ಜುಲೈ 16ರಂದು ನಡೆದ ಭೀಕರ ಅವಘಡ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣ
ಮಣ್ಣಿನಡಿಯಲ್ಲಿ ಕೇರಳ ಮೂಲದ ಲಾರಿ ಡ್ರೈವರ್ ನಾಪತ್ತೆಯಾಗಿದ್ದರು
ಸರಿಯಾಗಿ 71 ದಿನಗಳ ಹಿಂದೆ. ಜುಲೈ 16ನೇ ತಾರೀಖು ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಆಗಿತ್ತು. ಈ ಗುಡ್ಡ ಕುಸಿತದಿಂದ 11 ಜನರು ಮಣ್ಣಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಮಳೆ ನಡುವೆ ಕಾರ್ಯಾಚರಣೆ ಶುರು ಮಾಡಿದ ಜಿಲ್ಲಾಡಳಿತ, 11 ಜನರಲ್ಲಿ 8 ಮಂದಿಯ ಶವ ಪತ್ತೆ ಮಾಡಿದ್ರು. ಉಳಿದ ಮೂವರ ಮೃತದೇಹಗಳಿಗಾಗಿ ಸಾಕಷ್ಟು ಹರಸಾಹಸ ಪಟ್ಟರೂ ಪತ್ತೆಯಾಗಿರಲಿಲ್ಲ. ಸದ್ಯ, ಬರೋಬ್ಬರಿ 71 ದಿನಗಳ ನಂತರ ಮೂವರಲ್ಲಿ ಒಬ್ಬನ ಮೃತದೇಹ ಈಗ ಪತ್ತೆಯಾಗಿದೆ. ಜೊತೆಗೆ ನೀರಿನಡಿ ಸಿಲುಕಿದ್ದ ಲಾರಿಯನ್ನ ಹೊರ ತೆಗೆಯಲಾಗಿದೆ.
ಇದನ್ನೂ ಓದಿ: ಶಿರೂರು: ಇದು ನದಿಯಾಚೆಗಿನ ಕತೆ! ಕೊಚ್ಚಿ ಹೋಗುತ್ತಿರೋ 4 ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ ಈತ
ಅವತ್ತು ಜುಲೈ 15ನೇ ತಾರೀಖಿನ ರಾತ್ರಿ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗ್ತಾ ಇತ್ತು. ಸಹಜವಾಗಿ ಅರಬ್ಬಿ ಸಮುದ್ರ ಇರೋದ್ರಿಂದ ಮಳೆಯ ಆರ್ಭಟ ಜಾಸ್ತಿನೇ ಇತ್ತು. ಎಂದಿನಂತೆ ಮಲಗಿದ್ದ ಜನರಿಗೆ ಬೆಳಗ್ಗೆ ಏಳೋದ್ರೊಳಗೆ ಕೇಳಬಾರದ ಸುದ್ದಿ, ಉತ್ತರಕನ್ನಡ ಜಿಲ್ಲೆಯಿಂದ ಬಂದಿತ್ತು. ಜುಲೈ 16ನೇ ತಾರೀಖು ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ ಆಗಿತ್ತು. ಗುಡ್ಡದ ಪಕ್ಕದಲ್ಲಿದ್ದ ಲಕ್ಷಣ್ ನಾಯ್ಕ ಅನ್ನೋರ ಹೋಟೆಲ್ ಮೇಲೆ ಹೆಚ್ಚಾಗಿ ಮಣ್ಣು ಬಿದ್ದಿತ್ತು. ಘಟನೆಯಲ್ಲಿ ಲಕ್ಷ್ಮಣ್ ನಾಯ್ಕ, ಶಾಂತಿ ನಾಯ್ಕ, ಮಕ್ಕಳಾದ ರೋಷನ್, ಅವಂತಿ, ಉಳುವರೆ ಗ್ರಾಮದ ಸಣ್ಣಿಗೌಡ, ಟ್ಯಾಂಕರ್ ಚಾಲಕರಾದ ಶರವಣ, ಮುರುಗನ್, ಚಿಣ್ಣನ್, ಲಕ್ಷ್ಮಣ್ ಸಂಭಂದಿ ಜಗನ್ನಾಥ್, ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಹಾಗೂ ಸ್ಥಳೀಯ ಲೊಕೇಶ್ ನಾಪತ್ತೆಯಾಗಿದ್ದರು.
