newsfirstkannada.com

ತೂಕ ಕಡಿಮೆ ಮಾಡೋ ‘ಕೀಟೋ’ ಡಯಟ್ ಡೇಂಜರ್‌.. ನೀವೇನಾದ್ರೂ ಮಾಡ್ತಿದ್ರೆ ಈ ಸ್ಟೋರಿ ಓದಲೇಬೇಕು?

Share :

08-08-2023

    ಕೀಟೋ ಡಯಟ್‌ ಫುಡ್​ನಲ್ಲಿ ಶೇ.70 ಕೊಬ್ಬು, 25 ರಷ್ಟು ಪ್ರೋಟಿನ್

    ಇದು ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿ

    ಈ ಪ್ರೋಟಿನ್‌ ಫುಡ್‌ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತವೆ

ಬೆಂಗಳೂರು: ಕೀಟೋ ಡೈಯಟ್‌ ಫುಡ್.. ದೇಹದ ತೂಕವನ್ನು ಬಹಳ ಬೇಗ ಕಡಿಮೆ ಮಾಡೋ ಆಹಾರ ಪದ್ಧತಿ. ಇತ್ತೀಚೆಗೆ ಸಿಲಿಕಾನ್ ಸಿಟಿಯಂತಹ ಮಹಾನಗರದಲ್ಲಿ ಕೀಟೋ ಡೈಯಟ್‌ ಫುಡ್ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಅದ್ರಲ್ಲೂ ದೇಹದ ತೂಕವನ್ನು ಬಹಳ ಬೇಗ ಕಡಿಮೆ ಮಾಡೋದ್ರಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಈ ಡಯಟ್ ಫುಡ್‌ಗಳನ್ನು ಸೇವಿಸೋದ್ರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಆದ್ರೆ, ಇದರಿಂದಾಗೋ ಅಡ್ಡ ಪರಿಣಾಮಗಳು ಭಯಾನಕವಾಗಿದೆ. ಕೀಟೋ ಡೈಯಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಡೈಯಟ್ ಮಾಡೋದ್ರಿಂದ ಹೃದಯಾಘಾತ ಸಂಭವಿಸೋ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವರು ಈ ಕೀಟೋ ಡೈಯಟ್ ಫುಡ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನೀವೇನಾದ್ರೂ ಈ ರೀತಿಯ ಕೀಟೋ ಡೈಯಟ್‌ನಲ್ಲಿದ್ರೆ ಈ‌ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

ಅತಿಯಾದ ಕೀಟೋ ಡೈಯಟ್‌ ಫುಡ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಫುಡ್‌ನಲ್ಲಿ ಅತಿಯಾದ ಪ್ರೋಟಿನ್ ಅಂಶಗಳು ಇರುತ್ತೆ. ಕಾರ್ಬೋಹೈಡ್ರೇಟ್ ಇರೋದಲ್ಲ. ಅತಿಯಾದ ಪ್ರೋಟಿನ್‌ ಫುಡ್‌ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತವೆ. ಇದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗಿದೆ. ಹೀಗಾಗಿ ಕೀಟೋ ಡೈಯೆಟ್ ಲಿಮಿಟ್ ಆಗಿ ಇರಲಿ ಎಂದು ಹೃದ್ರೋಗ ತಜ್ಞ ಡಾ.‌ಸಿ.ಎನ್ ಮಂಜುನಾಥ್ ಅವರು ಸಲಹೆ ನೀಡಿದ್ದಾರೆ.

ಕೀಟೋ ಡೈಯಟ್‌ ಫುಡ್‌ನಲ್ಲಿ ಬಳಸೋ ಆಹಾರಗಳು

‘ಕೀಟೋ ಡಯಟ್’ ಎಂದರೇನು?

ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿ
ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ
ಕೀಟೋ ಫುಡ್​ನಲ್ಲಿ ಶೇ.70 ಕೊಬ್ಬು, 25 ರಷ್ಟು ಪ್ರೋಟಿನ್ ಇರಲಿದೆ
ಶೇಕಡಾ 5ರಷ್ಟು ಮಾತ್ರಾ ಕಾರ್ಬೋಹೈಡ್ರೇಟ್ ಅಂಶ ಹೊಂದಿರುತ್ತೆ
ಡಯಟ್​ನಲ್ಲಿರುವವರು ಮಾಂಸ, ಮೊಟ್ಟೆ, ಬಾದಾಮಿ, ಚೀಸ್
ಕ್ರೀಮ್, ಬೆಣ್ಣೆ, ಪನ್ನೀರ್, ಸೇರಿದಂತೆ ಅನೇಕ‌ ಪ್ರೋಟಿನ್ ಸೇವನೆ
ಅಕ್ಕಿ, ರಾಗಿ, ಮೈದಾ, ಓಟ್ಸ್​ನಂತಹ ಕಾರ್ಬೋಹೈಡ್ರೇಟ್​ ಇರೋದಿಲ್ಲ
ಬ್ರೆಡ್, ಕಾರ್ನ್, ಆಲೂಗಡ್ಡೆ, ಸೇಬು, ಬಾಳೆಹಣ್ಣು ಸೇವನೆ ಮಾಡುವುದಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ತೂಕ ಕಡಿಮೆ ಮಾಡೋ ‘ಕೀಟೋ’ ಡಯಟ್ ಡೇಂಜರ್‌.. ನೀವೇನಾದ್ರೂ ಮಾಡ್ತಿದ್ರೆ ಈ ಸ್ಟೋರಿ ಓದಲೇಬೇಕು?

https://newsfirstlive.com/wp-content/uploads/2023/08/Dr-Cn-Manjunath-Keto-Diet.jpg

Load More