newsfirstkannada.com

ಲಂಡನ್​ನ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ವಿರಾಟ್.. ಮತ್ತೆ ಸೆಂಚುರಿ ಸಿಡಿಸಲು ದೇವರ ಮೊರೆ ಹೋದ್ರಾ ಕೊಹ್ಲಿ

Share :

18-06-2023

    ವೆಸ್ಟ್​ ಇಂಡೀಸ್​ ಪ್ರವಾಸಕ್ಕೂ ಮುನ್ನ ವಿರಾಟ್​ ಟೆಂಪಲ್ ರನ್​..!

    ಕಿಂಗ್ ಕೊಹ್ಲಿ ಮತ್ತೆ ಬ್ಯಾಟಿಂಗ್​ನಲ್ಲಿ ಘರ್ಜಿಸಲು ಆಧ್ಯಾತ್ಮದತ್ತ ಹೆಜ್ಜೆ

    ಅಮೆರಿಕದ ಕೃಷ್ಣ ದಾಸ್ ಯಾರು? ಇವರ ಬಳಿಯೇ ಕೊಹ್ಲಿ ಹೋಗಿದ್ಯಾಕೆ?

ಸದ್ಯ ರೆಡ್​ಹಾಟ್​​​​ ಫಾರ್ಮ್​​​​ನಲ್ಲಿರೋ ವಿರಾಟ್​ ಮತ್ತೆ ಟೆಂಪಲ್ ರನ್ ಶುರು ಮಾಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ ಫೈನಲ್​​ನಲ್ಲಿ ಫೇಲ್ಯೂರ್ ಆಗಿರೋ ವಿರಾಟ್​ ಈಗ ವೆಸ್ಟ್​ ಇಂಡೀಸ್ ಟೂರ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯೋಕೆ ಮತ್ತೆ ಆಧ್ಯಾತ್ಮದತ್ತ ಚಿತ್ತ ನೆಟ್ಟರಾ ಎಂಬ ಪ್ರಶ್ನೆ ಕಾಡ್ತಿದೆ.

ವಿರಾಟ್​ ಕೊಹ್ಲಿ ಸಿಂಹಾಸನದಲ್ಲಿ ಕೂತು ಕ್ರಿಕೆಟ್​​​ ಜಗತ್ತನ್ನೇ ಆಳೋ ಕಿಂಗ್. ಸುಲ್ತಾನನ ಬ್ಯಾಟಿಂಗ್​ ಬಿರುಗಾಳಿಗೆ ಶತ್ರು ಪಡೆ, ನಾವಿಕನಿಲ್ಲದ ಹಡಗಿನಂತೆ ದಿಕ್ಕು ತಪ್ಪುತ್ತೆ. ಆದ್ರೆ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ಸೋಲಿನ ಜೊತೆಗೆ ಬ್ಯಾಟಿಂಗ್ ಫೇಲ್ಯೂರ್​ನಿಂದ ನಿರುತ್ಸಾಹರಾಗಿರೋ ಕಿಂಗ್ ಕೊಹ್ಲಿ, ಈಗ ಮತ್ತೆ ಘರ್ಜಿಸಲು ಆಧ್ಯಾತ್ಮದತ್ತ ಹೆಜ್ಜೆಹಾಕಿದ್ದಾರೆ.

WTC ಫೈನಲ್​ನಲ್ಲಿ ಸೋಲಿನ ಬಳಿಕ ವಿಶ್ರಾಂತಿಯಲ್ಲಿರೋ ಟೀಮ್ ಇಂಡಿಯಾ ಆಟಗಾರರು, ಸಿಕ್ಕಿರೋ ರಜಾ ದಿನಗಳನ್ನ ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಪತ್ನಿ, ಮಕ್ಕಳ ಜೊತೆ ರಜಾ ದಿನಗಳನ್ನ ಕಳೆಯುತ್ತಾ ಆನಂದಿಸುತ್ತಿದ್ದಾರೆ. ಆದ್ರೆ, ಕಿಂಗ್ ಕೊಹ್ಲಿ ಮಾತ್ರ ಆಧ್ಯಾತ್ಮದತ್ತ ಗಮನ ಹರಿಸಿದ್ದಾರೆ.

