newsfirstkannada.com

ಕೆಜಿಗಟ್ಟಲೇ ಬಂಗಾರ, ಬಗೆದಷ್ಟು ಕೋಟಿ, ಕೋಟಿ ಅಕ್ರಮ; ಭ್ರಷ್ಟ ಅಧಿಕಾರಿಗಳ ಸಂಪತ್ತಿಗೆ ಬೆಚ್ಚಿ ಬಿದ್ದ ಲೋಕಾಯುಕ್ತ ಆಫೀಸರ್ಸ್‌!

Share :

28-06-2023

    ಇಬ್ಬರು ಕೋಟಿ, ಕೋಟಿ ಕುಳಗಳ ಮೇಲೆ ಲೋಕಾಯುಕ್ತ ಭರ್ಜರಿ ಬೇಟೆ

    AEE ಜೆ.ಪಿ ಶೆಟ್ಟಿ ಅವರ ಮನೆಯಲ್ಲಿ1 ಕೆಜಿ 250 ಗ್ರಾಂ ಬಂಗಾರ ಪತ್ತೆ

    ಭೀಮನಗೌಡ ಬಿರಾದಾರ ನಿವಾಸದಲ್ಲಿ ಬಂಗಾರ, ಲಕ್ಷ, ಲಕ್ಷ ನಗದು

ಲೋಕಾಯುಕ್ತ ಅಧಿಕಾರಿಗಳು ಇವತ್ತು ರಾಜ್ಯದ ಹಲವೆಡೆ ಮಿಂಚಿನ ದಾಳಿ ಮಾಡಿದ್ದು, ವಿಜಯಪುರದಲ್ಲಿ ಇಬ್ಬರು ಕೋಟಿ ಕುಳಗಳು ಬಲೆಗೆ ಬಿದ್ದಿದ್ದಾರೆ. ಒಬ್ಬರು ಅಧಿಕಾರಿಗೆ ಈ ಹಿಂದೆಯೂ ರೇಡ್ ಆಗಿದ್ದು 2ನೇ ಬಾರಿ ದಾಳಿ ಮಾಡಲಾಗಿದೆ. ಮತ್ತೊಬ್ಬ ಅಧಿಕಾರಿಯ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಅಕ್ರಮ ಆಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಂ.1 RWS AEE ಜೆ.ಪಿ ಶೆಟ್ಟಿ
ವಿಜಯಪುರದಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಇವತ್ತು ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ. ಇದರಲ್ಲಿ ಮೊದಲನೇಯವರು ಮುದ್ದೇಬಿಹಾಳ RWS AEE ಜೆ.ಪಿ ಶೆಟ್ಟಿ. ಜೆ.ಪಿ ಶೆಟ್ಟಿ ಅವರ ಮನೆಯಲ್ಲಿ 1 ಕೆಜಿ 250 ಗ್ರಾಂ ಬಂಗಾರ, 6 ಫ್ಲಾಟ್, ಮುಧೋಳ, ವಿಜಯಪುರದಲ್ಲಿ ಎರಡು ಅಂತಸ್ತಿನ 1 ಮನೆ, 30 ಸಾವಿರ ನಗದು, ಲಕ್ಸುರಿ ಕಾರುಗಳು ಪತ್ತೆಯಾಗಿದೆ.

ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಜೆ.ಪಿ ಶೆಟ್ಟಿ ಅವರು ಕೋಟಿ, ಕೋಟಿಯ ವೀರ. ಜೆಪಿ ಶೆಟ್ಟಿ ಅವರು 1 ಕೋಟಿಯವರೆಗೆ ಖರ್ಚು ಮಾಡಿ ಮಗಳಿಗೆ ಎಂಬಿಬಿಎಸ್ ಕಲಿಸುತ್ತಿರೋದ್ರಿಂದ ಲೋಕಾ ಅಧಿಕಾರಿಗಳಿಗೆ ಅಕ್ರಮ ಆಸ್ತಿ ಸಂಪಾದನೆ ಶಂಕೆ ವ್ಯಕ್ತವಾಗಿದೆ. ಇಂದು ದಾಳಿಯಲ್ಲೂ 1 ಕೋಟಿ 46 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದೆ. ಲಾಕರ್‌ನಲ್ಲಿ ಅಪಾರ ಬಂಗಾರ ಒಡವೆ, ಹಣ ಇರುವ ಶಂಕೆ ವ್ಯಕ್ತವಾಗಿದ್ದು, ಬೆಳಗಾವಿಯಿಂದ ಕರೆಯಿಸಿ ಲಾಕರ್ ಓಪನ್ ಮಾಡಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

