newsfirstkannada.com

×

Breaking: 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ RTO ಅಧಿಕಾರಿ..!

Share :

Published November 17, 2023 at 9:05am

    ಲಂಚ ಪಡೆಯುವ ವೇಳೆ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಸಿಬ್ಬಂದಿ

    CC ಪ್ರಮಾಣ ಪತ್ರ ಮಾಡಿ ಕೊಡುವಂತೆ ಕೇಳಿದರೆ ಲಂಚ ಕೇಳಿದ್ದರು

    ಭ್ರಷ್ಟಾಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಿದ SP ಶಶಿಧರ್ ನೇತೃತ್ವದ ತಂಡ

ಬಳ್ಳಾರಿ: 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ RTO ಅಧಿಕಾರಿಯೊಬ್ಬರು ಲೋಕಾಯುಕ್ತರಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಆರ್​ಟಿಒ ಅಧಿಕಾರಿ ಚಂದ್ರಕಾಂತ್ ಗುಡಿಮನಿ ಹಾಗೂ ಏಜೆಂಟ್ ಮಹಮ್ಮದ್ ರಾಜ್ ಸದ್ಯ ಲೋಕಾಯುಕ್ತ ವಶದಲ್ಲಿದ್ದಾರೆ. ಬಳ್ಳಾರಿಯ ಉಮೇಶ್ ಎನ್ನುವರು CC ಪ್ರಮಾಣ ಪತ್ರ ಕೊಡುವಂತೆ ಕೇಳಿದ್ದರು. ಇದಕ್ಕೆ ಭ್ರಷ್ಟಾಧಿಕಾರಿ 15 ಸಾವಿರ ರೂಪಾಯಿ ಲಂಚ ಕೊಡುವಂತೆ ಕೇಳಿದ್ದಾರೆ. ಇದರಿಂದ ಉಮೇಶ್ ಅವರು ಪೋಲ್ ಕಾಲ್ ಆಡಿಯೋ ಸಮೇತ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿ ಚಂದ್ರಕಾಂತ್ ಮತ್ತು ಏಜೆಂಟ್ ಮಹಮ್ಮದ್ ರಾಜ್ ಲಂಚ ಪಡೆಯುತ್ತಿದ್ದರು. ದೂರಿನ ಆಧಾರದ ಮೇಲೆ ಲೋಕಯುಕ್ತ SP ಶಶಿಧರ್ ನೇತೃತ್ವದ ತಂಡ ಟ್ರ್ಯಾಪ್ ಮಾಡಿ ರೆಡ್​ ಹ್ಯಾಂಡ್ ಆಗಿ ಭ್ರಷ್ಟರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ RTO ಅಧಿಕಾರಿ..!

https://newsfirstlive.com/wp-content/uploads/2023/11/BLY_RTO.jpg

Load More