ಕೃಷ್ಣದಾಸ್ ಕೀರ್ತನ ಕಾರ್ಯಕ್ರಮದಲ್ಲಿ ವಿರುಷ್ಕಾ ದಂಪತಿ.!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನಿರೀಕ್ಷಿತ ಪ್ರದಶರ್ಸನ ನೀಡುವಲ್ಲಿ ವಿಫಲರಾಗಿರೋ ವಿರಾಟ್ ಲಂಡನ್​ನಲ್ಲಿರೋ ಕೃಷ್ಣ ದಾಸ್​​ರ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಿ ಕೃಷ್ಣ ಕೀರ್ತನೆಗಳನ್ನ ಆಲಿಸಿದ್ದಾರೆ. ಆ ಮೂಲಕ ಇಂಡೀಸ್ ಪ್ರವಾಸದ ಆರಂಭಕ್ಕೂ ಮುನ್ನ ಆಧ್ಯಾತ್ಮಕ ಲೋಕದಲ್ಲಿ ಮೈಮರೆತಿದ್ದಾರೆ.

ಅಂದ್ಹಾಗೆ ಈ ಕೃಷ್ಣ ದಾಸ್ ಯಾರು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಈ ಕೃಷ್ಣ ದಾಸ್ ಅಮೆರಿಕದಲ್ಲಿನ ಕೃಷ್ಣನ ಭಕ್ತ. ಕೃಷ್ಣ ಕೀರ್ತನೆಗಳ ಕಾರ್ಯಕ್ರಮ ಆಯೋಜಿಸುವ ಈತನ ಶೋಗೆ, ಸಾವಿರಾರು ಭಕ್ತರು ಜಮಾಯಿಸಿ ಕೀರ್ತನೆಗಳನ್ನ ಕೇಳುತ್ತಾ ಮೈಮರೆಯುತ್ತಿದ್ದಾರೆ. ಸದ್ಯ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿರುವ ಕೊಹ್ಲಿ, ಟೆಸ್ಟ್​​ನಲ್ಲಿ ಫಾರ್ಮ್​​ಗೆ ಬರೋಕೆ ಮತ್ತೆ ದೈವ ಬಲ ನಂಬಿದ್ದಾರೆ.

ಹಿಂದೆ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದ ಕೊಹ್ಲಿ.!

ಫೇಲ್ಯೂರ್ ಎಂಬ ಪೆಡಂಭೂತದಲ್ಲಿ ಸಿಲುಕಿದ್ದ ಕೊಹ್ಲಿ, ಏಷ್ಯಾಕಪ್​​​​ನಲ್ಲಿ ಆರ್ಭಟ ಮಾಡ್ತಿದ್ದಂತೆ ಕರೋಲಿ ಬಾಬಾ ಫೋಟೋ ಶೇರ್​​​ ಮಾಡಿದ್ರು. T20 ವಿಶ್ವಕಪ್​​ನಲ್ಲಿ ಭರ್ಜರಿ ಬ್ಯಾಟಿಂಗ್​​ ಮೂಲಕ ಕಂ​ಬ್ಯಾಕ್​ ಮಾಡ್ತಿದ್ದಂತೆ, ನವೆಂಬರ್​ನಲ್ಲಿ ಕೊಹ್ಲಿ, ಅನುಷ್ಕಾ ಜೊತೆಗೆ ಉತ್ತರ ಪ್ರದೇಶದ ಮಥುರಾದಲ್ಲಿರುವ ಪ್ರಸಿದ್ಧ ವೃಂದಾವನಕ್ಕೆ ಭೇಟಿ ನೀಡಿದ್ರು. ಬಾಬಾರ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಪರಮಾನಂದರ ಆಶೀರ್ವಾದ ಪಡೆದಿದ್ರು.

ಬಾಬಾರ ಆಶೀರ್ವಾದ ಪಡೆದ ನಂತರ ಕೊಹ್ಲಿ ಬಾಂಗ್ಲಾ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ, ಗ್ರೇಟ್​ ಕಮ್​​ ಬ್ಯಾಕ್ ಮಾಡಿದ್ರು. 3 ವರ್ಷಗಳ ನಂತರ ಏಕದಿನ ಕ್ರಿಕೆಟ್​ನಲ್ಲಿ ಸೆಂಚುರಿ ಸಿಡಿಸಿದ್ರು.