ಕಳೆದ ಏಪ್ರಿಲ್ 2023ರಂದು ಜೆ.ಪಿ ಶೆಟ್ಟಿ ಮೇಲೆ ಲೋಕಾಯುಕ್ತ ದಾಳಿ ಆಗಿತ್ತು. ಈ ವೇಳೆ 1.5 ಕೆಜಿ ಬಂಗಾರ, 30 ಲಕ್ಷ ರೂಪಾಯಿ ಹಣ ಸೀಜ್ ಮಾಡಲಾಗಿತ್ತು. ಅಮಾನತ್ತಿನಲ್ಲಿದ್ದ ಜೆಪಿ ಶೆಟ್ಟಿ ಅವರು ಜಾಮೀನಿನ ಬೇಲ್ ಮೇಲೆ ಹೊರಗೆ ಬಂದಿದ್ರು. ಇವತ್ತು ಮತ್ತೆ ಜೆ.ಪಿ ಶೆಟ್ಟಿ ಮೇಲೆ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಸಾಸನೂರು ಗ್ರಾಮ, ಮುಧೋಳದಲ್ಲಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ನಂ.1 PWD AEE ಭೀಮನಗೌಡ ಬಿರಾದಾರ
ಬಸವನಬಾಗೇವಾಡಿ ಪಿಡಬ್ಲೂಡಿ ಎಇಇ ಭೀಮನಗೌಡ ಬಿರಾದಾರ ಕೂಡ ಇವತ್ತು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇವರ ಮನೆಯಲ್ಲಿ 242 ಗ್ರಾಂ ಬಂಗಾರ,1.98 ಕಿಲೋ ಬೆಳ್ಳಿ 1.78 ಲಕ್ಷ ನಗದು ಪತ್ತೆಯಾಗಿದೆ. 30 ಲಕ್ಷ ಶೇರ್, 5 ಲಕ್ಷ ಬ್ಯಾಂಕ್ ಡಿಪಾಸಿಟ್, ವಿಜಯಪುರದಲ್ಲಿ ಜಮೀನು, ಫ್ಲಾಟ್‌ ಅನ್ನು ಭೀಮನಗೌಡ ಬಿರಾದಾರ ಹೊಂದಿದ್ದಾರೆ ಎನ್ನಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದ ನಿರಂತರ 7 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಬಗೆದಷ್ಟು ಬಯಲಾದ ಇಬ್ಬರು ಅಧಿಕಾರಿಗಳು ಅಕ್ರಮ ಆಸ್ತಿ ದಾಖಲೆಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಭೀಮನಗೌಡ ಬಿರಾದಾರ ಸ್ವಗ್ರಾಮ ಮಸಬನಾಳ ಗ್ರಾಮದಲ್ಲಿ ಹೊಸ ಮನೆ ಕಟ್ಟುತ್ತಿರೋ ಮಾಹಿತಿ ಲಭ್ಯವಾಗಿದೆ. ಅಪಾರ ಪ್ರಮಾಣದಲ್ಲಿ ಬಂಗಾರ ಹೊಂದಿರುವ ಭೀಮನಗೌಡ ಬಿರಾದಾರ, ಅಳಿಯ ಶ್ರೀಕಾಂತ್ ಅಂಗಡಿ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರೋದು ಶೋಧ ವೇಳೆ ಬಯಲಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೆಜಿಗಟ್ಟಲೇ ಬಂಗಾರ, ಬಗೆದಷ್ಟು ಕೋಟಿ, ಕೋಟಿ ಅಕ್ರಮ; ಭ್ರಷ್ಟ ಅಧಿಕಾರಿಗಳ ಸಂಪತ್ತಿಗೆ ಬೆಚ್ಚಿ ಬಿದ್ದ ಲೋಕಾಯುಕ್ತ ಆಫೀಸರ್ಸ್‌!

https://newsfirstlive.com/wp-content/uploads/2023/06/Vijayapura-Loka-Raid.jpg

Load More