ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ
ಲೋಕಸಭಾ ಬಿಜೆಪಿ-ಜೆಡಿಎಸ್ ಟಿಕೆಟ್ ಆಕಾಂಕ್ಷಿತರಲ್ಲಿ ಪೀಕಲಾಟ
ದೇವೇಗೌಡರೇ ಮತ್ತೆ ಸ್ಪರ್ಧಿಸಿ ಸೋಲಿನ ಸೇಡನ್ನು ತೀರಿಸಿಕೊಳ್ತಾರಾ?
ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ತುಮಕೂರು ಲೋಕಸಭಾ ಬಿಜೆಪಿ ಜೆಡಿಎಸ್ ಟಿಕೆಟ್ ಆಕಾಂಕ್ಷಿತರಲ್ಲಿ ಪೀಕಲಾಟ ಶುರುವಾಗಿದೆ. ಈ ನಡುವೆ ದೇವೇಗೌಡರೇ ಮತ್ತೇ ಸ್ಪರ್ಧಿಸಿ ಸೋಲಿನ ಸೇಡನ್ನು ತೀರಿಸಿಕೊಳ್ತಾರಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ರಾಜ್ಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಮೈತ್ರಿ ಏನೋ ಮಾಡಿಕೊಂಡಿದೆ. ಆದರೆ ತಳಮಟ್ಟದ ಮುಖಂಡರು, ಕಾರ್ಯಕರ್ತರು ಇದನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ತಾರೆ ಎಂಬ ಜಿಜ್ಞಾಸೆ ಶುರುವಾಗಿದೆ. ಅದಲ್ಲದೇ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಲ್ಲಿ ಪೀಕಲಾಟ ಶುರುವಾಗಿದೆ. ಈಗಾಗಲೇ ಲೋಕಸಭೆ ಚುನಾವಣೆಯ ತಯಾರಿ ಉಭಯ ಪಕ್ಷದ ಮುಖಂಡರು ಮಾಡಿಕೊಳ್ಳುತಿದ್ದರು. ಇದೀಗ ಮೈತ್ರಿ ವಿಚಾರ ಕೊಂಚ ಇರಿಸು ಮುರಿಸು ತಂದಿದೆ. ತುಮಕೂರು ಲೋಕಸಭೆಯ ಟಿಕೆಟ್ ಬಿಜೆಪಿಗೋ ಅಥವಾ ಜೆಡಿಎಸ್ ಪಾಲಿಗೋ ಎಂಬ ದ್ವಂದ್ವ ಉಂಟಾಗಿದೆ. ಈಗಾಲೇ ಜೆಡಿಎಸ್ ತುಮಕೂರು ಲೋಕಸಭಾ ಕ್ಷೇತ್ರ ತಮಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದೆ ಎನ್ನಲಾಗಿದೆ. ಇದು ಬಿಜೆಪಿಯ ಹುರಿಯಾಳುಗಳ ಆಸೆಗೆ ತಣ್ಣಿರೇರಚಿದಂತಾಗಿದೆ. ತುಮಕೂರು ಲೋಕಸಭಾ ಇತಿಹಾಸದಲ್ಲಿ ಜೆಡಿಎಸ್ ಕೇವಲ ಒಂದೇ ಬಾರಿ ಗೆದ್ದಿದ್ದನ್ನು ಹೊರತುಪಡಿಸಿದರೆ ಗೆಲುವಿನ ಸಿಂಹಪಾಲು ಬಿಜೆಪಿಯದ್ದೇ. ಹಾಗಾಗಿ ಬಿಜೆಪಿಗೆ ಈ ಕ್ಷೇತ್ರ ಬಿಟ್ಟುಕೊಟ್ಟರೆ ಒಳಿತು ಅನ್ನೋದು ಬಿಜೆಪಿ ಮುಖಂಡರ ಅಂಬೋಣ.
ಇದನ್ನು ಓದಿ: ಬೆಂಗಳೂರಿಗರೇ.. ಇಂದು ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ
ಬಿಜೆಪಿಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಮಾಧುಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವೀಶ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಜೆಡಿಎಸ್ ನಲ್ಲಿ ಅಭ್ಯರ್ಥಿಯ ಕೊರತೆ ಇದೆ. ಹಾಗಾಗಿ ಬಿಜೆಪಿಗೆ ಬಿಟ್ಟು ಕೊಟ್ಟರೆ ಮೈತ್ರಿಗೆ ಲಾಭ ಆಗಬಹುದು ಅನ್ನುವ ಚರ್ಚೆ ರಾಜಕೀಯ ಪಡಸಾಲೆಲ್ಲಿ ಶುರುವಾಗಿದೆ. ಜೆಡಿಎಸ್ ಸ್ಥಳೀಯ ಅಭ್ಯರ್ಥಿಯ ಕೊರತೆಯಿಂದಾಗಿ ಪುನಃ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಯುತ್ತಾರೆ ಎಂಬ ಬಲವಾದ ಮಾಹಿತಿ ಲಭ್ಯವಾಗುತ್ತಿದೆ. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವೇಗೌಡರು ಅನಿರೀಕ್ಷಿತ ಸೋಲುಂಡಿದ್ದರು. ಹಾಗಾಗಿ ಸೋತ ಜಾಗದಲ್ಲೇ ಗೆದ್ದು, ಗೆಲುವಿನ ಝೇಂಕಾರದೊಂದಿಗೆ ಚುನಾವಣಾ ರಾಜಕೀಯ ಅಂತ್ಯಗೊಳಿಸಲು ಯೋಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ಜೆಡಿಎಸ್ ಬಿಜೆಪಿ ಮೈತ್ರಿಯನ್ನು ಸ್ಥಳೀಯ ಶಾಸಕರು ಒಪ್ಪಿಕೊಂಡಿದ್ದಾರೆ. ಆದರೂ ಬಿಜೆಪಿ ಜೆಡಿಎಸ್ ನ ಜಿದ್ದಾಜಿದ್ದಿ ಕಣವಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರ, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಉಭಯ ಪಕ್ಷಗಳ ಮುಖಂಡರು ಜಿದ್ದು ಮರೆತು ಒಟ್ಟಾಗಿ ಹೋಗ್ತಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