newsfirstkannada.com

×

ಈತ ಅವನಲ್ಲ..ಅವಳು..!! 11.81 ಇಂಚು ಉದ್ದ ಗಡ್ಡ ಬಿಟ್ಟು ಗಿನ್ನಿಸ್ ದಾಖಲೆ ಬರೆದ ಅಮೆರಿಕ ಮಹಿಳೆ

Share :

Published August 14, 2023 at 11:20am

    ಈ ಮಹಿಳೆಗೆ ಇಷ್ಟುದ್ದ ಗಡ್ಡ ಬರಲು ಕಾರಣವೇನು ಗೊತ್ತಾ?

    ದಿನಕ್ಕೆ ಮೂರು ಬಾರಿ ಶೇವಿಂಗ್ ಮಾಡಿದ್ದರೂ ನಿಂತಿರಲಿಲ್ಲ

    ಈಕೆ ಸಲಿಂಗಿಯಾಗಿದ್ದು ಜೆನ್ ಎಂಬಾಕೆಯನ್ನು ಮದ್ವೆ ಆಗಿದ್ದಾಳೆ

ಪುರುಷರಿಗೆ ಗಡ್ಡ ಬರೋದು ಕಾಮನ್. ಉದ್ದನೆಯ ಗಡ್ಡ ಬಿಟ್ಟೋರು ಗಲ್ಲಿ ಗಲ್ಲಿಯಲ್ಲಿ ಸಿಗ್ತಾರೆ. ರಾಕಿ ಭಾಯ್ ರೀತಿ ತಾವು ಗಡ್ಡ ಬಿಟ್ಟು ಶೋ ಕೊಡುವವರಿಗೆ ಕಮ್ಮಿ ಇಲ್ಲ. ಆದರೆ ಈಗ ಕಾಲ ಬದಲಾಗಿದೆ. ಪುರುಷರು ಮಾತ್ರವಲ್ಲ, ಮಹಿಳೆಯರು ಗಡ್ಡ ಬಿಡೋಕೆ ಶುರುಮಾಡಿದ್ದಾರೆ. ಗಡ್ಡ ಬಿಟ್ಟಿದ್ದು ಮಾತ್ರವಲ್ಲ ಅತೀ ಉದ್ದದ ಗಡ್ಡ ಬಿಟ್ಟು ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ.

ಈಗೆಲ್ಲ ಗಡ್ಡ ಬಿಡೋದು ಅಂದ್ರೆ ಪುರುಷರಿಗೆ ಅದೇನೋ ಹಮ್ಮು, ಬಿಮ್ಮು. ಕೆಲವರು ಲೈಟಾಗಿ ಟ್ರಿಮ್ ಮಾಡಿಸ್ಕೊಂಡು ಶೋ ಕೊಟ್ರೆ ಇನ್ನೂ ಕೆಲವರು ಕೆಜಿಎಫ್ ರಾಕಿಭಾಯ್ ತರ ಉದ್ದನೆಯ ಗಡ್ಡ ಬಿಡ್ತಾರೆ. ಮೊದಲೆಲ್ಲ ಗಡ್ಡ ಬಿಡ್ತಿದ್ದವರು ಅಂದ್ರೆ ಹಳ್ಳಿ ಯುವಕರು. ಆದ್ರೆ ಈಗ ಗಡ್ಡ ಬಿಡೋದೇ ಟ್ರೆಂಡ್. ಆದ್ರೆ ಈ ಟ್ರೆಂಡ್ ಪುರುಷರಿಗೆ ಮಾತ್ರವಲ್ಲ ಹೆಣ್ಮಕ್ಕಳೂ ಗಡ್ಡ ಬಿಡ್ತಿದ್ದಾರೆ.

ಹಾರ್ಮೋನುಗಳ ಅಸಮತೋಲನ.. ಮಹಿಳೆಗೆ ಅತೀ ಉದ್ದದ ಗಡ್ಡ

ಅಮೆರಿಕದ ಮಿಚಿಗನ್ನ ಎರಿನ್ ಹನಿಕಟ್ ಎನ್ನುವ ಮಹಿಳೆಗೆ ಅತೀ ಉದ್ದದ ಗಡ್ಡ ಬೆಳೆದಿದೆ. ಈ ವಿಚಾರವಾಗಿ ಬೇಸರಗೊಳ್ಳದ ಮಹಿಳೆ ಅತೀ ಉದ್ದದ ಗಡ್ಡದಿಂದಲೇ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. 38 ವರ್ಷದ ಹನಿಕಟ್ ಸುಮಾರು ಎರಡು ವರ್ಷಗಳಿಂದ ತಮ್ಮ ಗಡ್ಡವನ್ನು ತೆಗೆದಿಲ್ಲ. ಪರಿಣಾಮ ಈಗ ಅವರ ಗಡ್ಡ 11.81 ಇಂಚಿಗೆ ಬೆಳೆದಿದೆ. ನಂತರ 2023 ಫೆಬ್ರವರಿ 8ರಂದು ಎರಿನ್ ಹನಿಕಟ್ ಗಡ್ಡ 11.81 ಇಂಚು ಇರುವುದರೊಂದಿಗೆ 75 ವರ್ಷದ ವಿವಿಯನ್ ವೀಲರ್ ಅವರ 10.04 ಇಂಚಿನ ದಾಖಲೆಯನ್ನು ಮುರಿದು ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ.

