newsfirstkannada.com

ಮದುವೆ ಆಗದೇ ಕೈ ಕೊಟ್ಟ ಪ್ರಿಯಕರ.. ಮನನೊಂದ ಯುವತಿ ಸಾವಿಗೆ ಶರಣು; ಆಗಿದ್ದೇನು?

Share :

Published June 23, 2024 at 5:35pm

  ಮಹಿಳಾ ಸ್ವಾಧಾರ ಕೇಂದ್ರದ ಕಟ್ಟಡ ಮೇಲಿಂದ ಬಿದ್ದು ಯುವತಿ ಆತ್ಮಹತ್ಯೆ

  ಜಲಾಲನಗರದ ವಿನಯರೆಡ್ಡಿ ಎಂಬಾತನನ್ನು ಪ್ರೀತಿಸಿದ್ದ ಮೃತ ಅನುರಾಧ

  ನಮ್ಮಿಬ್ಬರನ್ನು ರಕ್ಷಣೆ ಮಾಡಿ ಅಂತ ಪೋಲಿಸರ ಮೋರೆ ಹೋಗಿದ್ದ ಪ್ರೇಮಿಗಳು

ರಾಯಚೂರು: ಪ್ರಿಯಕರ ಮದುವೆಗೆ ನಿರಾಕರಿಸಿದ್ದ ಎಂಬ ಕಾರಣಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ದೇವರ ಕಾಲೋನಿಯಲ್ಲಿನ ಸ್ವಾಧಾರ ಕೇಂದ್ರದಲ್ಲಿ ನಡೆದಿದೆ. ಅನುರಾಧ (19) ಮೃತ ಯುವತಿ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ಮೃತ ಅನುರಾಧ ವಿನಯರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಈ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಪ್ರೇಮಿಗಳು ಅವರ ರಕ್ಷಣೆಗಾಗಿ ಮಾರ್ಕೆಟ್‌ ಯಾರ್ಡ್ ಠಾಣೆಗೆ ಹೋಗಿದ್ದರು. ಆಗ ಪೊಲೀಸರು ಪ್ರೇಮಿಗಳನ್ನು ಸ್ವಾಧಾರ ಕೇಂದ್ರಕ್ಕೆ ಕಳುಹಿಸಿದ್ದರು. ಇದೇ ವೇಳೆ ಯುವಕ ಯುವತಿಯ ಪ್ರೀತಿ ನಿರಾಕರಿಸಿದ್ದಾನಂತೆ. ಇದಕ್ಕೆ ಮನನೊಂದ ಯುವತಿ ನಿನ್ನೆ ರಾತ್ರಿ ಸ್ವಾಧಾರ ಕೇಂದ್ರದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸ್ವಾಧಾರ ಕೇಂದ್ರದಿಂದ ಜಿಗಿದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆಗೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾಳೆ. ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗದೇ ಕೈ ಕೊಟ್ಟ ಪ್ರಿಯಕರ.. ಮನನೊಂದ ಯುವತಿ ಸಾವಿಗೆ ಶರಣು; ಆಗಿದ್ದೇನು?

https://newsfirstlive.com/wp-content/uploads/2024/06/death14.jpg

Load More