newsfirstkannada.com

ಚಾರ್ಮಾಡಿ ಘಾಟಿಯ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ; ಚಾಲಕ, ಕ್ಲೀನರ್​​ನ ಜೀವ ಉಳಿಸಿತು ಒಂದು ಮರ..!

Share :

16-09-2023

    ಮೂಡಿಗೆರೆ ತಾಲೂಕಿನ ಸೋಮನಕಾಡು ಬಳಿ ದುರ್ಘಟನೆ

    ದಟ್ಟ ಮಂಜು, ಮಳೆಯಿಂದ ದಾರಿ ಕಾಣದೇ ಲಾರಿ ಪಲ್ಟಿ

    ಚಿತ್ರದುರ್ಗಕ್ಕೆ ನೀರಿನ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ 100 ಅಡಿ ಪ್ರಪಾತಕ್ಕೆ ಲಾರಿಯೊಂದು ಬಿದ್ದಿದೆ. ದುರ್ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೇ ಲಾರಿ ಪಲ್ಟಿಯಾಗಿದೆ. ಪ್ರಪಾತಕ್ಕೆ ಬೀಳುತ್ತಿದ್ದಂತೆಯೇ ಲಾರಿ ಮರಕ್ಕೆ ಬಡಿದು ಸಿಕ್ಕಿಹಾಕಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಅಲ್ಲಿಗೆ ಆಗಮಿಸಿ ಚಾಲಕ ಮತ್ತು ಕ್ಲೀನರ್​​ನನ್ನು ರಕ್ಷಿಸಿದ್ದಾರೆ.

ಈ ಮೂಲಕ ಪ್ರಾಣಸಂಕಟಕ್ಕೆ ಸಿಲುಕಿದ್ದ ಇಬ್ಬರು ಜೀವವನ್ನು ಮರ ಉಳಿಸಿದೆ. ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿಗಳನ್ನು ಲಾರಿ ಸಾಗಿಸುತ್ತಿತ್ತು. ಘಟನಾ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾರ್ಮಾಡಿ ಘಾಟಿಯ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ; ಚಾಲಕ, ಕ್ಲೀನರ್​​ನ ಜೀವ ಉಳಿಸಿತು ಒಂದು ಮರ..!

https://newsfirstlive.com/wp-content/uploads/2023/09/CKM_CHARMADI.jpg

Load More