newsfirstkannada.com

ಸಿಲಿಂಡರ್​​ ಬೆಲೆ ಇಳಿಕೆ ಎಲೆಕ್ಷನ್​​ ಗಿಮಿಕ್​​.. ಪ್ರಧಾನಿ ಮೋದಿಯನ್ನೇ ಟಾರ್ಗೆಟ್​ ಮಾಡಿದ ಶೆಟ್ಟರ್

Share :

31-08-2023

    ಎಲೆಕ್ಷನ್ ಗಿಮಿಕ್​ಗಾಗಿ ಸಿಲಿಂಡರ್​ ಬೆಲೆ ಇಳಿಸಲಾಯ್ತಾ?

    ಕೇಂದ್ರ ಸರ್ಕಾರವನ್ನು ಕುಟುಕಿದ ಮಾಜಿ ಸಿಎಂ ಶೆಟ್ಟರ್

    LPG ವಾಕ್​ ಸಮರ, ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ​

ಕೇಂದ್ರ ಸರ್ಕಾರ ಸಿಲಿಂಡರ್​ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಇದು ಕಾಂಗ್ರೆಸ್​ ನಾಯಕರ ವ್ಯಂಗ್ಯಕ್ಕೆ ಗುರಿಯಾಗಿದೆ. ಕೇಂದ್ರದ ಬೆಲೆ ಇಳಿಕೆ​ ಲೋಕಸಭಾ ಚುನಾವಣೆಯ ಗಿಮಿಕ್​ ಅಂತ ಕೈಪಾಳಯ ವಾಕ್​ ಸಮರಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರ ಯೋಜನೆಗಳ ಮುಂದೆ ಕೇಂದ್ರ ಬೆಲೆ ಇಳಿಕೆ ಯಾವ ಲೆಕ್ಕ ಅಂತ ಸಮರಸಾರಿದೆ.

ತರಕಾರಿ, ದಿನಸಿ ಸಾಮಾಗ್ರಿ, ಸಿಲಿಂಡರ್​ನಂತ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದ್ದಿದ್ದ ಜನತೆಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್ ಒಂದನ್ನ ನೀಡಿತ್ತು. ಗಗನಕ್ಕೇರಿದ್ದ ಅಡುಗೆ ಅನಿಲದ ಬೆಲೆಯನ್ನ ಕೊಂಚ ಇಳಿಕೆ ಮಾಡಿತ್ತು. ಸೆಪ್ಟೆಂಬರ್​ 1ನೇ ತಾರೀಖಿನಿಂದ ಪರಿಷ್ಕೃತ ದರ ಜಾರಿಗೆ ಬರುತ್ತೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಸಿಲಿಂಡರ್​ ಬೆಲೆ 200 ರೂ. ಆದ್ರೂ ಕಡಿಮೆ ಆಯ್ತಲ್ಲ ಎಂದು ಜನ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೇ ಸಿಲಿಂಡರ್​ ಬೆಲೆ ಇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಇದೇ ವಾಗ್ಯುದ್ದಕ್ಕೆ ಕಾರಣವಾಗಿದೆ.

ಸಿಲಿಂಡರ್​ಗಳು

ಕೇಂದ್ರದ ಮೇಲೆ ವಾಗ್ಯುದ್ದಕ್ಕೆ ಕಾಂಗ್ರೆಸ್​ ನಾಯಕರು ಅಣಿ

ಲೋಕಸಭಾ ಚುನಾವಣೆಗೆ ಜನರನ್ನ ಸೆಳೆಯಲು ಗ್ಯಾಸ್​ ಸಿಲಿಂಡರ್​ ಬೆಲೆ ಇಳಿಸಲಾಯ್ತಾ. ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಮರಕ್ಕೆ ಕಾರಣವಾಗಿದೆ. ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆಯಾಗಿರೋದು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದೇ ಅಸ್ತ್ರವನ್ನ ಇಟ್ಟುಕೊಂಡು ಕೇಂದ್ರದ ಮೇಲೆ ವಾಗ್ಯುದ್ದ ನಡೆಸಲು ರಾಜ್ಯ ಕಾಂಗ್ರೆಸ್​ ನಾಯಕರು ಅಣಿಯಾಗಿದ್ದಾರೆ.

ಸಿಲಿಂಡರ್​ ಬೆಲೆ ಇಳಿಕೆ.. ಶೆಟ್ಟರ್​ ವಾಕ್​ ಸಮರ!

ಕೇಂದ್ರ ಸರ್ಕಾರ ಗ್ಯಾಸ್​ ಸಿಲಿಂಡರ್​ ಬೆಲೆ 200 ರೂಪಾಯಿ ಇಳಿಕೆ ಮಾಡಿರೋ ಬಗ್ಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವ್ಯಂಗ್ಯವಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ ಅಂತ ಕೇಂದ್ರ ಸರ್ಕಾರವನ್ನ ಕುಟುಕಿದ್ದಾರೆ.

