newsfirstkannada.com

ದೇವರ ದರ್ಶನ ಮುಗಿಸಿ ಬರ್ತಿದ್ದವರಿಗೆ ಯಮನಾದ ಲಾರಿ; ಭೀಕರ ಅಪಘಾತಕ್ಕೆ ನಾಲ್ವರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

Share :

28-08-2023

  ದೇವರ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ದುರ್ಘಟನೆ

  ಮಹಾರಾಷ್ಟ್ರದ ಮೂಲದ ನಾಲ್ವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

  ಆಸ್ಪತ್ರೆಯಲ್ಲಿದ್ದ ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ ಶರಣು ಸಲಗರ

ಬೀದರ್: ಲಾರಿ ಹಾಗೂ ಟಂಟಂ ವಾಹನದ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದೆ.

ಮಹಾರಾಷ್ಟ್ರ ಮೂಲದ ಭಕ್ತರು ಶ್ರಾವಣ ಸೋಮವಾರ ನಿಮಿತ್ತ ಚಂಡಕಾಪುರದ ಅಮೃತ ಕುಂಡಾ ಮಂದಿರಕ್ಕೆ ಆಗಮಿಸಿದ್ದರು. ದೇವರ ದರ್ಶನ ಮುಗಿಸಿಕೊಂಡು ಹಿಂತಿರುಗಿ ಹೋಗುವಾದ ಈ ದುರ್ಘಟನೆ ಸಂಭವಿಸಿದೆ. ಮೃತ ನಾಲ್ವರು ಮಹಾರಾಷ್ಟ್ರದ ಮೂಲದ ಮುರುಮ್ ನಿವಾಸಿಗಳು. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬಸವಕಲ್ಯಾಣ ಸಂಚಾರ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಹಾರಾಷ್ಟ್ರ ಉಮ್ಮರಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಶಾಸಕ ಶರಣು ಸಲಗರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ದರ್ಶನ ಮುಗಿಸಿ ಬರ್ತಿದ್ದವರಿಗೆ ಯಮನಾದ ಲಾರಿ; ಭೀಕರ ಅಪಘಾತಕ್ಕೆ ನಾಲ್ವರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

https://newsfirstlive.com/wp-content/uploads/2023/08/death-22.jpg

Load More