newsfirstkannada.com

ಪ್ರೇಮಿಗಳ ಖಾಸಗಿ ವಿಡಿಯೋ ಲೀಕ್​ ಮಾಡೋ ಬೆದರಿಕೆ; 1 ಲಕ್ಷಕ್ಕೆ ಡಿಮ್ಯಾಂಡ್​ ಇಟ್ಟಿದ್ದ ಇಬ್ಬರು ಅಂದರ್​​

Share :

15-09-2023

    ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಮಾತೊಂದು ಇದೆ

    ಸಂಬಂಧಿ ಯುವತಿಯನ್ನೇ ಸಮಸ್ಯೆಗೆ ಸಿಲುಕಿದ ಮಹಿಳೆ

    ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲಾಕ್​ ಮೇಲ್​​​

ಬೆಂಗಳೂರು: ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಒಂದು ಮಾತಿದೆ. ಈ ಕಥೆಯಲ್ಲಿ ಆ ಮಾತು ನಿಜವಾದಂತಿದೆ. ಸಂಬಂಧಿ ಅಂತ ನಂಬಿದ್ದಕ್ಕೆ ಮಾಡಬಾರದ ಕೆಲಸ ಮಾಡಿದ ಆ ಹೆಣ್ಣು ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಕ್ಯಾಮೆರಾ ಇಟ್ಟ ಕಿಲಾಡಿಗಳು

ಹೋಟೆಲ್​ಗೆ ಪದೇ ಪದೇ ಹೋಗ್ತಿದ್ರಿಂದ ಆತ್ಮೀಯತೆ ಬೆಳೆದಿತ್ತು. ಹೀಗಾಗಿ ನಯನ ಬಳಿ ಬಾಯ್​ಫ್ರೆಂಡ್​ ಬಗ್ಗೆ ಯುವತಿ ಹೇಳ್ಕೊಂಡಿದ್ದಳು. ಇದನ್ನೇ ಎನ್​ಕ್ಯಾಶ್​ ಮಾಡ್ಕೊಂಡ ನಯನ ಪ್ಲಾನ್​ವೊಂದು ಮಾಡಿದ್ದಳು. ಬಾಯ್​ಫ್ರೆಂಡ್​ನ ಕರ್ಕೊಂಡು ಬರುವಂತೆ ತಿಳಿಸಿದ ನಯನ, ಇಬ್ಬರನ್ನೂ ರೂಮ್​ನಲ್ಲಿ ಬಿಟ್ಟು ಕ್ಯಾಮೆರಾ ಇಟ್ಟಿದ್ದಳು.

ಬಳಿಕ ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾಳೆ. ಅದು ಎಂಬಿಎ ಪದವೀಧರೆ ವಿದ್ಯಾರ್ಥಿನಿಗೆ ಬ್ಲಾಕ್ ಮೇಲ್ ಮಾಡಿರೋದು. ಅವರೇ ರೂಮ್ ಕೊಟ್ಟು ಅವರೆ ಬಲೆ ಬೀಸಿದ್ರು. ಶೆಟ್ಟಿ ಲಂಚ್ ಹೋಮ್ ಹೋಟೆಲ್​​​ನಲ್ಲಿ ಕೃತ್ಯ ನಡೆದಿದೆ.

ರಹಸ್ಯವಾಗಿ‌ ರೂಮ್​​ನಲ್ಲಿ ಅಡಗಿಸಿ ಕ್ಯಾಮೆರಾ ಇಡಲಾಗಿತ್ತು. ಯುವತಿಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದವರು ಈಗ ಅಂದರ್ ಆಗಿದ್ದಾರೆ. ನಯನಾ ಹಾಗೂ ಪಾಟ್ನರ್​ ಕಿರಣ್ ಬಂಧಿತರು. ಇಬ್ಬರು ಒಂದ ಲಕ್ಷಕ್ಕೆ ಡಿಮ್ಯಾಂಡ್​ ಇಟ್ಟಿದ್ದರು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸ್ತೀನಿ ಎಂದು ಕಿರಣ್​ ಬೆದರಿಕೆ ಹಾಕಿದ್ದ.

ಬ್ಲಾಕ್ ಮೇಲ್ ಅಸಲಿ ಕಥೆ ಏನು?

  • ನಯನ, ಕಿರಣ್ ಜೊತೆಯಾಗಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ರು
  • ಕೆಂಗೇರಿ ಮುಖ್ಯ ರಸ್ತೆಯಲ್ಲಿರೋ ಕೆಂಚನಾಪುರದಲ್ಲಿ ಆರಂಭಿಸಿದ್ದ ಹೋಟೆಲ್
  • ಅದೇ ಹೋಟೆಲ್​ಗೆ ಆಗಾಗ ಬರ್ತಿದ್ದ ನಯನ ಸಂಬಂಧಿ ಯುವತಿ
  • ಎಂಬಿಎ ವಿದ್ಯಾರ್ಥಿನಿ ಆಗಿರುವ ಯುವತಿ ಪ್ರಿಯಕರನೊಂದಿಗೆ ಬರ್ತಿದ್ದಳು
  • ಹೋಟೆಲ್​​ನಲ್ಲಿ ಯುವತಿ ಜೊತೆಗೆ ಹೋಗ್ತಿದ್ದ ಪ್ರಿಯಕರ ಲಾಕ್​ ಆಗಿದ್ದಾನೆ
  • ಹೋಟೆಲ್ ರೂಮ್​​ನಲ್ಲಿ ಇಬ್ಬರು ಇರಿ ಎಂದು ಹೇಳಿಕೊಟ್ಟಿದ್ದ ನಯನ
  • ಕೊನೆಗೂ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡರು
  • ಅದನ್ನ ಅಶ್ಲೀಲವಾಗಿ ಎಡಿಟ್ ಮಾಡಿ‌ ಯುವತಿಗೆ ವಾಟ್ಸ್ ಆ್ಯಪ್ ಮಾಡಿದ್ದ ಕಿರಣ್
  • ನಂತರ ಫೋಟೊ, ವಿಡಿಯೋ ತಕ್ಷಣ ಡಿಲೀಟ್ ಮಾಡಿಬಿಡ್ತಿದ್ದ
  • ಕರೆ ಮಾಡಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಿರಣ್​ ಕೊನೆಗೂ ಅಂದರ್​​
  • ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಕೆ
  • ಇದರಿಂದ ಹೆದರಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು
  • ದೂರು ದಾಖಲಿಸಿ ನಯನ ಹಾಗೂ ಕಿರಣ್ ಬಂಧಿಸಿದ ಪೊಲೀಸರು
  • ಮೊಬೈಲ್ ವಶಕ್ಕೆ ಪಡೆದು ವಿಡಿಯೋ ಡಿಲೀಟ್ ಮಾಡಿದ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳ ಖಾಸಗಿ ವಿಡಿಯೋ ಲೀಕ್​ ಮಾಡೋ ಬೆದರಿಕೆ; 1 ಲಕ್ಷಕ್ಕೆ ಡಿಮ್ಯಾಂಡ್​ ಇಟ್ಟಿದ್ದ ಇಬ್ಬರು ಅಂದರ್​​

https://newsfirstlive.com/wp-content/uploads/2023/09/Crime-News1243.jpg

Load More