newsfirstkannada.com

ಗೂಗಲ್ ಮ್ಯಾಪ್ ಬಳಸುವವರೇ ಹುಷಾರ್.. ದಾರಿ ತಪ್ಪಿದ ಈ ಲಾರಿ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!

Share :

07-09-2023

  ನೀರು ಎಂಜಿನ್‌ವರೆಗೂ ತುಂಬಿದ ಮೇಲೆ ಗಾಬರಿಯಾದ ಡ್ರೈವರ್

  ದಾರಿ ಗೊತ್ತಿಲ್ಲದೇ ಗೂಗಲ್ ಮ್ಯಾಪ್‌ ನಂಬಿ ಹೋದ ಲಾರಿ ಚಾಲಕ

  ನೀರಿನಲ್ಲಿ ಸಿಲುಕಿಕೊಂಡಿದ್ದ ಲಾರಿಯನ್ನು ಹೊರತೆಗೆಯಲು ಹರಸಾಹಸ

ಹೈದರಾಬಾದ್‌: ಗೂಗಲ್ ಮ್ಯಾಪ್ ಬಳಸುವವರು ದಾರಿ ತಪ್ಪೋದು ಹೊಸದೇನು ಅಲ್ಲ. ಎಷ್ಟೋ ಬಾರಿ ಸುತ್ತಿ, ಸುತ್ತಿ ಸುಸ್ತಾಗಿರೋ ಉದಾಹರಣೆಗಳಿವೆ. ಗೂಗಲ್ ಮ್ಯಾಪ್‌ ಪಕ್ಕಾ ದಾರಿ ತೋರಿಸುತ್ತೆ ಅಂತ ನಂಬಿಕೊಂಡು ಹೋಗ್ತಾ ಇರ್ತೀವಿ. ಆದ್ರೆ, ಕೆಲವೊಂದು ಬಾರಿ ದಾರಿ ತಪ್ಪಿದ್ರೆ ಏನಾಗುತ್ತೆ ಗೊತ್ತಾ. ಮಧ್ಯರಾತ್ರಿಯಲ್ಲಿ ಗೂಗಲ್ ಮ್ಯಾಪ್‌ ನೋಡಿಕೊಂಡು ದಾರಿಯಲ್ಲಿ ಹೋಗ್ತಿದ್ದ ಲಾರಿ ಚಾಲಕನೊಬ್ಬ ನದಿಯಲ್ಲಿ ಮುಳುಗಿ ಕಷ್ಟಪಟ್ಟು ಬಚಾವ್ ಆಗಿದ್ದಾನೆ. ತೆಲಂಗಾಣದ ಹುಸ್ನಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಭೂಮಿ, ಚಂದ್ರನ ಅದ್ಭುತ ಫೋಟೋ ಸೆರೆ ಹಿಡಿದ ಆದಿತ್ಯ-L1; ಪ್ರತಿಯೊಬ್ಬರೂ ಮಿಸ್ ಮಾಡ್ದೇ ಈ ವಿಡಿಯೋ ನೋಡಿ