ಅಂದಾಗೆ ಹನಿಕಟ್ 13 ವರ್ಷದವಳಿದ್ದಾಗ ಅವರಿಗೆ ಗಡ್ಡ ಬರಲು ಪ್ರಾರಂಭವಾಯಿತು. ಆಕೆಯ ಮುಖದ ಮೇಲಿನ ಅತಿಯಾದ ಕೂದಲಿನ ಬೆಳವಣಿಗೆಗೆ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಕಾರಣವಾಗಿದೆ. ಗಿನ್ನಿಸ್ ದಾಖಲೆ ಪ್ರಕಾರ ಇದು ಹಾರ್ಮೋನುಗಳ ಅಸಮತೋಲನವಾಗಿದೆ. ಇದರಿಂದಾಗಿ ಹೊರಗೆ ಹೋಗಲು ಸಾಕಷ್ಟು ಮುಜುಗರ ಪಡಲು ಆರಂಭಿಸಿದ್ದರು, ಅದಕ್ಕಾಗಿ ದಿನಕ್ಕೆ ಮೂರು ಬಾರಿ ಶೇವಿಂಗ್, ವ್ಯಾಕ್ಸಿಂಗ್ ಮತ್ತು ಕೂದಲು ತೆಗೆಯುವ ಉತ್ಪನ್ನಗಳನ್ನು ಬಳಸಿ ಬೆಳೆಯುತ್ತಿರುವ ಗಡ್ಡಕ್ಕೆ ಕತ್ತರಿ ಹಾಕಿದ್ದರು.

ಆದ್ರೆ ಅಧಿಕ ರಕ್ತದೊತ್ತಡದಿಂದ ಅನಾರೋಗ್ಯಕ್ಕೊಳಗಾಗಿ ದೃಷ್ಟಿಯನ್ನು ಕಳೆದುಕೊಂಡರು. ಮಾತ್ರವಲ್ಲದೇ ಅವರು ಕಾಲನ್ನು ಕೂಡ ಕಳೆದುಕೊಂಡಿದ್ದರು. ಶೇವಿಂಗ್ ಮಾಡುವುದನ್ನು ನಿಲ್ಲಿಸಿ ಗಡ್ಡವನ್ನು ಬೆಳೆಸಲು ಶುರುಮಾಡಿದ್ದರು. ಇದಕ್ಕೆ ಇವರ ಪತ್ನಿ ಜೆನ್ ಕೂಡ ಸಾಥ್ ನೀಡಿದ್ದರು. ಪ್ರಸ್ತುತ ಹನಿಕಟ್ ಮಹಿಳೆಯರ ಪೈಕಿ ಅತೀ ಉದ್ದದ ಗಡ್ಡ ಹೊಂದಿರುವ ಮಹಿಳೆ ಅನ್ನೋ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಈಗಿರುವ ಮಹಿಳೆಯರ ಪೈಕಿ ಅತೀ ಉದ್ದದ ಗಡ್ಡ ಇರುವ ಮಹಿಳೆ ನಾನು. ನಂಗೆ 13 ವರ್ಷವಾದಾಗ ಮುಖ ಹೆಚ್ಚು ನೈಸ್ ಕಾಣಲೆಂದು ಗಡ್ಡ, ಮೀಸೆಯನ್ನು ತೆಗೆಯಲು ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಿದ್ದೆ. ಮಕ್ಕಳಾಗದಿರಲು ಮಹಿಳಾ ವೈದ್ಯರನ್ನು ಸಂಪರ್ಕಿಸಿದ್ದೆ. ಅವರು ನಂಗೆ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಇರೋದನ್ನು ಪತ್ತೆ ಹಚ್ಚಿದ್ದರು. ಇದರಿಂದ ಹಾರ್ಮೋನು ಅಸಮತೋಲನ ಉಂಟಾಗುತ್ತದೆ. ನಾನು 13 ವರ್ಷದವಳಾಗಿದ್ದಾಗ ದಿನಕ್ಕೆ ಮೂರು ಬಾರಿ ಶೇವಿಂಗ್ ಮಾಡಿಕೊಳ್ಳುತ್ತಿದ್ದೆಎರಿನ್ ಹನಿಕಟ್, ವಿಶ್ವದಾಖಲೆ ಮಾಡಿದ ಮಹಿಳೆ

ಅಂದ್ಹಾಗೆ ಹನಿಕಟ್​​ ಸಲಿಂಗಿಯಾಗಿದ್ದು, ಜೆನ್ ಎಂಬಾಕೆಯನ್ನು ಮದುವೆಯಾಗಿದ್ದಾಳೆ. ಹನಿಕಟ್, ಜೆನ್​ಳನ್ನು ಪತ್ನಿಯಾಗಿ ಸ್ವೀಕರಿಸಿದ್ದಾಳೆ. ಕೋವಿಡ್-19 ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಆದಾಗ ಮತ್ತು ಪತ್ನಿ ಜೆನ್ ನೀಡಿದ ಬೆಂಬಲದಿಂದ ಹನಿಕಟ್ ಈ ರೀತಿ ಗಡ್ಡ ಬೆಳೆಸಿದ್ದಾರೆ. ಹನಿಕಟ್ ತಾಯಿ ಜಿಲ್ ರೋಚ್ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈತ ಅವನಲ್ಲ..ಅವಳು..!! 11.81 ಇಂಚು ಉದ್ದ ಗಡ್ಡ ಬಿಟ್ಟು ಗಿನ್ನಿಸ್ ದಾಖಲೆ ಬರೆದ ಅಮೆರಿಕ ಮಹಿಳೆ

https://newsfirstlive.com/wp-content/uploads/2023/08/US_WOMEN-1.jpg

Load More