newsfirstkannada.com

×

ಕ್ರೆಡಿಲ್​ನ ಎಇಇ, ಕೃಷಿ ಇಲಾಖೆಯ ಜೆಡಿ ಅಧಿಕಾರಿಯ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್​

Share :

Published June 28, 2023 at 9:51am

    ಲೋಕಾಯುಕ್ತ SP ಉಮೇಶ್ ನೇತೃತ್ವದ 10 ಜನರ ತಂಡದಿಂದ ರೇಡ್

    ಎಇಇ ಕೋದಂಡರಾಮಯ್ಯ, ಜೆಡಿ ಕೆ.ಹೆಚ್​ ರವಿ ನಿವಾಸದ ಮೇಲೆ ದಾಳಿ

    ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಗಂಗಾಧರ್​ಗೂ ಶಾಕ್​

ರಾಜ್ಯದ್ಯಾಂತ ಲೋಕಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬೆಳಗ್ಗೆನೇ ಬಿಸಿ ಮುಟ್ಟಿಸಿದ್ದಾರೆ. ರೇಡ್​ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಆಸ್ತಿ ಬಗ್ಗೆ ಕುರಿತ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿದ್ದಾರೆ. ಇನ್ನು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ಮಾಡುತ್ತಿದ್ದಾರೆ.

ಕೋಲಾರ: ತುಮಕೂರು ಕ್ರೆಡಿಲ್ ಎಇಇ ಆಗಿರುವ ಕೋದಂಡರಾಮಯ್ಯ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ನಗರದ ಕುವೆಂಪು ನಗರದ ಮನೆ ಸೇರಿ ಒಟ್ಟು 5 ಕಡೆ ಕೋಲಾರ ಲೋಕಾಯುಕ್ತ ಎಸ್​ಪಿ ಉಮೇಶ್ ನೇತೃತ್ವದಲ್ಲಿ 10 ಜನ ತಂಡದಿಂದ ರೇಡ್ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಕೋದಂಡರಾಮಯ್ಯರ ಮನೆ, ಕಾಂಪ್ಲೆಕ್ಸ್, ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಸಾಗರ ಮನೆ ಹಾಗೂ ತುಮಕೂರಿನ ಕಚೇರಿ ಮೇಲೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತುಮಕೂರು: ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಜೆಡಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಹೆಚ್​ ರವಿ ಅವರ ನಿವಾಸ ಹಾಗೂ ಫಾಮ್​ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಇತ್ತೀಚೆಗಷ್ಟೇ ರವಿಯವರು ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿದ್ದರು. ಹೀಗಾಗಿ ತುಮಕೂರಿನ ಶಂಕರಪುರದ ನಿವಾಸದಲ್ಲಿ ವಾಸವಾಗಿದ್ದರು. ರಾಮನಗರದ ಫಾಮ್​ ಹೌಸ್ ಮೇಲೆ ರೇಡ್ ಮಾಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

ಚಿಕ್ಕಮಗಳೂರು: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ರೇಡ್​ ಮಾಡುತ್ತಿದೆ. ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಗಂಗಾಧರ್ ಅವರ ಜಯನಗರ ಬಡಾವಣೆಯಲ್ಲಿನ ಮನೆ ಸೇರಿ ಏಕ ಕಾಲದಲ್ಲಿ ರಾಮನಹಳ್ಳಿಯಲ್ಲಿನ ಪೆಟ್ರೋಲ್ ಬಂಕ್, ನಿರ್ಮಾಣ ಹಂತದ ರೆಸಾರ್ಟ್ ಹಾಗೂ ನಿರ್ಮಿತಿ ಕೇಂದ್ರದ ಕಚೇರಿ ಮೇಲೂ ರೇಡ್​ ಮಾಡಲಾಗಿದೆ. ಡಿವೈಎಸ್​ಪಿ ತಿರುಮಲೇಶ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರೆಡಿಲ್​ನ ಎಇಇ, ಕೃಷಿ ಇಲಾಖೆಯ ಜೆಡಿ ಅಧಿಕಾರಿಯ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್​

https://newsfirstlive.com/wp-content/uploads/2023/06/CKM_KODANDARAMAIAH.jpg

Load More