11 ಜನರಲ್ಲಿ 8 ಜನರ ಮೃತದೇಹವನ್ನ ಐದು ದಿನಗಳ ಕಾಲದ ಕಾರ್ಯಾಚರಣೆಯಲ್ಲಿ ಪತ್ತೆ ಮಾಡಲಾಯ್ತು. ಆದ್ರೆ, ಇನ್ನುಳಿದ ಮೂವರು ಅಂದ್ರೆ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ್ ಮತ್ತು ಜಗನ್ನಾಥ ನಾಯ್ಕ್ ಅವರ ಮೃತದೇಹಕ್ಕಾಗಿ ಪ್ರಯತ್ನ ಮಾಡಿದ್ರೂ, ಹೆಚ್ಚಿನ ಮಳೆಯಿಂದ ಶವ ಹುಡುಕಾಟಕ್ಕೆ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ; 29 ದಿನಗಳ ಬಳಿಕ ಅರ್ಜುನ್ಗಾಗಿ ಮತ್ತೆ ಹುಡುಕಾಟಕ್ಕಿಳಿದ ಈಶ್ವರ್ ಮಲ್ಪೆ
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಲಾರಿ ಒಳಗಿದ್ದ ಅರ್ಜುನ್ ನದಿಯ ಆಳದಲ್ಲಿ ಸಿಲುಕಿಕೊಂಡಿದ್ದರು. ಸುಮಾರು 20 ಅಡಿ ಅಳದಲ್ಲಿ ಲಾರಿ ಇದೆ ಅಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಇದೇ ಜಾಡನ್ನ ಹಿಡಿದು ಮಳೆ ನಡುವೆ ನದಿಯೊಳಗೆ ಮುಳುಗಿ ಎಷ್ಟೇ ಪ್ರಯತ್ನ ಪಟ್ಟರೂ ಈಶ್ವರ್ ಮಲ್ಪೆ ಟೀಂಗೆ ಮೃತದೇಹಗಳು ಪತ್ತೆಯಾಗಿರಲಿಲ್ಲ. ಮಳೆ ನಿಲ್ಲಲಿ ನಂತರ ಕಾರ್ಯಾಚರಣೆ ಶುರು ಮಾಡೋಣ ಅಂತ ಜಿಲ್ಲಾಡಳಿತಕ್ಕೆ ಈಶ್ವರ್ ಮಲ್ಪೆ ಸಲಹೆ ಕೊಟ್ಟರು.
ಇದಾದ್ಮೇಲೆ 15 ದಿನಗಳ ನಂತರ ಅಂದ್ರೇ ಅಕ್ಟೋಬರ್ 2ನೇ ತಾರೀಖಿನಿಂದ ಕಾರ್ಯಾಚರಣೆ ಶುರು ಮಾಡಿದಾಗ ಲಾರಿಯ ಅವಶೇಷಗಳು ನದಿಯೊಳಗೆ ಪತ್ತೆಯಾದ್ವು. ಅದೇ ಸ್ಥಳವನ್ನ ಟಾರ್ಗೆಟ್ ಮಾಡಿದ ಮುಳುಗು ತಜ್ಞರು, ಬರೋಬ್ಬರಿ 71 ದಿನಗಳ ಕಾಲ ಅಂದ್ರೇ ಅಕ್ಟೋಬರ್ 25ನೇ ತಾರೀಖು ಲಾರಿ ಹಾಗೂ ಲಾರಿ ಒಳಗಿದ್ದ ಅರ್ಜುನ್ ಅವರ ಮೃತದೇಹವನ್ನ ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಹೊರ ತೆಗೆಯಲಾಗಿದೆ.
ಇದನ್ನೂ ಓದಿ: ಶಿರೂರು: ಲಾರಿ ಚಾಲಕ ಅರ್ಜುನ್ ಹುಡುಕಲು ‘ಈಶ್ವರ’ನ ಮೊರೆ.. ಸಮುದ್ರದ ಆಳಕ್ಕೆ ಹೋಗಿ ಶವ ತರೋ ಸಾಹಸಿ ಈತ
