newsfirstkannada.com

ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ; ಅಬ್ಬಬ್ಬಾ! 50 ಅಲ್ಲ, 100 ಅಲ್ಲ, ಸಿಕ್ಕಿದ್ದು ಎಷ್ಟು ಕೋಟಿ?

Share :

29-06-2023

  ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾದ ಲೋಕಾಯುಕ್ತ ಅಧಿಕಾರಿಗಳು

  ರಾಜ್ಯಾದ್ಯಂತ 10ಕ್ಕೂ ಹೆಚ್ಚು ಕಡೆಗಳಲ್ಲಿ ಭಷ್ಟರ ಭರ್ಜರಿ ಬೇಟೆ

  ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಶಾಕ್ ಕೊಟ್ಟ ಲೋಕಾ!​

ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾದ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಭ್ರಷ್ಟರಿಗೆ ಶಾಕ್​ ಕೊಟ್ಟಿದ್ದಾರೆ. ರಾಜ್ಯದ 10ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದು ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೋಟಿ ಕೋಟಿ ಹಣ ಪತ್ತೆಯಾಗುವ ಜೊತೆಗೆ ಚಿನ್ನಾಭರಣವನ್ನೂ ಸೀಜ್ ಮಾಡಲಾಗಿದೆ.

ಲಕ್ಷ ಲಕ್ಷ ಹಣವನ್ನು ಅಕ್ರಮವಾಗಿ ಗುಳುಂ ಮಾಡಿದ್ದ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ಶಾಕ್​ ಕೊಟ್ಟಿದೆ. ರಾಜ್ಯಾದ್ಯಂತ ಇಂಚಿಂಚೂ ಬಿಡದೆ ದುಡ್ಡು ಮಾಡಿದ್ದ ನುಂಗಣ್ಣರಿಗೆ ಉಗುಳು ನುಂಗುವಂತೆ ಮಾಡಿದೆ. ಅಗತ್ಯಕ್ಕಿಂತಲೂ ಜಾಸ್ತಿಯಾಗಿ ಸ್ವಾಹಾ ಮಾಡಿದ್ದ ಹಣವನ್ನ ಹೊರಗೆಡವಿದೆ. ಈ ವೇಳೆ ಒಬ್ಬೊಬ್ಬರ ಬಳಿಯೂ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ನುಂಗಣ್ಣರ ಜನ್ಮ ಜಾಲಾಡಿದ ಲೋಕಾಯುಕ್ತ ಇಲಾಖೆ

ಬಾಗಲಕೋಟೆಯಲ್ಲಿ ಕೃಷಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದ್ಯಾಗಿರಿಯಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​ ಮನೆ ಮೇಲೆ ರೇಡ್ ಮಾಡಲಾಗಿದ್ದು, ಈ ವೇಳೆ 32 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇನ್ನು ಹಣದ ಜೊತೆಗೆ 30ಕ್ಕೂ ಹೆಚ್ಚು ವ್ಯಾನಿಟಿ ಬ್ಯಾಗ್​ಗಳು, ಚಿನ್ನಾಭರಣ ಕೂಡ ಸಿಕ್ಕಿದೆ. ಅಷ್ಟೇ ಅಲ್ಲ ಎರಡು ಲಾಕರ್ ಸಹ ಸಿಕ್ಕಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಚೇತನಾ ಪಾಟೀಲ್​ ಮನೆಯಲ್ಲಿ ಎರಡು ಆಮೆಗಳು ಕೂಡ ಪತ್ತೆಯಾಗಿವೆ.

ವಿಜಯಪುರದಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಪತ್ತೆ

ಇನ್ನು ವಿಜಯಪುರದ ಭ್ರಷ್ಟ ಅಧಿಕಾರಿಗಳಿಗೂ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ನೀರು ಸರಬರಾಜು ಇಲಾಖೆಯ ಎಇಇ ಜೆ.ಪಿ ಶೆಟ್ಟಿ ಕೋಟಿ ವೀರನಾಗಿದ್ದು ಕೋಟಿ ಕೋಟಿ ಅಕ್ರಮ ಆಸ್ತಿ ಸಂಪಾದನೆಯ ದಾಖಲೆಗಳು ಪತ್ತೆಯಾಗಿವೆ. 1.5 ಕೆಜಿ ಬಂಗಾರ, 1.46 ಕೋಟಿ ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿವೆ. ಇದರ ಜೊತೆಗೆ ವಿಜಯಪುರದ PWD ಜೆ.ಇ ಭೀಮನಗೌಡ ಮನೆ ಹಾಗೂ ಸಂಬಂಧಿ ಶ್ರೀಕಾಂತ್ ಅಂಗಡಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು. ದಾಳಿ ವೇಳೆ 30 ಲಕ್ಷ ಶೇರ್ ಹೂಡಿಕೆ ದಾಖಲೆಗಳು ಪತ್ತೆಯಾಗಿವೆ. ಅಲ್ಲದೇ ವಿವಿಧ ಬ್ಯಾಂಕ್​ನಲ್ಲಿ 5.50 ಲಕ್ಷ ಜಮೆ ಹಾಗೂ ಇತರ ದಾಖಲೆಗಳುನ್ನು ಜಪ್ತಿ ಮಾಡಲಾಗಿದೆ.

