newsfirstkannada.com

ದೆಹಲಿ-ಮುಂಬೈ ಪ್ರಯಾಣದ ವೇಳೆ ಶಾಕಿಂಗ್ ಮಾಹಿತಿ; ಕ್ರಿಕೆಟ್ ದಿಗ್ಗಜನಿಗೆ ಕ್ಷಮೆ ಕೇಳಿದ ಏರ್​ ಇಂಡಿಯಾ

Share :

Published September 1, 2024 at 2:26pm

    ಕ್ರಿಕೆಟ್ ದಂತಕತೆಗೆ ಏರ್ ಇಂಡಿಯಾದಲ್ಲಿ ಯಾಕೆ ಹೀಗೆ ಆಯಿತು?

    ಸೋಶಿಯಲ್ ಮೀಡಿಯಾದಲ್ಲಿ ಜಾಂಟಿ ರೋಡ್ಸ್​ ಹೇಳಿದ್ದೇನು?

    ಕ್ಷೇತ್ರ ರಕ್ಷಣೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಜಾಂಟಿ ರೋಡ್ಸ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಎಲ್​ಎಸ್​ಜಿ ತಂಡದ ಫೀಲ್ಡಿಂಗ್ ಕೋಚ್​​ ಜಾಂಟಿ ರೋಡ್ಸ್​ ಅವರು ಕೆಲವು ದಿನಗಳ ಹಿಂದೆ ಭಾರತದ ಪ್ರವಾಸದಲ್ಲಿದ್ದರು. ಮುಂಬೈನಿಂದ ದೆಹಲಿಗೆ ಪ್ರಯಾಣ ಮಾಡುವ ವೇಳೆ ತೊಂದರೆ ಎದುರಿಸಿದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ದುರಾದೃಷ್ಟ ವಿಮಾನ ಪ್ರಯಾಣದಲ್ಲೂ ಮುಂದುವರಿದಿದೆ. ಮುಂಬೈನಿಂದ ದೆಹಲಿಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ಈಗಾಗಲೇ 1.5 ಗಂಟೆಗೂ ಹೆಚ್ಚು ಕಾಲ ತಡವಾಗಿದೆ. ಕೊನೆಗೆ ವಿಮಾನ ಹತ್ತಿದ ತಕ್ಷಣ ಸೀಟು ಮುರಿದಿದೆ. ಅದರಿಂದ ನಾನು ಸೀಟ್ ಕ್ಯಾನ್ಸಲ್​​ಗೆ ಸಹಿ ಮಾಡಬೇಕಾಯಿತು. ಆದರೆ ನಾನು 36 ಗಂಟೆಗಳ ಕಾಲ ಕಾಯುತ್ತಿಲ್ಲ. ಏಕೆಂದರೆ ನಾನು ಮುಂದೆ ಕೇಪ್​​ ಟೌನ್ ವಿಮಾನ ಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ.. ನಿಮಗೆ ಆಗಿರುವ ತೊಂದರೆ ಬಗ್ಗೆ ವಿಷಾದ ಇದೆ. ಈ ವಿಚಾರವನ್ನು ತನಿಖೆ ಮಾಡುವ ಭರವಸೆ ನೀಡುತ್ತೇವೆ ಎಂದಿದೆ. ಜಾಂಟಿ ರೋಡ್ಸ್​ ದಕ್ಷಿಣ ಆಫ್ರಿಕಾ ಪರ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 245 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 35.56 ಸರಾಸರಿಯಲ್ಲಿ 2532 ರನ್​ಗಳಿಸಿದ್ದು, ಇದರಲ್ಲಿ ಮೂರು ಶತಕ, 17 ಅರ್ಧ ಶತಕ ಕೂಡ ಸೇರಿದೆ. ಇನ್ನು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಡ್ಸ್​ 35.11 ಸರಾಸರಿಯಲ್ಲಿ 5935 ರನ್​ಗಳಿಸಿದ್ದಾರೆ. 2 ದ್ವಿಶತಕ 33 ಅರ್ಧಶತಕ ಗಳಿಸಿದ್ದಾರೆ.

ಇದನ್ನೂ ಓದಿ:ಮೂವರು ಸ್ಟಾರ್ ಆಲ್​ರೌಂಡರ್​​ ಖರೀದಿಗೆ RCB ಬಿಗ್ ಟಾರ್ಗೆಟ್; ಇವರು ಬಂದ್ರೆ ಕಪ್ ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ-ಮುಂಬೈ ಪ್ರಯಾಣದ ವೇಳೆ ಶಾಕಿಂಗ್ ಮಾಹಿತಿ; ಕ್ರಿಕೆಟ್ ದಿಗ್ಗಜನಿಗೆ ಕ್ಷಮೆ ಕೇಳಿದ ಏರ್​ ಇಂಡಿಯಾ

https://newsfirstlive.com/wp-content/uploads/2023/08/AIR_INDIA.jpg

Load More