ತಮಿಳುನಾಡು ಮೂಲದ ಲಾರಿ ಚಾಲಕನೊಬ್ಬ ತೆಲಂಗಾಣದ ಸಿದ್ದಿಪೇಟೆ ಕಡೆಗೆ ಹೋಗುತ್ತಿದ್ದ. ಈ ವೇಳೆ ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ದಾರಿ ಗೊತ್ತಿಲ್ಲದೇ ಗೂಗಲ್ ಮ್ಯಾಪ್‌ನ ಮೊರೆ ಹೋಗಿದ್ದಾರೆ. ಲಾರಿ ಹುಸ್ನಾಬಾದ್‌ಗೆ ಹೋಗುತ್ತಿದ್ದಾಗ ಗೌರವೆಲ್ಲಿ ಜಲಾಶಯದ ಬಳಿ ದಾರಿ ತಪ್ಪಿದೆ. ಗೂಗಲ್‌ ಮ್ಯಾಪ್​ನಲ್ಲಿ ದಾರಿ ತಪ್ಪಿನಿಂದಾಗಿ ಲಾರಿ ಗೋಧಾವರಿ ನದಿಯಲ್ಲಿ ಮುಳುಗಿ ಹೋಗಿದೆ.
ರಸ್ತೆಯಿಂದ ನದಿಗೆ ಇಳಿಯುತ್ತಿದ್ದಂತೆ ಲಾರಿ ಚಾಲಕ ಶಿವುಗೆ ಗಾಬರಿಯಾಗಿದೆ. ನೀರು ಎಂಜಿನ್‌ವರೆಗೂ ತುಂಬಿದ ಮೇಲೆ ಲಾರಿ ಬಿಟ್ಟು ನದಿಯ ದಡ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಲಾರಿಯ ಅವಸ್ಥೆಯನ್ನು ನೋಡಿ ಚಾಲಕ ಶಿವುಗೆ ಸಹಾಯ ಮಾಡಿದ್ದಾರೆ. ಹಗ್ಗ ಕಟ್ಟಿ ಗ್ರಾಮಸ್ಥರು ನದಿ ನೀರಿನಲ್ಲಿ ಸಿಲುಕಿಕೊಂಡಿದ್ದ ಲಾರಿಯನ್ನು ಕಷ್ಟಪಟ್ಟು ಹೊರಗಡೆ ಎಳೆದಿದ್ದಾರೆ. ಹರಸಾಹಸಪಟ್ಟ ಬಳಿಕ ಲಾರಿಯನ್ನು ಕೊನೆಗೆ ಮರಳಿ ರಸ್ತೆಗಿಳಿಸಲಾಗಿದ್ದು, ಲಾರಿ ಚಾಲಕ ನಿಟ್ಟುಸಿರು ಬಿಟ್ಟು ಸರಿಯಾದ ದಾರಿ ಹಿಡಿದಿದ್ದಾನೆ.

ಪದೇ ಪದೇ ದಾರಿ ತಪ್ಪಿಸುವ ಮಾರ್ಗ!

ತೆಲಂಗಾಣದ ಸಿದ್ದಿಪೇಟೆಯ ಈ ಮಾರ್ಗದಲ್ಲಿ ಈಗಲೂ ಗೂಗಲ್ ಮ್ಯಾಪ್‌ನಲ್ಲಿ ನದಿಯೇ ರಸ್ತೆಯಾಗಿ ತೋರಿಸಲಾಗ್ತಿದೆ. ಸಿದ್ದಿಪೇಟೆ ಜಿಲ್ಲೆಯ ಗುಡತಿಪಲ್ಲಿಯಲ್ಲಿ ಗೌರವಳ್ಳಿ ಯೋಜನೆಯ ಭಾಗವಾಗಿ ಡ್ಯಾಂ ಕಟ್ಟಲಾಗಿದೆ. ಜಲಾಶಯದ ಹಿನ್ನೀರಿನಿಂದಾಗಿ ಹಳೆಯ ರಸ್ತೆಗಳು ನದಿ ನೀರಿನಲ್ಲಿ ಮುಳುಗಿ ಹೋಗಿವೆ. ಆದ್ರೆ ಗೂಗಲ್​ಮ್ಯಾಪ್​ನಲ್ಲಿ ಮೊದಲಿದ್ದ ರಸ್ತೆಗಳೇ ಇನ್ನೂ ತೋರಿಸುತ್ತಿದೆ. ಈ ಎಡವಟ್ಟಿನಿಂದಾಗಿ ಪದೇ ಪದೇ ವಾಹನಗಳು ಇದೇ ಮಾರ್ಗದಲ್ಲಿ ಬಂದು ಅಪಾಯದಲ್ಲಿ ಸಿಲುಕುತ್ತಿವೆ. ಗೂಗಲ್‌ ಮ್ಯಾಪ್‌ನಲ್ಲಿ ಬದಲಾವಣೆ ಮಾಡಿದ್ರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಂದು ಅಲ್ಲಿನ ಸ್ಥಳೀಯರ ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೂಗಲ್ ಮ್ಯಾಪ್ ಬಳಸುವವರೇ ಹುಷಾರ್.. ದಾರಿ ತಪ್ಪಿದ ಈ ಲಾರಿ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2023/09/Google-Map-Lorry.jpg

Load More