ಕೊಡಗಿನಲ್ಲಿ 14 ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಣ ಪತ್ತೆ

ಕೊಡಗಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಧಿಕಾರಿ ಬಶೀರ್ ಮನೆ ಜೊತೆಗೆ ಆತನ‌ ಸಹೋದರನ ಮನೆ ಮೇಲೂ ದಾಳಿ ಮಾಡಿ ಮನೆ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಬಶೀರ್ ಮನೆಯಲ್ಲಿ 14 ಲಕ್ಷಕ್ಕೂ ಅಧಿಕ ಮೊತ್ತದ ನಗದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ.

ಕಲಬುರಗಿಯ ಟೌನ್ ಪ್ಲಾನಿಂಗ್ ಅಧಿಕಾರಿ ಕೋಟಿ ಕುಬೇರ

ಕಲಬುರಗಿಯಲ್ಲಿ ಟೌನ್ ಪ್ಲಾನಿಂಗ್ ಅಧಿಕಾರಿ ಕೋಟಿ ಕುಬೇರನಾಗಿದ್ದಾರೆ. ನಾಗನಳ್ಳಿ- ಖಣದಾಳ ರಸ್ತೆಯಲ್ಲಿ ಶರಣಪ್ಪ ಮಡಿವಾಳ್​ರ​ 11 ಎಕರೆಯ ಬೃಹತ್ ತೋಟದಲ್ಲಿ ಫಾರ್ಮ್ ಹೌಸ್ ನೋಡಿ ಸ್ವತಃ ಲೋಕಾಯುಕ್ತವೇ ಶಾಕ್​ ಆಗಿದೆ. ಈ ಫಾರ್ಮ್​ಹೌಸ್​ನಲ್ಲಿ ಎರಡು ಅಂತಸ್ತಿನ ಭವ್ಯ ಬಂಗಲೆ, ಎಕರೆಗಟ್ಟಲೆ ಮಾವು, ಸೀಬೆ ಸೇರಿದಂತೆ ಇತರೆ ಹಣ್ಣುಗಳ ತೋಟ, ಸುತ್ತಮುತ್ತ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ದಾಳಿ ವೇಳೆ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

ರಾಯಚೂರಿನಲ್ಲಿ 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ, ₹13 ಲಕ್ಷ ಪತ್ತೆ

ರಾಯಚೂರಿನ ನಗರ ಮತ್ತು ಗ್ರಾಮೀಣ ಪ್ರಾಧಿಕಾರದ ಅಧಿಕಾರಿ ಶರಣಪ್ಪ ಮಡಿವಾಳ ಮನೆ ಮೇಲೂ ಲೋಕಾ ದಾಳಿ ಮಾಡಿದೆ. ಈ ವೇಳೆ ಮನೆಯಲ್ಲಿ‌ 1 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಹಾಗೂ 13 ಲಕ್ಷ ನಗದು ಪತ್ತೆಯಾಗಿದೆ. ಇನ್ನು ರಾಯಚೂರಿನ PWD ಎಇಇ ಪ್ರಕಾಶ್ ಮನೆಯಲ್ಲಿಯೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಪತ್ತೆಯಾಗಿದೆ.

ಇದರ ಜೊತೆಗೆ ಕೋಲಾರದ ಕೆ.ಆರ್.ಡಿ‌.ಎಲ್. ಎಇಇ ಕೋದಂಡರಾಮಯ್ಯ ಮನೆ ಮೇಲೂ ದಾಳಿ ನಡೆದಿದೆ. ತುಮಕೂರಿನ ಕೃಷಿ ಇಲಾಖೆ ಅಧಿಕಾರಿ ಜೆ.ಡಿ.ರವಿ ಮನೆ ಹಾಗೂ ಫಾರಂ ಹೌಸ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿಯೂ ಹೆಸ್ಕಾಂಂ‌ನ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ ಬಹುರೂಪಿ ಮನೆ ಸೇರಿ ರಾಜ್ಯಾದ್ಯಂತ ಹಲವು ಭ್ರಷ್ಟರ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಚಳಿ ಬಿಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ; ಅಬ್ಬಬ್ಬಾ! 50 ಅಲ್ಲ, 100 ಅಲ್ಲ, ಸಿಕ್ಕಿದ್ದು ಎಷ್ಟು ಕೋಟಿ?

https://newsfirstlive.com/wp-content/uploads/2023/06/Money-4.jpg

Load More