newsfirstkannada.com

×

ಲಾರಿ-ಬೈಕ್​​ ಮಧ್ಯೆ ಭೀಕರ ಅಪಘಾತ; ಒಂದು ಸಾವು, ಹೊತ್ತಿ ಉರಿದ ವಾಹನ

Share :

Published November 6, 2023 at 2:13pm

Update November 6, 2023 at 6:50pm

    ಚಿಕ್ಕಬಳ್ಳಾಪುರದ ಹಾರೋಬಂಡೆ ಗ್ರಾಮದಲ್ಲಿ ಘಟನೆ

    ಬೈಕ್ ಸವಾರ ದುರ್ಘಟನಾ ಸ್ಥಳದಲ್ಲೇ ಸಾವು

    ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲು

ಚಿಕ್ಕಬಳ್ಳಾಪುರದ ಹಾರೋಬಂಡೆ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾನೆ. ಚಲಿಸುತ್ತಿದ್ದ ಬೈಕ್​ಗೆ ಲಾರಿ ಗುದ್ದಿದ ಪರಿಣಾಮ ದುರಂತ ನಡೆದಿದೆ, ಅಪಘಾತದ ಹೊಡೆತಕ್ಕೆ ಲಾರಿ ಹೊತ್ತಿ ಉರಿದಿದೆ.

ದುರ್ಘಟನಾ ಸ್ಥಳದಲ್ಲೇ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44 ರ ಹಾರೋಬಂಡೆ ಬಳಿ ದುರ್ಘಟನೆ ನಡೆದಿದೆ. ಲಾರಿಯಡಿ ಸಿಲುಕಿದ ಬೈಕ್​ಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಲಾರಿಗೆ ವ್ಯಾಪಿಸಿದೆ.

ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ ಸಮೀಪದಲ್ಲೇ ಅಪಘಾತ ನಡೆದಿದೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾರಿ-ಬೈಕ್​​ ಮಧ್ಯೆ ಭೀಕರ ಅಪಘಾತ; ಒಂದು ಸಾವು, ಹೊತ್ತಿ ಉರಿದ ವಾಹನ

https://newsfirstlive.com/wp-content/uploads/2023/11/LORRY.jpg

Load More