‘ಭಯ ಶುರುವಾಗಿದೆ’

ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಸಿರೋದು ನೋಡಿದ್ರೆ ಕೇಂದ್ರದಲ್ಲಿ ಕಾಂಗ್ರೆಸ್​ ಬರುತ್ತೆಂದು ಅನಿಸುತ್ತಿದೆ. ಈಗಾಗಲೇ ನಾಲ್ಕೈದು ರಾಜ್ಯಗಳ ಸಮಿಕ್ಷೆಯಲ್ಲಿ ಕಾಂಗ್ರೆಸ್​ ಬರುತ್ತೆ ಎಂದು ಭವಿಷ್ಯ ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿಗೆ ಹೆದರಿಕೆ ಸ್ಟಾರ್ಟ್ ಆಗಿದೆ.
ಎಲೆಕ್ಷನ್​ ಬಂದಿದ್ದರಿಂದ ಡಿಸೆಂಬರ್​ನಲ್ಲಿ ಇನ್ನಷ್ಟು ರಿಯಾಯತಿ ಕೊಡಬಹುದು. ಈ ಬಗ್ಗೆ ಮೋದಿ ಬಹಳ ತಲೆ ಕೆಡಿಸಿಕೊಳ್ಳಬಹುದು. ಅವರು ಉಚಿತ ಘೋಷಣೆಗಳು ಮಾಡುವ ಚಾನ್ಸ್​ ಇದೆ ಅನಿಸುತ್ತಿದೆ.

ಜಗದೀಶ್​ ಶೆಟ್ಟರ್​, ಮಾಜಿ ಸಿಎಂ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

‘2000ದ ಮುಂದೆ ಸಿಲಿಂಡರ್‌ ದರ ಏನೂ ಅಲ್ಲ’!

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್​ ಸಹ ಗ್ಯಾಸ್​ ಸಿಲಿಂಡರ್​ ಬೆಲೆ ಇಳಿಕೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಗೃಹಲಕ್ಷ್ಮಿಯ 2,000 ಹಣದ ಮುಂದೆ ಸಿಲಿಂಡರ್‌ ದರ ಏನೂ ಅಲ್ಲ ಅಂತ ಬೆಲೆ ಇಳಿಕೆಯನ್ನ ಅಲ್ಲಗೆಳೆದಿದ್ದಾರೆ.

ಅನ್ನದಾತರ ಓಲೈಕೆಗೆ ಸಜ್ಜಾದ ಮೋದಿ ಸರ್ಕಾರ!

ಗ್ಯಾಸ್​ ಸಿಲಿಂಡರ್​ ದರವನ್ನ 200 ರೂಪಾಯಿ ಇಳಿಕೆ ಮಾಡಿ ಜನಸಾಮಾನ್ಯರ ಮನವೊಲಿಕೆಗೆ ಮುಂದಾಗಿರೋ ಕೇಂದ್ರ ಸರ್ಕಾರ ಅನ್ನದಾತರಿಗೂ ಗಿಫ್ಟ್​​ ನೀಡಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಕಿಸಾನ್​ ಸಮ್ಮಾನ್​ ಯೋಜನೆಯಡಿ ರೈತರಿಗೆ ನೀಡುತ್ತಿದ್ದ 6,000 ಸಹಾಯಧನದ ಮೊತ್ತವನ್ನ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗ್ತಿದೆ.

ಲೋಕಸಭೆ ಎಲೆಕ್ಷನ್​ ಹೊತ್ತಲ್ಲೇ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ದಾಳ ಉರುಳಿಸೋಕೆ ಸಜ್ಜಾಗಿರೋದು ಕಾಂಗ್ರೆಸ್ಸಿಗರನ್ನ ಕೆರಳಿಸಿದೆ. ಎಲೆಕ್ಷನ್ ನೆಪದಲ್ಲಾದ್ರೂ ಬೆಲೆ ಏರಿಕೆ ಬಿಸಿ ಇಂದ ಕೊಂಚ ರಿಲೀಫ್​ ಸಿಗ್ತಲ್ಲ ಅಂತ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಂಡರ್​​ ಬೆಲೆ ಇಳಿಕೆ ಎಲೆಕ್ಷನ್​​ ಗಿಮಿಕ್​​.. ಪ್ರಧಾನಿ ಮೋದಿಯನ್ನೇ ಟಾರ್ಗೆಟ್​ ಮಾಡಿದ ಶೆಟ್ಟರ್

https://newsfirstlive.com/wp-content/uploads/2023/08/PM_MODI-3.jpg

Load More