newsfirstkannada.com

ಅಕ್ರಮ ಪ್ರಾಪರ್ಟಿ; ರೈಡ್​​ ವೇಳೆ ಭ್ರಷ್ಟರ ಆಸ್ತಿ ಕಂಡು ಲೋಕಾಯುಕ್ತ ಫುಲ್​​​ ಶಾಕ್ ​​

Share :

18-08-2023

  ಲೋಕಾಯುಕ್ತ ಅಧಿಕಾರಿಗಳಿಂದ ಭ್ರಷ್ಟರ ಬೇಟೆ

  ಸರ್ಕಾರಿ ಅಧಿಕಾರಿಗಳ ಆಸ್ತಿ ಕಂಡು ಫುಲ್​ ಶಾಕ್​

  ಎಲ್ಲೆಲ್ಲಿ ಎಷ್ಟು ಕೋಟಿ ದುಡ್ಡು, ಚಿನ್ನ, ಆಸ್ತಿ ಸಿಕ್ತು ಗೊತ್ತಾ?

ಬೆಂಗಳೂರು: ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬೇಟೆಯಾಡ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. ಅದ್ರಂತೆ ಗುರುವಾರ ಬೆಂಗಳೂರಿನಲ್ಲಿ ಇವರ ಟಾರ್ಗೆಟ್​ ಆದವರು ನಾಲ್ವರು. ರೆವೆನ್ಯೂ ಇನ್ಸ್​ಪೆಕ್ಟರ್ ನಟರಾಜ್‍, ದೇವನಹಳ್ಳಿ ತಹಶಿಲ್ದಾರ್ ಶಿವರಾಜ್, ಚಿಕ್ಕಜಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮೀಪತಿ, ಬಿಬಿಎಂಪಿ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಭಾರತಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೈಡ್​ ನಡೆಸಿದ್ದಾರೆ. ಭ್ರಷ್ಟಾಚಾರದ ದೂರು ದಾಖಲಾದ ಹಿನ್ನೆಲೆ ನಾಲ್ವರಿಗೆ ಸಂಬಂಧಪಟ್ಟ 10 ಕಡೆ ದಾಳಿ ಮಾಡಲಾಗಿದೆ.

ಭವ್ಯ ಬಂಗಲೆ ಹೊಂದಿರೋ ಆರ್​ಐ ನಟರಾಜ್​

ರಾಜನಂತೆ ಲಕ್ಷುರಿ ಜೀವನ ನಡೆಸ್ತಿರೋ ಮಹದೇವಪುರ ವಲಯದ ರೆವೆನ್ಯೂ ಇನ್ಸ್​​ಪೆಕ್ಟರ್​ ನಟರಾಜ್​ ಅವರ ಬನಶಂಕರಿಯ ಅವಲಹಳ್ಳಿಯ ಮನೆ ಮತ್ತು ಕನಕಪುರದ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈತ ​ಆಗಸ್ಟ್ 4 ರಂದು 79 ಫ್ಲ್ಯಾಟ್ಸ್​​ಗೆ ಖಾತೆ ಮಾಡಲು 5 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ರು. ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಬೆಂಗಳೂರಿನ ಮನೆ ಮತ್ತು ರಾಮನಗರದಲ್ಲಿರುವ ಬಂಗಲೆ ಮತ್ತು ತೋಟದಲ್ಲಿ ಪರಿಶೀಲನೆ ಮಾಡಿದ್ರು.

