದ ಎನ್​​ಡಿಎ.. ಮೋದಿ ಒಕ್ಕೂಟಕ್ಕೆ ಹೊಸದಾಗಿ 5 ಮಿತ್ರಪಕ್ಷಗಳ ಬಲ..!?

https://newsfirstlive.com/wp-content/uploads/2023/07/MODI-6.jpg

Load More