newsfirstkannada.com

ಬೈಕ್​ಗೆ ಡಿಕ್ಕಿ ಹೊಡೆದ ಲಾರಿ; ಸ್ಥಳದಲ್ಲೇ 3 ವರ್ಷದ ಕಂದಮ್ಮ ದಾರುಣ ಸಾವು

Share :

Published June 21, 2024 at 6:38pm

    3 ವರ್ಷದ ಮಗುವಿನ ತಲೆ ಮೇಲೆ​ ಹರಿದ ಲಾರಿಯ ಚಕ್ರ

    ಬೈಕ್​ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾದ ಚಾಲಕ

    ಗಂಭೀರ ಗಾಯಗೊಂಡ ಮೃತ ಮಗುವಿನ ತಂದೆ, ತಾಯಿ

ಚಿಕ್ಕಬಳ್ಳಾಪುರ: ಬೈಕ್​ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ಕೆಸ್ತೂರು ಗೇಟ್ ಬಳಿ ನಡೆದಿದೆ. ಧನ್ವಿತ್ (03) ಸ್ಥಳದಲ್ಲೇ ಮೃತಪಟ್ಟ ಮಗು.

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ದೊಡ್ಡಬಳ್ಳಾಪುರದ ತಿಪ್ಪಾಪುರ ಮೂಲದ ದಂಪತಿ ಹಾಗೂ ಮಗು ಬೈಕ್​​ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಲಾರಿಯು ಬೈಕ್​ಗೆ ಡಿಕ್ಕಿ ಹೊಡೆದಿದೆ. ಬಳಿಕ 3 ವರ್ಷದ ಮಗುವಿನ ತಲೆ ಮೇಲೆ ಲಾರಿಯ ಚಕ್ರ​​ ಹರಿದು ಹೋಗಿದೆ. ಪರಿಣಾಮದ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಇನ್ನು, ಬೈಕ್​ನಲ್ಲಿದ್ದ ತಂದೆ ಆಂಜಿನೇಯ ಹಾಗೂ ಪತ್ನಿ ಮಮತ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೈಕ್​ಗೆ ಡಿಕ್ಕಿ ಹೊಡೆದ ಚಾಲಕ ಲಾರಿಯನ್ನು 1 ಕಿಮೀ ದೂರದಲ್ಲಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ಗೆ ಡಿಕ್ಕಿ ಹೊಡೆದ ಲಾರಿ; ಸ್ಥಳದಲ್ಲೇ 3 ವರ್ಷದ ಕಂದಮ್ಮ ದಾರುಣ ಸಾವು

https://newsfirstlive.com/wp-content/uploads/2024/06/accident6-1.jpg

Load More