newsfirstkannada.com

ಲೋಕಸಭಾ ಕ್ಷೇತ್ರ 543ರಿಂದ 848ಕ್ಕೆ ಏರಿಕೆ ಸಾಧ್ಯತೆ; ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯದ ಭೀತಿ ಯಾಕೆ?

Share :

Published June 2, 2023 at 9:03am

    ಯಾವ್ಯಾವ ರಾಜ್ಯಕ್ಕೆ ಎಷ್ಟು ಸೀಟು ಹೆಚ್ಚಾಗುತ್ತೆ?

    ಹಿಂದಿ ಭಾಷೆ ರಾಜ್ಯಗಳಿಗೆ ಸಿಂಹಪಾಲು ಸಿಗುತ್ತೆ

    ದಕ್ಷಿಣ ಭಾರತದ ರಾಜ್ಯಗಳಿಗೆ ಯಾಕೆ ಕಡಿಮೆ?

ನವದೆಹಲಿ: ದೇಶಾದ್ಯಂತ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಚರ್ಚೆ ಜೋರಾಗಿದೆ. ಸದ್ಯ ಇರುವ 543 ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆ ಆಧಾರದ ಮೇಲೆ ಹೆಚ್ಚಿಸುವ ಚಿಂತನೆ ನಡೆದಿದೆ. ಈ ಪುನರ್ ವಿಂಗಡಣೆಯಲ್ಲಿ ಉತ್ತರ ಭಾರತಕ್ಕೆ ಸಿಂಹಪಾಲು ಸಿಕ್ರೆ ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಲೋಕಸಭಾ ಕ್ಷೇತ್ರಗಳು ನಿಗದಿಯಾಗುವ ಭೀತಿ ಎದುರಾಗಿದೆ.

2019ರ ಲೋಕಸಭಾ ಚುನಾವಣೆ 543 ಕ್ಷೇತ್ರಗಳಿಗೆ ನಡೆಯಲಿದೆ. ಇದಾದ ನಂತರ ಮುಂದಿನ 5 ವರ್ಷಕ್ಕೆ ಅಂದ್ರೆ 2026ಕ್ಕೆ ಲೋಕಸಭಾ ಕ್ಷೇತ್ರಗಳು ಪುನರ್ ವಿಂಗಡಣೆ ಆಗುವ ಸಾಧ್ಯತೆ ಇದೆ. ಜನಸಂಖ್ಯೆಯ ಆಧಾರದ ಮೇಲೆ ಈಗಿರುವ 543 ಕ್ಷೇತ್ರಗಳಿಂದ 848ಕ್ಕೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ ಎನ್ನಲಾಗಿದೆ.

ಯಾವ್ಯಾವ ರಾಜ್ಯಕ್ಕೆ ಎಷ್ಟು ಸೀಟು?
ಪೂರ್ವಭಾವಿ ಅಂಕಿಅಂಶಗಳ ಪ್ರಕಾರ ಪುನರ್ ವಿಂಗಡಣೆಯ ಬಳಿಕ ಲೋಕಸಭಾ ಕ್ಷೇತ್ರಗಳು 848ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದ್ರೆ, ಉತ್ತರಪ್ರದೇಶ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80 ರಿಂದ 143. ಬಿಹಾರ ಲೋಕಸಭಾ ಕ್ಷೇತ್ರಗಳ ಸಂಖ್ಯೆ 40 ರಿಂದ 80. ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 41 ಕ್ಕೇರಿಕೆಯಾಗಬಹುದು.

ಉತ್ತರ ಭಾರತಕ್ಕೆ ಹೆಚ್ಚಿನ ಸಂಖ್ಯೆ
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಸಂಖ್ಯೆಯೇ ಡಬಲ್ ಆಗಬಹುದು. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಕಡಿಮೆಯಾಗಲಿದೆ. ಆಂಧ್ರ- ತೆಲಂಗಾಣದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42 ರಿಂದ 54ಕ್ಕೆ ಏರಿಕೆಯಾಗಲಿದೆ. ತಮಿಳುನಾಡು ಲೋಕಸಭಾ ಕ್ಷೇತ್ರಗಳ ಸಂಖ್ಯೆ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ 39-49 ಕ್ಕೇರಿಕೆ ಆಗಲಿದೆ. ಕೇರಳ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 20ರಲ್ಲೇ ಮುಂದುವರಿದ್ರೆ, ಗುಜರಾತ್ 26-43, ಹರಿಯಾಣ 10-18, ಮಹಾರಾಷ್ಟ್ರ 48-76, ಛತ್ತೀಸ್‌ಘಡ್ 11-19 ಕ್ಕೇರಿಕೆ ಆಗಬಹುದು ಎನ್ನಲಾಗಿದೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕ
ಲೋಕಸಭಾ ಕ್ಷೇತ್ರಗಳ ಪುನರ್ ವಿಗಂಡಣೆಯಲ್ಲಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಸೀಟುಗಳ ಸಂಖ್ಯೆ ಕಡಿಮೆ ಆಗಲಿದೆ. ಇದಕ್ಕೆ ಕಾರಣ ಏನು ಅಂತಾ ನೋಡಿದ್ರೆ ಜನಸಂಖ್ಯಾ ನಿಯಂತ್ರಣ. ಜನಸಂಖ್ಯೆ ನಿಯಂತ್ರಿಸದೇ ಇರೋ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಲೋಕಸಭಾ ಕ್ಷೇತ್ರ ನಿಗದಿಯಾಗಲಿದೆ. ಜನಸಂಖ್ಯೆ ನಿಯಂತ್ರಿಸಿದ ತಪ್ಪಿಗೆ ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಲೋಕಸಭಾ ಕ್ಷೇತ್ರ ನಿಗದಿಯಾಗುವ ಭೀತಿ ಎದುರಾಗಿದೆ.

ಹಿಂದಿ ಭಾಷೆಯ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡದ್ದಕ್ಕೆ ಲೋಕಸಭಾ ಕ್ಷೇತ್ರದ ‌ಸಂಖ್ಯೆ ಏರಿಕೆಯ‌ ಗಿಫ್ಟ್ ಸಿಗಲಿದೆ. ಕುಟುಂಬ ಕಲ್ಯಾಣ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ದಕ್ಷಿಣದ ರಾಜ್ಯಗಳಿಗೆ ಲೋಕಸಭಾ ಕ್ಷೇತ್ರಗಳು ಖೋತಾ ಆಗುವ ಭೀತಿ ಎದುರಾಗಿದೆ. ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯದ ಕೊರತೆ, ಅನ್ಯಾಯವಾಗಲಿದೆ ಅನ್ನೋ ಆರೋಪಗಳು ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಲೋಕಸಭಾ ಕ್ಷೇತ್ರ 543ರಿಂದ 848ಕ್ಕೆ ಏರಿಕೆ ಸಾಧ್ಯತೆ; ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯದ ಭೀತಿ ಯಾಕೆ?

https://newsfirstlive.com/wp-content/uploads/2023/06/New-parliment-1.jpg

Load More