newsfirstkannada.com

BREAKING: ರಾಹುಲ್ ಗಾಂಧಿಗೆ ಬಿಗ್ ರಿಲೀಫ್‌; ಸಂಸದ ಸ್ಥಾನ ಅನರ್ಹತೆ ವಾಪಸ್ ಪಡೆದ ಸ್ಪೀಕರ್

Share :

07-08-2023

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊನೆಗೂ ಬಿಗ್ ರಿಲೀಫ್

    ಲೋಕಸಭಾ ಸದಸ್ಯ ಅನರ್ಹತೆಯನ್ನು ವಾಪಸ್ ಪಡೆದ ಸ್ಪೀಕರ್‌

    ಇಂದಿನಿಂದ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ಅವಕಾಶ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಲೋಕಸಭಾ ಸದಸತ್ವ ಅನರ್ಹತೆಯನ್ನು ಸ್ಪೀಕರ್‌ ವಾಪಸ್ ಪಡೆದು ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ರಾಹುಲ್ ಗಾಂಧಿ ಅವರು ಇಂದಿನಿಂದ ಸದನದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಹೆಸರು ಯಾಕೆ ಕಳ್ಳರ ಹೆಸರ ಜೊತೆಗಿದೆ ಎಂದು ರಾಹುಲ್ ಗಾಂಧಿ ತಮ್ಮ ಸಾರ್ವಜನಿಕ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಇದರ ವಿರುದ್ಧ ಮಾನನಷ್ಟ ಕೇಸ್​ನಲ್ಲಿ ರಾಹುಲ್​ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ಪ್ರಕಟವಾಗಿತ್ತು. ಇದೀಗ ಸುಪ್ರೀಂ ಕೋರ್ಟ್​ ರಾಹುಲ್ ಗಾಂಧಿ ಅವರ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಸುಪ್ರೀಂಕೋರ್ಟ್ ಈ ತಡೆಯಾಜ್ಞೆಯ ಹಿನ್ನೆಲೆ ಲೋಕಸಭಾ ಸ್ಪೀಕರ್ ಇಂದು ಅನರ್ಹತೆಯ ಆದೇಶ ವಾಪಸ್ ಪಡೆದಿದ್ದಾರೆ.

ಇದನ್ನೂ ಓದಿ: ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​; ಇಂದು ಸಂಸದ ಸ್ಥಾನ ವಾಪಸ್​ ಸಾಧ್ಯತೆ, ಸ್ಪೀಕರ್ ಸಹಿಯೊಂದೇ ಬಾಕಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ರಾಹುಲ್ ಗಾಂಧಿಗೆ ಬಿಗ್ ರಿಲೀಫ್‌; ಸಂಸದ ಸ್ಥಾನ ಅನರ್ಹತೆ ವಾಪಸ್ ಪಡೆದ ಸ್ಪೀಕರ್

https://newsfirstlive.com/wp-content/uploads/2023/06/RAHUL_GANDHI-2.jpg

Load More