ಹಣ ಕೊಟ್ರೆ ಅಕ್ರಮ ಖಾತೆ ಮಾಡಿಕೊಡೋ ತಹಶೀಲ್ದಾರ್​

ಇನ್ನು ಎರಡನೆಯದಾಗಿ ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ವಿರುದ್ಧ ದೇವನಹಳ್ಳಿ ತಾಲೂಕಿನಲ್ಲಿ ಅಕ್ರಮವಾಗಿ ಖಾತೆ ಹಾಗೂ ಸರ್ಕಾರಿ ಜಮೀನು ಪರಭಾರೆ‌ ಮಾಡ್ತಿದ್ದಾರೆ ಅಂತ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ರು. ಏರ್ಪೋಟ್ ಟೋಲ್​​​ ಕನ್ನಮಂಗಲ ಬಳಿಯ ಒಜೋನ್ ಅರ್ಬನಾದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ತಹಶಿಲ್ದಾರ್ ಮನೆಯಲ್ಲಿದ್ದ ದಾಖಲೆಗಳನ್ನ ಪರಿಶೀಲನೆ ಮಾಡಿದ್ರು. ಜಮೀನು ಹಾಗೂ ಸೈಟ್ ಪತ್ರಗಳು ಮತ್ತು 60 ಸಾವಿರ ಹಣ ಪತ್ತೆಯಾಗಿದ್ದು ಲೋಕಾಯುಕ್ತ ಎಸ್ಪಿ ಅಶೋಕ್ ಕೂಡಾ ಶಿವರಾಜ್​ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆದರು.

ಅರ್ಧ ಕೆಜಿ ಚಿನ್ನ ಇಟ್ಟಿರೋ ಎಕ್ಸಿಕ್ಯೂಟಿವ್​ ಇಂಜಿನಿಯರ್​

ಮೂರನೆಯದಾಗಿ ಬಿಬಿಎಂಪಿ ಎಕ್ಸಿಕ್ಯೂಟಿವ್​ ಇಂಜಿನಿಯರ್​​ ಭಾರತಿ ಅವರ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಬಿಎಂಪಿ EE ಆಗಿದ್ರು ದಾವಣಗೆರೆ, ಹುಬ್ಬಳ್ಳಿ ಧಾರವಾಡ ಪಾಲಿಕೆಗಳಲ್ಲೆ ಹೆಚ್ಚು ಕಾಲ ಕೆಲಸ ನಿರ್ವಹಿಸಿದ್ದಾರೆ. ಇವರ ವಿರುದ್ಧ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿರುವ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಕೆ. ಮಹೇಶ್ ಮತ್ತು ಅವರ ಪತ್ನಿ ಬಿಬಿಎಂಪಿ ಎಇ ಭಾರತಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಬೆಂಗಳೂರು ಮತ್ತು ಚಿತ್ರದುರ್ಗ ಎರಡೂ ಕಡೆ ದಾಳಿ ನಡೆದಿದ್ದು ದಾಳಿಯ ವೇಳೆ 15 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ.

ಮಾಜಿ ಅಧ್ಯಕ್ಷನ ಮೇಲೆ ಅಕ್ರಮ ಆಸ್ತಿ ಆರೋಪ

ಇನ್ನು ಕಡೆಯದಾಗಿ ಚಿಕ್ಕಜಾಲ ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಿಪತಿ ಮನೆ ಪಾರ್ಮ ಹೌಸ್ ಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳು ಅವರಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ತಾಲೂಕಿನ ಕೊಡೂರು ಗ್ರಾಮದ ಬಳಿ ಇರುವ ಪಾರ್ಮ್ ಹೌಸ್. ಪತ್ನಿ ಆರತಿ ಹೆಸರಿನಲ್ಲಿ ನಾಲ್ಕು ಎಕರೆ ಇರುವ ಜಮೀನು, ನಿರ್ಮಾಣ ಹಂತದ ತೋಟದ ಮನೆ ಪರಿಶೀಲನೆ ಮಾಡಿದ್ದಾರೆ.

ಅದೇನೇ ಇರ್ಲಿ ಬಂದ ದೂರುಗಳ ಹಿನ್ನೆಲೆ ದಾಳಿ ಮಾಡಿರೋ ಅಧಿಕಾರಿಗಳು ಇವರ ವಿರುದ್ಧ ಕೊಡೋ ರಿಪೋರ್ಟ್​ನತ್ತ ಎಲ್ಲರ ಚಿತ್ತ ಇರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ಪ್ರಾಪರ್ಟಿ; ರೈಡ್​​ ವೇಳೆ ಭ್ರಷ್ಟರ ಆಸ್ತಿ ಕಂಡು ಲೋಕಾಯುಕ್ತ ಫುಲ್​​​ ಶಾಕ್ ​​

https://newsfirstlive.com/wp-content/uploads/2023/08/Raid-1.jpg

Load More