newsfirstkannada.com

ಬೈಕ್​​, ಲಾರಿ ನಡುವೆ ಭೀಕರ ರಸ್ತೆ ಅಪಘಾತ.. ಸ್ಥಳದಲ್ಲೇ ವಿದ್ಯಾರ್ಥಿ ಸಾವು, ಇಬ್ಬರ ಸ್ಥಿತಿ ಗಂಭೀರ

Share :

16-06-2023

  ನಗರದ ಸಂತೇಪೇಟೆ ಸರ್ಕಲ್‌ನಲ್ಲಿ ಭೀಕರ ರಸ್ತೆ ಅಪಘಾತ

  ಹೋಂಡಾ ಆಕ್ಟಿವಾಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಲಾರಿ

  ಸ್ಥಳದಲ್ಲೇ ಓರ್ವ ವಿದ್ಯಾರ್ಥಿ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

ಹಾಸನ: ಹೋಂಡಾ ಆಕ್ಟಿವಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರೋ ಘಟನೆ ನಗರದ ಸಂತೇಪೇಟೆ ಸರ್ಕಲ್‌ನಲ್ಲಿ ನಡೆದಿದೆ. ಅಭಿಲಾಷ್ (22) ಮೃತ ವಿದ್ಯಾರ್ಥಿ.

ಮೃತ ವಿದ್ಯಾರ್ಥಿ ಅಭಿಲಾಷ್​​ ಚಿಕ್ಕಡಲೂರು ಗ್ರಾಮದ ನಿವಾಸಿ. ಈ ಅಪಘಾತದಲ್ಲಿ ದೊಡ್ಡಪುರ ಗ್ರಾಮದ ರಘು, ವರುಣ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ರಘು ಎಂಬಾತನ ಕಾಲು ತುಂಡಾಗಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂವರು ವಿದ್ಯಾರ್ಥಿಗಳು ಹಾಸನದ ಖಾಸಗಿ ಕಾಲೇಜ್​​ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಂದೇ ಬೈಕ್​​ನಲ್ಲಿ ಅಭಿಲಾಷ್, ರಘು, ವರುಣ ಸಕಲೇಶಪುರ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​, ಲಾರಿ ನಡುವೆ ಭೀಕರ ರಸ್ತೆ ಅಪಘಾತ.. ಸ್ಥಳದಲ್ಲೇ ವಿದ್ಯಾರ್ಥಿ ಸಾವು, ಇಬ್ಬರ ಸ್ಥಿತಿ ಗಂಭೀರ

https://newsfirstlive.com/wp-content/uploads/2023/06/accident-29.jpg

Load More