newsfirstkannada.com

ತಹಶೀಲ್ದಾರ್ ಮಾಡಿದ್ದ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು; ಐಷಾರಾಮಿ ಕಾರ್​​-ಬೈಕ್​​,​ ಕೋಟಿಗಟ್ಟಲೇ ಹಣ ಸೀಜ್​​​

Share :

28-06-2023

    ತಹಶೀಲ್ದಾರ್ ಮಾಡಿದ್ದ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು

    4 ಐಷಾರಾಮಿ ಕಾರ್, 4 ದುಬಾರಿ ​​ಬೈಕ್ ಮತ್ತು​ ಕೋಟಿಗಟ್ಟಲೇ ಹಣ ಸೀಜ್​​​..!

    ಬೆಳಿಗ್ಗೆಯೇ ದಿಢೀರ್​ ದಾಳಿ ಮಾಡಿ ತಹಶೀಲ್ದಾರ್​ಗೆ ಶಾಕ್​ ಕೊಟ್ಟ ಅಧಿಕಾರಿಗಳು

ಬೆಂಗಳೂರು:  ಇವತ್ತು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಕಾಲಿಂಗ್ ಬೆಲ್ ಒತ್ತಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳನ್ನ ಬಡಿದೆಬ್ಬಿಸಿದ್ದಾರೆ. ತಹಶೀಲ್ದಾರ್ ಅಜಿತ್ ರೈ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಶಾಕ್​​ ಆಗಿದ್ದಾರೆ. 50 ಲಕ್ಷದ ಲೀಸ್ ಮನೆಯಲ್ಲಿ 1368 ಸೀರಿಸ್​ನ ಐಷಾರಾಮಿ ಕಾರ್ ಮತ್ತು ಬೈಕ್​ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ತಹಶೀಲ್ದಾರ್ ಅಜಿತ್ ರೈ ಮನೆಯಲ್ಲಿ ಸಿಕ್ಕ ಕಾರ್, ಬೈಕ್ ನೋಡಿ ಖುದ್ದು ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಜಿತ್ ಹಾಗೂ ಆಪ್ತರ ಮನೆಯಲ್ಲಿ ನಾಲ್ಕು ಫಾರ್ಚೂನರ್ ಹಾಗೂ ನಾಲ್ಕು ಕಾರ್​​ ಸಿಕ್ಕಿವೆ. ಸಹಕಾರನಗರದಲ್ಲಿರುವ ನಿವಾಸದ ಬೇಸ್​ಮೆಂಟ್​ನಲ್ಲಿ ಮುಂದೆ ಫಾರ್ಚೂನರ್ ಹಾಗೂ ಹಿಂದೆ ಥಾರ್ ನಿಲುಗಡೆ ಮಾಡಲಾಗಿತ್ತು. ಇದರ ಜೊತೆ ಜೊತೆಗೆ ಮೂರು ಐಷಾರಾಮಿ ಬೈಕ್​ಗಳು ಸಹ ಅಜಿತ್ ಮನೆಯಲ್ಲಿ ಪತ್ತೆಯಾಗಿವೆ. ಬೈಕ್​ಗಳಿಗೂ ಸಹ 1368 ನಂಬರ್​ನ ಸಿರೀಸ್ ಪಡೆದುಕೊಂಡಿದ್ದಾರೆ.

ಬಸವೇಶ್ವರನಗರದಲ್ಲಿರೋ ಅಜಿತ್ ಸ್ನೇಹಿತ ಗೌರವ್ ಮನೆಯಲ್ಲೂ 1368 ನಂಬರಿನ ಫಾರ್ಚೂನರ್ ಹಾಗೂ ಥಾರ್ ಜೀಪ್ ಪತ್ತೆಯಾಗಿದೆ. ಅಜಿತ್ ಸಹೋದರನ ಚಂದ್ರ ಲೇಔಟ್ ಮನೆಯಲ್ಲೂ ಸಹ 1368 ಸೀರಿಸ್ ನ ಫಾರ್ಚೂನರ್ ಹಾಗು ಥಾರ್ ಪತ್ತೆಯಾಗಿದೆ. ಒಟ್ಟು ನಾಲ್ಕು ಕಡೆ ಹೀಗೆ ಒಂದೇ ನಂಬರಿನ ಕಾರುಗಳನ್ನು ಕಂಡ ಲೋಕಾಯುಕ್ತ ಅಧಿಕಾರಿಗಳು ಶಾಕ್​ ಆಗಿದ್ದಾರೆ. ಸದ್ಯ ಪತ್ತೆಯಾಗಿದ್ದ ಎಲ್ಲಾ ಕಾರು ಹಾಗೂ ಬೈಕ್​ಗಳನ್ನು ಅಧಿಕಾಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಹಶೀಲ್ದಾರ್ ಮಾಡಿದ್ದ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು; ಐಷಾರಾಮಿ ಕಾರ್​​-ಬೈಕ್​​,​ ಕೋಟಿಗಟ್ಟಲೇ ಹಣ ಸೀಜ್​​​

https://newsfirstlive.com/wp-content/uploads/2023/06/lokayutha.jpg

Load More