ಅಷ್ಟಕ್ಕೂ ಕೇರಳದ ಕೋಯಿಕ್ಕೋಡ್ ಮೂಲದ 30 ವರ್ಷದ ಅರ್ಜುನ್ ಹಾಗೂ ಇನ್ನಿಬ್ಬರು ನಾಪತ್ತೆ ಆಗಿದ್ದು ಹೇಗೆ ಅನ್ನೋದರ ಮಾಹಿತಿ ಸಿಕ್ಕಿದೆ. ಲಾರಿ ಡ್ರೈವ್ ಮಾಡಿಕೊಂಡು ಟಿಂಬರ್ ಶಿಫ್ಟ್ ಮಾಡ್ತಿದ್ದರು ಅರ್ಜುನ್. ಲಾರಿ ಡ್ರೈವ್ ಮಾಡೋವಾಗ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಅರ್ಜುನ್ಗೆ ಜುಲೈ 15ನೇ ತಾರೀಖು ಮಧ್ಯರಾತ್ರಿ 2.47ಕ್ಕೆ ಮತ್ತೊಬ್ಬ ಲಾರಿ ಡ್ರೈವರ್ ಕಾಲ್ ಮಾಡಿ ಮಾತನಾಡಿದ್ದ. 3.45ರ ಸುಮಾರಿಗೆ ಇಲ್ಲೆ ನಿದ್ದೆ ಮಾಡಿ ಬೆಳಗ್ಗೆ ಹೊರಡೋಣ ಅಂತ ಶಿರೂರಿನಲ್ಲಿ ಲಾರಿ ನಿಲ್ಲಿಸಿ ಅರ್ಜುನ್ ಮಲಗಿದ್ದಾರೆ. ಆದರೆ ಜುಲೈ 16ರಂದು ಗುಡ್ಡ ಕುಸಿತಕ್ಕೆ ಲಾರಿ ಜೊತೆಗೆ ಅರ್ಜುನ್ ಕೂಡ ಮಿಸ್ ಆಗಿದ್ದರು. ಸದ್ಯ ಮೊದಲ ಪ್ರಯತ್ನವಾಗಿ ಅಕ್ಟೋಬರ್ 25ನೇ ತಾರೀಖು ಅರ್ಜುನ್ ಹಾಗೂ ಲಾರಿಯನ್ನ ನದಿಯಿಂದ ಹೊರತೆಗೆದಿದ್ದಾರೆ. ಇನ್ನು, ಗೋಕರ್ಣ ಮೂಲದ ಲೋಕೇಶ್ ನಾಯ್ಕ್ ಹಾಗೂ ಶಿರೂರು ಮೂಲದ ಜಗನ್ನಾಥ್ ನಾಯಕ್ ಅವರ ಮೃತದೇಹ ಇನ್ನು ಸಿಕ್ಕಿಲ್ಲ. ಅವರಿಬ್ಬರ ಮೃತದೇಹಕ್ಕೆ ಕಾರ್ಯಾಚರಣೆ ನಡೀತಾ ಇದೆ.
ಗೋವಾದಲ್ಲಿ ಮೀನುಗಾರರಾಗಿದ್ದ ಲೋಕೇಶ್ ನಾಯ್ಕ್, ತಮ್ಮ ಸ್ವಗ್ರಾಮ ಗೋಕರ್ಣದಿಂದ ಶೃಂಗೇರಿಗೆ ಕಡೆ ಹೋಗ್ತಿದ್ದರು. ಅದೇ ಸಮಯಕ್ಕೆ ಶಿರೂರಿಲ್ಲಿದ್ದ ಲಕ್ಷ್ಮಣ್ ನಾಯ್ಕ್ ಹೋಟೆಲ್ನಲ್ಲಿ ಟೀ ಕುಡಿಯೋ ಸಮಯದಲ್ಲಿ ಗುಡ್ಡ ಕುಸಿತದಿಂದ ಲೋಕೇಶ್ ನಾಪತ್ತೆಯಾಗಿದ್ದಾರೆ. ಇನ್ನು, ಜಗನ್ನಾಥ್ ನಾಯ್ಕ್ ಅನ್ನೋರು ಲಕ್ಷ್ಮಣ್ ನಾಯ್ಕ್ ಅವರ ಸಂಬಂಧಿ ಆಗಿದ್ದು, ಶಿರೂರಲ್ಲಿದ್ದ ಹೋಟೆಲ್ನ ಒಂದು ದಿನದ ಮಟ್ಟಿಗೆ ನೋಡಿಕೊಳ್ತಿದ್ದರು. ಆದ್ರೇ ವಿಧಿಯ ಆಟದಿಂದ ಜಗನ್ನಾಥ್ ಕೂಡ ನಾಪತ್ತೆ ಆಗಿದ್ದಾರೆ.
ವಿಧಿಯಾಟ ಬಲ್ಲವರಾರು ಅನ್ನೋ ಹಾಗೇ ರಾತ್ರಿ ಇದ್ದವರೂ ಬೆಳಗ್ಗೆಯೊಳಗೆ ಕಣ್ಮರೆಯಾಗಿದ್ದಾರೆ. ಮೃತದೇಹಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗ್ತಾ ಇರಲಿಲ್ಲ. ಆದ್ರೇ ಬರೋಬ್ಬರಿ 71 ದಿನಗಳ ನಂತರ ಲಾರಿ ಹಾಗೂ ಲಾರಿ ಡ್ರೈವರ್ ಅರ್ಜುನ್ ಮೃತದೇಹ ಪತ್ತೆಯಾಗಿ, ಕೇರಳಾಗೆ ಶಿಫ್ಟ್ ಮಾಡಿದ್ದಾರೆ. ಇನ್ನುಳಿದ ಇಬ್ಬರ ಮೃತದೇಹ ಆದಷ್ಟೂ ಬೇಗ ಪತ್ತೆಯಾಗಿ, ಅವರವರ ಕುಟುಂಬಕ್ಕೆ ಕೊನೆ ಕ್ಷಣದ ಕಾರ್ಯವನ್ನಾದ್ರೂ ಮಾಡಲಿ ಅಂತ ಜನ ಪ್ರಾರ್ಥನೆ ಮಾಡ್ತಾ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