newsfirstkannada.com

×

Breaking News: ಸಿಲಿಂಡರ್ ಬೆಲೆಯಲ್ಲಿ ಇಳಿಕೆ.. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

Share :

Published August 1, 2023 at 9:10am

    ತೈಲ ಕಂಪನಿಗಳಿಂದ ಮಹತ್ವದ ನಿರ್ಧಾರ

    99.75 ರೂಪಾಯಿ ಇಳಿಕೆ ಮಾಡಿದ ಕಂಪನಿಗಳು

    ನಿರಂತರ ಬೆಲೆ ಏರಿಕೆ ಮಧ್ಯೆ ಕೊಂಚ ಸಮಾಧಾನ ಸುದ್ದಿ

ಬೆಂಗಳೂರು: ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್​ ಬೆಲೆಯಲ್ಲಿ ಇಳಿಕೆ ಮಾಡಿವೆ. 19 ಕೆಜಿಯ ಎಲ್​ಪಿಜಿ ಸಿಲಿಂಡರ್​​ನ ಬೆಲೆಯಲ್ಲಿ 99.75 ರೂಪಾಯಿ ಇಳಿಕೆ ಮಾಡಲಾಗಿದೆ. ಈ ಮೂಲಕ ಒಂದು ಸಿಲಿಂಡರ್ ಬಲೆ ದೆಹಲಿಯಲ್ಲಿ 1,680 ರೂಪಾಯಿ ಆಗಿದೆ.

ಎಲ್ಲೆಲ್ಲಿ ಎಷ್ಟು ರೂ. ಬೆಲೆ..?

ಕೋಲ್ಕತ್ತ 1,802.50 ರೂ, ಮುಂಬೈ 1,640.50 ರೂಪಾಯಿ ಇದ್ದರೆ ಇನ್ನು ಚೆನ್ನೈನಲ್ಲಿ 19 ಕೆಜಿಯ ಒಂದು ಸಿಲಿಂಡರ್ ಬೆಲೆ 1,852.50 ರೂಪಾಯಿ ಆಗಿದೆ. ಜುಲೈ 4 ರಂದು ಎಲ್​ಪಿಸಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಿಸಿದ್ದವು. ಪರಿಣಾಮ 19 ಕೆಜಿಯ ಸಿಲಿಂಡರ್ ಬೆಲೆ 1,780 (ದೆಹಲಿ), 1,895.50 (ಕೋಲ್ಕತ್ತ), 1,733.50 (ಮುಂಬೈ) ಹಾಗೂ ಚೆನ್ನೈನಲ್ಲಿ 1,945 ರೂಪಾಯಿ ಆಗಿತ್ತು.

ಸಾಮಾನ್ಯವಾಗಿ ಕಂಪನಿಗಳು ತಿಂಗಳದ ಮೊದಲನೇಯ ದಿನ ವಾಣಿಜ್ಯಕ್ಕೆ ಬಳಸುವ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಆದರೆ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗೃಹ ಬಳಕೆಯ 14.2 ಕೆಜಿಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್​ 1 ರಂದು ತೈಲ ಕಂಪನಿಗಳು ಪರಿಷ್ಕರಣೆ ಮಾಡಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಸಿಲಿಂಡರ್ ಬೆಲೆಯಲ್ಲಿ ಇಳಿಕೆ.. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

https://newsfirstlive.com/wp-content/uploads/2023/07/lpg-2.jpg

Load More