newsfirstkannada.com

ಸರ್ವೆ ಸೂಪರ್ ವೈಸರ್ ಮನೆ ಮೇಲೆ ಲೋಕಾಯುಕ್ತ ದಾಳಿ; 5 ಲಿಕ್ಕರ್ ಲೈಸೆನ್ಸ್, 2.86 ಕೋಟಿ ಹಣ, ಅಕ್ರಮ ಆಸ್ತಿಗಳು ಪತ್ತೆ

Share :

22-08-2023

    ಅಕ್ರಮ ಆಸ್ತಿ ಗಳಿಸಿದ್ದ ಸರ್ವೆ ಸೂಪರ್ ವೈಸರ್​ ಮೇಲೆ ಲೋಕಾಯುಕ್ತರ ಕಣ್ಣು

    14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ ಲೋಕಾಯುಕ್ತರು

    ಕೆ.ಟಿ ಶ್ರೀನಿವಾಸ್ ಮನೆ ಮತ್ತು ಕಚೇರಿ ಮೇಲೆ ದಾಳಿ; ಕೋಟ್ಯಾಂತರ ಆಸ್ತಿ ಪತ್ತೆ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ತುಮಕೂರು ಸೇರಿದಂತೆ 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಕೋಟ್ಯಾಂತರ ಆಸ್ತಿ ಪತ್ತೆಯಾಗಿದೆ.

ಕೆ.ಟಿ ಶ್ರೀನಿವಾಸ್ ಮೂರ್ತಿ ಕೆಆರ್ ಪುರಂ ತಾಲೂಕು ಕಚೇರಿಯಲ್ಲಿ ಸರ್ವೆ ಸೂಪರ್ ವೈಸರ್ ಆಗಿದ್ದು, 5 ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿದ್ದರು. ಹೀಗಾಗಿ ಅವರ ಅಂಧ್ರಳ್ಳಿ ನಿವಾಸ, ಸಹೋದರಿಯ ಹೆಣ್ಣೂರು ನಿವಾಸ, ಸಹೋದರನ ತುಮಕೂರಿನ ನಿವಾಸ, ಪತ್ನಿ ಹೆಸರಿನಲ್ಲಿ ಹೋಟೆಲ್ಸ್, ಬೋರ್ಡಿಂಗ್ ಹೌಸ್​ಗಳ ಮೇಲೂ ದಾಳಿ ಮಾಡಿ ಪರಿಶೀಲಿಸಿದ್ದಾರೆ.

5 ಲಿಕ್ಕರ್ ಲೈಸೆನ್ಸ್

ಲೋಕಾಯುಕ್ತ ದಾಳಿ ವೇಳೆ ಅಚ್ಚರಿಯಯ ಸಂಗತಿಗಳು ಬೆಳಕಿಗೆ ಬಂದಿವೆ. ಶ್ರೀನಿವಾಸ್‌‌ ಓರ್ವರಿಗೆ‌ ಸೇರಿದ 5 ಲಿಕ್ಕರ್ ಲೈಸೆನ್ಸ್ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಕೋಟ್ಯಾಂತರ ಆಸ್ತಿ ಪತ್ತೆಯಾಗಿದೆ. ಇನ್ನು 2.86 ಕೋಟಿ ದಾಳಿ ಮುಂಚೆಯೇ ಪತ್ತೆಯಾಗಿದೆ.

ಇದರ ಜೊತೆಗೆ ಹೆಣ್ಣೂರು ಸಮೀಪ 83 ಲಕ್ಷ ಮೌಲ್ಯದ 50X40 ಅಡಿ ವಿಸ್ತೀರ್ಣ ನಿವೇಶನ. 60 ಲಕ್ಷ ಮೌಲ್ಯದ ನಿರ್ಮಾಣ ಹಂತದ ಕಟ್ಟಡ. ಕೊತ್ತನೂರು ಬಳಿ 10 ಲಕ್ಷ ಮೌಲ್ಯದ 30X32 ಅಡಿ ವಿಸ್ತೀರ್ಣ ನಿವೇಶನ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ವೆ ಸೂಪರ್ ವೈಸರ್ ಮನೆ ಮೇಲೆ ಲೋಕಾಯುಕ್ತ ದಾಳಿ; 5 ಲಿಕ್ಕರ್ ಲೈಸೆನ್ಸ್, 2.86 ಕೋಟಿ ಹಣ, ಅಕ್ರಮ ಆಸ್ತಿಗಳು ಪತ್ತೆ

https://newsfirstlive.com/wp-content/uploads/2023/08/S-T-Srinivas.jpg

Load More