newsfirstkannada.com

ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಬಿಗ್ ಶಾಕ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

Share :

Published September 1, 2024 at 7:50am

    ಸತತ ಎರಡನೇ ಬಾರಿಗೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ

    ಆಗಸ್ಟ್​ನಲ್ಲಿ 7 ರೂ ಏರಿಕೆ ಮಾಡಿದ್ದ ತೈಲ ಕಂಪನಿಗಳು

    ತೈಲ ಕಂಪನಿಗಳು ಈ ಬಾರಿ ಎಷ್ಟು ರೂಪಾಯಿ ಏರಿಕೆ ಮಾಡಿವೆ?

ತೈಲ ಕಂಪನಿಗಳು ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ. ಸೆಪ್ಟೆಂಬರ್ ಆರಂಭದಲ್ಲಿ ಮತ್ತೊಮ್ಮೆ ತೈಲ ಮಾರುಕಟ್ಟೆ ಕಂಪನಿಗಳು ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. 19 ಕೆಜಿಯ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಏರಿಕೆ ಮಾಡಿವೆ. ಆದರೆ 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಾಣಿಜ್ಯ ಕೆಲಸಗಳಿಗೆ ಬಳಸುವ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿದೆ. IOCL ವೆಬ್​ಸೈಟ್ ಪ್ರಕಾರ ದೆಹಲಿ ಹಾಗೂ ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಂದು ಬೆಳಗ್ಗೆ 6 ಗಂಟೆಯಿಂದ ಹೆಚ್ಚಳವಾಗಿದೆ. 19 ಕೆಜಿಯ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 1652.50 ರೂಪಾಯಿ ಇತ್ತು. ಇದೀಗ 1691.51 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ಕೋಲ್ಕತ್ತದಲ್ಲಿ 1764.50 ರೂಪಾಯಿಯಿಂದ 1802.50 ರೂಪಾಯಿಗೆ ಏರಿಕೆ ಕಂಡಿದೆ. ಕೋಲ್ಕತ್ತದಲ್ಲಿ 38 ರೂಪಾಯಿ ಏರಿಕೆ ಮಾಡಲಾಗಿದೆ.

ಜುಲೈ ನಂತರ ನಿಂತರ ಬೆಲೆ ಏರಿಕೆ

ಇನ್ನು ಮುಂಬೈನಲ್ಲಿ 1644 ರೂಪಾಯಿಗೆ ಏರಿಕೆ ಆಗಿದೆ. ಆಗಸ್ಟ್​ನಲ್ಲಿ 7 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಚೆನ್ನೈನಲ್ಲಿ 1817 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1855 ರೂಪಾಯಿಗೆ ಏರಿಕೆ ಆಗಿದೆ. ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಜುಲೈನಲ್ಲಿ ತೈಲ ಕಂಪನಿಗಳು ಇಳಿಕೆ ಮಾಡಿದ್ದವು. ಆಗಸ್ಟ್ ನಲ್ಲಿ ಏರಿಕೆ ಕಂಡಿದ್ದ ಸಿಲಿಂಡರ್ ಇದೀಗ ಸೆಪ್ಟೆಂಬರ್​ನಲ್ಲೂ ಬೆಲೆ ಏರಿಕೆ ಬಿಸಿ ತಟ್ಟಿದೆ. ​​

ಇದನ್ನೂ ಓದಿ:ಮೂವರು ಸ್ಟಾರ್ ಆಲ್​ರೌಂಡರ್​​ ಖರೀದಿಗೆ RCB ಬಿಗ್ ಟಾರ್ಗೆಟ್; ಇವರು ಬಂದ್ರೆ ಕಪ್ ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಬಿಗ್ ಶಾಕ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

https://newsfirstlive.com/wp-content/uploads/2023/07/lpg-1.jpg

Load More