newsfirstkannada.com

ಭ್ರಷ್ಟರ ಬೇಟೆಯಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿದೆ ಲಕ್ಷ ಲಕ್ಷ ದುಡ್ಡು.. ಎಣಿಸಲಾಗದಷ್ಟು ಚಿನ್ನ, ಬೆಳ್ಳಿ, ನಗದು ಸೀಜ್..!

Share :

28-06-2023

    ಕಲಬುರಗಿ, ಯಾದಗಿರಿ, ಬೆಳಗಾವಿಯ ಅಧಿಕಾರಿಗಳ ಮನೆ ಮೇಲೆ ದಾಳಿ

    ದಾಳಿ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು

    ಹೆಸ್ಕಾಂ‌ನ ಇಂಜಿನಿಯರ್ ಶೇಖರ್​ ಬಹುರೂಪಿ ನಿವಾಸದ ಮೇಲೆ ರೇಡ್

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಗಿಳಿದಿದ್ದು ರಾಜ್ಯದದ್ಯಾಂತ ಕೆಲವು ಜಿಲ್ಲೆಗಳಲ್ಲಿನ ಭ್ರಷ್ಟ ಅಧಿಕಾರಿಗಳ ಬಾಗಿಲು ಬಡಿದು ಶಾಕ್​ ಕೊಟ್ಟಿದ್ದಾರೆ. ರೇಡ್​ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸದಲ್ಲಿ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಆಸ್ತಿ ಬಗ್ಗೆ ಕುರಿತ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಲಬುರಗಿ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಯ ಯಾವ್ಯಾವ ಅಧಿಕಾರಿಗಳ ನಿವಾಸದ ಮೇಲೆ ರೇಡ್​ ನಡೆದಿದೆ ಎಂದು ನೋಡುವುದಾದರೆ..

ಕಲಬುರಗಿ: ಟೌನ್ ಪ್ಲಾನಿಂಗ್ ಅಧಿಕಾರಿ ಶರಣಪ್ಪ ಮಡಿವಾಳ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಲಬುರಗಿ ಹೊರವಲಯ ನಾಗನಹಳ್ಳಿ ರಸ್ತೆಯಲ್ಲಿರುವ ಫಾಮ್​ ಹೌಸ್ ಮೇಲೂ ಕೂಡ ರೇಡ್​ ಮಾಡಲಾಗಿದೆ. ಸದ್ಯ ರಾಯಚೂರಿನ ಸಿಂಧನೂರಿನಲ್ಲಿ ಶರಣಪ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಿಂಧನೂರು, ಕಲಬುರಗಿ 2 ಕಡೆ ಏಕಕಾಲದಲ್ಲಿ ಲೋಕಾಯುಕ್ತ ಎಸ್​ಪಿ ಕರ್ನೂಲ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಶರಣಪ್ಪ ಅವರು ಮೂಲತಹ ಕಲಬುರಗಿಯ ಆಳಂದ ತಾಲೂಕಿನವರಾಗಿದ್ದಾರೆ.

ಯಾದಗಿರಿ

PWD ಇಲಾಖೆಯ ಆರೋಗ್ಯ ಮತ್ತು ಕುಟುಂಬ ವಿಭಾಗದ ಎಇಇ ಅಧಿಕಾರಿಯಾಗಿರುವ ವಿಶ್ವನಾಥ ರೆಡ್ಡಿಯವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿಗೆ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ನಗರದ ಗ್ರೀನ್ ಸಿಟಿಯಲ್ಲಿನ ವಿಶ್ವನಾಥ ರೆಡ್ಡಿಯ ಬೃಹತ್ ಬಂಗಲೆ ಮತ್ತು ಕಚೇರಿ ಮೇಲೆ ರೇಡ್​ ಮಾಡಲಾಗುತ್ತಿದೆ. ಒಬ್ಬರು ಡಿವೈಎಸ್​ಪಿ, ಇಬ್ಬರು ಪಿಎಸ್ಐ ಹಾಗೂ 8 ಜನ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗುತ್ತಿದೆ.

ಬೆಳಗಾವಿ

ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ಹೆಸ್ಕಾಂ‌ನ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್​ ಬಹುರೂಪಿ ನಿವಾಸ ಸೇರಿ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಿಲ್ಲೆಯ ರಾಮತೀರ್ಥ ನಗರದಲ್ಲಿನ ಮನೆ ಮೇಲೆ ದಾಳಿ ಮಾಡಲಾಗಿದೆ. ಇವರು ಪ್ರಸ್ತುತ ಬಳ್ಳಾರಿಯ ಹರಪನಹಳ್ಳಿಯಲ್ಲಿ ‌ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ 2019ರಲ್ಲಿ ಅಥಣಿಯಲ್ಲಿ ಕೆಲಸ ಮಾಡುವಾಗ ಶೇಖರ್ ಬಹುರೂಪಿ ಅಮಾನತುಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭ್ರಷ್ಟರ ಬೇಟೆಯಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿದೆ ಲಕ್ಷ ಲಕ್ಷ ದುಡ್ಡು.. ಎಣಿಸಲಾಗದಷ್ಟು ಚಿನ್ನ, ಬೆಳ್ಳಿ, ನಗದು ಸೀಜ್..!

https://newsfirstlive.com/wp-content/uploads/2023/06/KLB_LOKA_RAID.jpg

Load More