newsfirstkannada.com

ಕೃಷಿ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಲಕ್ಷ, ಲಕ್ಷ ಕ್ಯಾಶ್‌; ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸಿದ ಲೋಕಾಯುಕ್ತ ರೇಡ್‌!

Share :

28-06-2023

    ಜಂಟಿ ನಿರ್ದೇಶಕಿ ಮನೆಯಲ್ಲಿ ಪತ್ತೆ ಆಗಿದ್ದು ಎಷ್ಟು ಲಕ್ಷ ರೂಪಾಯಿ?

    ಚಿನ್ನಾಭರಣಗಳು, 2 ಲಾಕರ್ ಸೇರಿ ಇನ್ನು ಪರಿಶೀಲನೆ ಮುಂದುವರಿಕೆ

    ಬೆಳಗ್ಗೆ ಚೇತನಾ ಪಾಟೀಲ ಅಧಿಕಾರಿ ಮನೆಯಲ್ಲಿ 2 ಆಮೆಗಳು ಪತ್ತೆ

ಬಾಗಲಕೋಟೆ: ಇಂದು ರಾಜ್ಯದ 20ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬಾಗಲಕೋಟೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​ ಅವರ ನಗರದ ವಿದ್ಯಾಗಿರಿಯಲ್ಲಿನ ನಿವಾಸದ ಮೇಲೆ ರೇಡ್ ಮಾಡಲಾಯಿತು. ಈ ವೇಳೆ 32 ಲಕ್ಷ ರೂಪಾಯಿ ನಗದು ಸಿಕ್ಕಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಲೋಕಾ ಅಧಿಕಾರಿಗಳಿಂದ ಭ್ರಷ್ಟರ ಬೇಟೆ.. ಕಳಂಕಿತ ಮಹಿಳಾ ಅಧಿಕಾರಿ ಮನೆಯಲ್ಲಿ 2 ಆಮೆಗಳು ಪತ್ತೆ..!

ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ಸಂಬಂಧ ಮಾತನಾಡಿದ ಲೋಕಾಯುಕ್ತ ಎಸ್​ಪಿ ಅನಿತಾ ಹರದನ್​ವರ, ಕೃಷಿ ಇಲಾಖೆ ಅಧಿಕಾರಿಯಾದ ಚೇತನಾ ಪಾಟೀಲ್ ಮನೆಯಲ್ಲಿ ಸದ್ಯ 32 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಮನೆಯಲ್ಲಿ ಚಿನ್ನಾಭರಣಗಳು, 2 ಲಾಕರ್ ಸಹ ಸಿಕ್ಕಿವೆ. ಇನ್ನೂ ಈ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ. ಚೇತನಾ ಪಾಟೀಲ್ ಮನೆಯಲ್ಲಿ ಬೆಳಗ್ಗೆ 2 ಆಮೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಅರಣ್ಯಾಧಿಕಾರಿ ಸುರೇಶ ಸಂಕನಗೌಡರ್ ಕೂಡ ಆಗಮಿಸಿದ್ದರು.

ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ಬೀಳಗಿ ಕೃಷಿ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣ ಶಿರೂರ ನಿವಾಸದ ಮೇಲೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಲೋಕಾಯುಕ್ತರು ರೇಡ್​ ಮಾಡಲು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಇನ್ನೂ ಪರಿಶೀಲನೆ ಕಾರ್ಯ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೃಷಿ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಲಕ್ಷ, ಲಕ್ಷ ಕ್ಯಾಶ್‌; ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸಿದ ಲೋಕಾಯುಕ್ತ ರೇಡ್‌!

https://newsfirstlive.com/wp-content/uploads/2023/06/BGK_SUCHETHANA_RAID.jpg

Load More