newsfirstkannada.com

ಕೊಪ್ಪಳ ನಿರ್ಮಿತಿ ಕೇಂದ್ರದ ಮ್ಯಾನೇಜರ್​​ ಬಳಿ 6 ಕೋಟಿ ಬೆಲೆ ಹೊಂದಿರೋ ಐಷಾರಾಮಿ ಲಾಡ್ಜ್..!

Share :

17-08-2023

    ಲೋಕಾಯುಕ್ತ ದಾಳಿಯಲ್ಲಿ ಸ್ಫೋಟಕ ಮಾಹಿತಿ

    ಕೊಪ್ಪಳ ನಿರ್ಮಿತಿ ಕೇಂದ್ರದ ಮ್ಯಾನೇಜರ್ ಮನೆ ಮೇಲೆ ದಾಳಿ

    ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಹುಲಿಗಿ ಬಳಿ ಇರುವ ಐಷಾರಾಮಿ ಲಾಡ್ಜ್

ಬೆಳ್ಳಂಬೆಳಗ್ಗೆ ಕೊಪ್ಪಳದಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ‌ ಮಂಜುನಾಥ್ ಬನ್ನಿಕೊಪ್ಪ ನಿವಾಸದ ಮೇಲೆ‌ ದಾಳಿ ಮಾಡಿದ್ದಾರೆ.

ನಗರದ ಮಂಗಳಾ ಆಸ್ಪತ್ರೆ ಹಿಂಭಾಗದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿರ್ಮಿತಿ ಕೇಂದ್ರ, ನಿವಾಸ ಹಾಗೂ ಹುಲಗಿಯಲ್ಲಿನ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಒಟ್ಟು ಮೂರು ಸ್ಥಳಗಳಲ್ಲಿ ಐದು ತಂಡಗಳಿಂದ ಶೋಧಕಾರ್ಯ ನಡೆಯುತ್ತಿದೆ. ರಾಯಚೂರು ಲೋಕಾಯುಕ್ತ ಎಸ್ಪಿ ಆರ್​.ಎಲ್.ಅರಸಿದ್ದಿ ನೇತೃತ್ವದಲ್ಲಿ ದಾಳಿಯಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಲೋಕಾಯುಕ್ತ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿಯಾಗಿದೆ. ಈ ಹಿಂದೆ ನಿರ್ಮಿತಿ ಕೇಂದ್ರದ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಕೊಪ್ಪಳ ತಾಲೂಕಿನ ಹುಲಗಿ ಬಳಿ 6 ಕೋಟಿ ಬೆಲೆ ಬಾಳುವ ವಸತಿ ಕಟ್ಟಡ (ಲಾಡ್ಜ್)ವನ್ನು ಮಂಜುನಾಥ್ ಹೊಂದಿದ್ದಾರೆ. ಲಾಡ್ಜ್​ಗೆ ಎಂಟ್ರಿ ನೀಡಿರುವ ಅಧಿಕಾರಿಗಳು ದಾಖಲೆಗಳನ್ನು ಪರೀಶಿಲನೆ ನಡೆಸಿದ್ದಾರೆ. ಮೂರು ಅಂತಸ್ತಿನ ಐಷಾರಾಮಿ ಹೋಟೆಲ್ ಅನ್ನು ಮಂಜುನಾಥ ಕಟ್ಟಿಸಿದ್ದಾರೆ. ಸ್ನೇಹಿತರ ಜೊತೆಗೂ ಉದ್ಯಮದಲ್ಲಿ ಹಣವನ್ನು ಹೂಡಿದ್ದಾರೆ ಎನ್ನಲಾಗುತ್ತಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಹುಲಿಗಿ ಬಳಿ ಈ ಲಾಡ್ಜ್ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಪ್ಪಳ ನಿರ್ಮಿತಿ ಕೇಂದ್ರದ ಮ್ಯಾನೇಜರ್​​ ಬಳಿ 6 ಕೋಟಿ ಬೆಲೆ ಹೊಂದಿರೋ ಐಷಾರಾಮಿ ಲಾಡ್ಜ್..!

https://newsfirstlive.com/wp-content/uploads/2023/08/KPL_LOKA.jpg

Load More