newsfirstkannada.com

ಲೋಕಾ ಅಧಿಕಾರಿಗಳಿಂದ ಭ್ರಷ್ಟರ ಬೇಟೆ.. ಕಳಂಕಿತ ಮಹಿಳಾ ಅಧಿಕಾರಿ ಮನೆಯಲ್ಲಿ 2 ಆಮೆಗಳು ಪತ್ತೆ..!

Share :

28-06-2023

    ಕೃಷಿ ಇಲಾಖೆಯ ಅಧಿಕಾರಿಗಳ ನಿವಾಸಗಳ ಮೇಲೆ ರೇಡ್

    ದಾಳಿ ವೇಳೆ ಕೆಲ ಮಹತ್ವದ ದಾಖಲೆಗಳು ಪತ್ತೆ, ಪರಿಶೀಲನೆ

    ಆಮೆ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಗಿಳಿದಿದ್ದಾರೆ. ರಾಜ್ಯದಾದ್ಯಂತ ಭ್ರಷ್ಟಾಚಾರ ಆರೋಪಿತ ಅಧಿಕಾರಿಗಳ ಬಾಗಿಲು ಬಡಿದು ಶಾಕ್​ ಕೊಟ್ಟಿದ್ದಾರೆ. ರೇಡ್​ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿವಾಸದಲ್ಲಿ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಆಸ್ತಿ ಬಗ್ಗೆ ಕುರಿತ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ, ವಿಜಯಪುರ ಜಿಲ್ಲೆಯ ಯಾವ್ಯಾವ ಅಧಿಕಾರಿಗಳ ನಿವಾಸದ ಮೇಲೆ ರೇಡ್​ ನಡೆದಿದೆ ಅನ್ನೋದ್ರ ವಿವರ ಇಲ್ಲಿದೆ. 

ಬಾಗಲಕೋಟೆ

ಜಿಲ್ಲೆಯ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ಬೀಳಗಿ ಕೃಷಿ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣ ಶಿರೂರ ನಿವಾಸದ ಮೇಲೆ ರೇಡ್ ಮಾಡಲಾಗಿದೆ. ನಗರದ ವಿದ್ಯಾಗಿರಿಯಲ್ಲಿ ಈ ಅಧಿಕಾರಿಗಳ ಮನೆಗಳಿವೆ.

ಚೇತನಾ ಪಾಟೀಲ್ ಅವರ ಮನೆಯಲ್ಲಿ 2 ಆಮೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಅರಣ್ಯಾಧಿಕಾರಿ ಸುರೇಶ ಸಂಕನಗೌಡರ್ ಆಗಮಿಸಿದ್ದಾರೆ. ನಿವಾಸದಲ್ಲಿ 2 ಲಾಕರ್​ಗಳನ್ನು ಓಪನ್​ ಮಾಡಲಾಗುತ್ತಿದ್ದು ಜೊತೆಗೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಡಿವೈಎಸ್​ಪಿ ಅಧಿಕಾರಿಗಳಾದ ಶಂಕರ್ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ರೇಡ್​ ಮಾಡಲಾಗುತ್ತಿದೆ.

ವಿಜಯಪುರ

ಜಿಲ್ಲೆಯ ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ರೇಡ್​ ನಡೆಸಲಾಗಿದೆ. ಬಸವನಬಾಗೇವಾಡಿಯ PWD ಇಲಾಖೆಯ ಜೆಇಇ ಭೀಮನಗೌಡ ಬಿರಾದಾರ ನಿವಾಸದ ಮೇಲೆ ದಾಳಿ ಮಾಡಲಾಯಿತು. ಇವರ ಮನೆ ವಿಜಯಪುರದ ಆರ್​ಟಿಓ ಕಚೇರಿ ಹಿಂಭಾಗದಲ್ಲಿದೆ. ಇವರ ಸಂಬಂಧಿ ಶ್ರೀಕಾಂತ್ ಅಂಗಡಿ ಎನ್ನುವವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಸಿಸ್ಟೆಂಟ್ ಎಇಇ ಜೆಪಿ ಶೆಟ್ಟಿ ಅವರ ಸ್ವಗ್ರಾಮ ಸಾಸನೂರು ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಿಜಯಪುರದ ಲೋಕಾಯುಕ್ತ ಎಸ್​ಪಿ ಅನಿತಾ ಹದ್ದನ್​ವರ ನೇತೃತ್ವದಲ್ಲಿ 4 ಕಡೆಗಳಲ್ಲಿ 3 ಡಿವೈಎಸ್​ಪಿ, 7 ಇನ್​ಸ್ಪೆಕ್ಟರ್ಸ್​​ ದಾಳಿ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಾ ಅಧಿಕಾರಿಗಳಿಂದ ಭ್ರಷ್ಟರ ಬೇಟೆ.. ಕಳಂಕಿತ ಮಹಿಳಾ ಅಧಿಕಾರಿ ಮನೆಯಲ್ಲಿ 2 ಆಮೆಗಳು ಪತ್ತೆ..!

https://newsfirstlive.com/wp-content/uploads/2023/06/VIJ_CHETANA_AAME.jpg

Load More