ಲಂಕಾ ಸರಣಿಗೂ ಮುನ್ನ ಪ್ರೇಮಾನಂದ​ ಸ್ವಾಮಿಗಳ ಆಶೀರ್ವಾದ!

ನೀಮ್​ ಕರೋಲಿ ಬಾಬಾ ಆಶೀರ್ವಾದ ಪಡೆದ ಬಳಿಕ, ಈ ವರ್ಷದ ಆರಂಭದಲ್ಲಿ ಮತ್ತೊಂದು ಆಶ್ರಮಕ್ಕೆ ಕೊಹ್ಲಿ ಭೇಟಿ ನೀಡಿದ್ರು. ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿರುವ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಿದ್ರು. ಕೊಹ್ಲಿ, ಅನುಷ್ಕಾ, ಪುತ್ರಿ ವಮಿಕಾ ಜೊತೆ ಈ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ರು. ಬಳಿಕ ಶ್ರೀಲಂಕಾ ಸರಣಿಯಲ್ಲಿ ಕೊಹ್ಲಿ, ಎರಡು ಶತಕ ಸಿಡಿಸಿ ಮಿಂಚಿದ್ರು.

ಆಸಿಸ್​ ಟೆಸ್ಟ್ ಸರಣಿಗೆ ಮುನ್ನ ರಿಷಿಕೇಶಕ್ಕೆ ಭೇಟಿ.!

ಇದೇ ವರ್ಷ ನಡೆದ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿಗೂ ಮುನ್ನವೂ ವಿರುಷ್ಕಾ ದಂಪತಿ ಉತ್ತರಾಖಾಂಡ್​​ನ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ದಯಾನಂದ ಗಿರಿ ಬೃಂದಾವನಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದರು. ಅಲ್ಲಿ ಆಶೀರ್ವಾದ ಪಡೆದ ವಿರಾಟ್​ ಕೊಹ್ಲಿ, ಅಹ್ಮದಬಾದ್​ ಟೆಸ್ಟ್​ನಲ್ಲಿ 186 ರನ್​ಗಳ ಬಿಗ್ ಇನ್ನಿಂಗ್ಸ್​ ಕಟ್ಟಿದ್ದರು. ಆ ಮೂಲಕ ಟೆಸ್ಟ್​ನಲ್ಲಿ ಶತಕದ ಬರ ನೀಗಿಸಿಕೊಂಡಿದ್ದರು. ಆದ್ರೀಗ ಆಧ್ಯಾತ್ಮದ ಕೀರ್ತನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಕೊಹ್ಲಿ, ಈ ಪ್ರವಾಸದಲ್ಲಿ ವೀರಾವೇಶ ಮೆರೆಯೋಕೆ ರೆಡಿಯಾಗಿದ್ದಾರೆ.

ಮೊದಲು ತನ್ನ ಮೇಲೆ ವಿಶ್ವಾಸ ಇಟ್ಟು ಅಬ್ಬರಿಸುತ್ತಿದ್ದ ಕೊಹ್ಲಿ, ಈಗ ತನ್ನ ಜೊತೆಗೆ ದೈವದ ಬಲವನ್ನೂ ನಂಬಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ಸಿರೀಸ್​​​​​ಗಳಿಗೂ ಮುನ್ನ ಟೆಂಪಲ್​ ರನ್​ ಮಾಡ್ತಿರೋ ಕೊಹ್ಲಿ, ವಿಂಡೀಸ್ ಟೂರ್​ನಲ್ಲೂ ಸಕ್ಸಸ್​ ಕಾಣ್ತಾರಾ ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಲಂಡನ್​ನ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ವಿರಾಟ್.. ಮತ್ತೆ ಸೆಂಚುರಿ ಸಿಡಿಸಲು ದೇವರ ಮೊರೆ ಹೋದ್ರಾ ಕೊಹ್ಲಿ

https://newsfirstlive.com/wp-content/uploads/2023/06/VIRAT_KOHLI_ANUSHKA_SHARMA.jpg

Load More