newsfirstkannada.com

ಕುಡಿದು ಅಡ್ಡಾದಿಡ್ಡಿ ಲಾರಿ ಚಾಲನೆ; 9 ಬೈಕ್​​ಗಳ ಮಧ್ಯೆ ಭೀಕರ ಅಪಘಾತ; ಆಮೇಲೇನಾಯ್ತು?

Share :

05-08-2023

  ಡ್ರಿಂಕ್ ಅಂಡ್ ಡ್ರೈವ್ ಮಾಡಿದ ಲಾರಿ ಚಾಲಕ

  9 ಬೈಕ್, 1 ಲಾರಿ ಸ್ಥಳದಲ್ಲೇ ಸಂಪೂರ್ಣ ಜಖಂ

  ಬೆಳಗಾವಿಯ ಲಾರಿ ಚಾಲಕನಿಂದ ಅವಘಡ!

ಕೊಪ್ಪಳ: ಕುಡಿದ ಅಮಲಿನಲ್ಲಿ ಚಾಲಕನೋರ್ವ ಸಿನಿಮೀಯ ರೀತಿಯಲ್ಲಿ 9 ಬೈಕ್​ಗಳ ಮೇಲೆ ಲಾರಿ ಹರಿಸಿದ ಘಟನೆ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಟೇಲ್​ಗೆ ಲಾರಿ ನುಗ್ಗಿದೆ. ಪರಿಣಾಮ 9 ಬೈಕ್ ಹಾಗೂ 1 ಲಾರಿ ಸಂಪೂರ್ಣ ಜಖಂಗೊಂಡಿವೆ. ಇನ್ನು ಲಾರಿ ನುಗ್ಗಿದ್ದನ್ನು ಕಂಡ ಜನರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಮೂಲದ ಚಾಲಕ ಕುಡಿದು ಲಾರಿ ಚಾಲನೆ ಮಾಡಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಕನೂರ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದು ಡಿಕ್ಕಿ ಹೊಡೆದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಅಡ್ಡಾದಿಡ್ಡಿ ಲಾರಿ ಚಾಲನೆ; 9 ಬೈಕ್​​ಗಳ ಮಧ್ಯೆ ಭೀಕರ ಅಪಘಾತ; ಆಮೇಲೇನಾಯ್ತು?

https://newsfirstlive.com/wp-content/uploads/2023/08/accidenr.jpg

Load More