newsfirstkannada.com

ತಂಗಿಗೆ ಮೆಸೇಜ್​​ ಮಾಡಬೇಡಿ ಎಂದಿದ್ದಕ್ಕೆ ಇರಿದು ಕೊಂದ ಹಂತಕರು..? ಏನಿದು ಕೇಸ್​​..?

Share :

24-06-2023

    ತಂಗಿಗೆ ಮಸೇಜ್​​ ಮಾಡಬೇಡಿ ಎಂದು ಬೈದಿದ್ದ ಸಹೋದರ

    ಬೈದಿದ್ದಕ್ಕೆ ಸಹೋದರನ ವಿರುದ್ಧ ಸೇಡು ತೀರಿಸಿಕೊಂಡ ಪುಂಡರು

    ಸ್ನೇಹಿತನ ಮೂಲಕ ಕರೆಸಿ ಆತನನ್ನು ಬರ್ಬರವಾಗಿ ಕೊಂದ ಆರೋಪ

ರಾಯಚೂರು: ತಂಗಿಗೆ ಮೆಸೇಜ್​​ ಮಾಡಬೇಡಿ ಎಂದಿದ್ದಕ್ಕೆ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರಾಜ್​​ (23) ಎಂಬಾತ ಮೃತ ಯುವಕ. ಬಸವರಾಜ್​​​ ಮತ್ತು ಹನುಮಂತ ಎಂಬುವರ ವಿರುದ್ಧ ಕೊಲೆಗೈದ ಆರೋಪ ಕೇಳಿ ಬಂದಿದೆ.

ಆರೋಪಿಗಳು ಮೃತ ದೇವರಾಜ್​ ತಂಗಿಗೆ ಲವ್​ ಮಾಡಿ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ದೇವರಾಜ್​​ ತನ್ನ ತಂಗಿಗೆ ಮೆಸೇಜ್​ ಮಾಡೋದು ನಿಲ್ಲಿಸಿ ಎಂದು ಬೈದು ಬುದ್ಧಿ ಹೇಳಿದ್ದ. ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳಲು ದೇವರಾಜ್​​ಗೆ ಸ್ನೇಹಿತನಿಂದ ಮೆಸೇಜ್​ ಮಾಡಿ ಕರೆಸಿಕೊಂಡಿದ್ದರು ಆರೋಪಿಗಳು.

ಇನ್ನು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಲ್ಲಿ ದೇವರಾಜ್​ಗೆ ಬಸವರಾಜ್​​ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಆರೋಪ ಇದೆ. ಬಸವರಾಜ್ ಕಡೆಯವರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಮೃತ ದೇವರಾಜ್​ ವಿರುದ್ಧ ಜಾತಿ ನಿಂದನೆ ಅಡಿಯಲ್ಲಿ ಕೌಂಟರ್​ ಕೇಸ್​ ಮಾಡಲಾಗಿದೆ. ಮಸ್ಕಿ ಪೊಲೀಸ್​ ಠಾಣೆಯಲ್ಲಿ ಕೇಸ್​​, ಕೌಂಟರ್​​ ಕೇಸ್​ ದಾಖಲಾಗಿದೆ.

ತಂಗಿಗೆ ಮೆಸೇಜ್​​ ಮಾಡಬೇಡಿ ಎಂದಿದ್ದಕ್ಕೆ ಇರಿದು ಕೊಂದ ಹಂತಕರು..? ಏನಿದು ಕೇಸ್​​..?

https://newsfirstlive.com/wp-content/uploads/2023/06/Crime-News-3.jpg

Load More