ಮುಂಬೈ ಇಂಡಿಯನ್ಸ್ನಿಂದ ರೋಹಿತ್ ಹೊರ ಬರೋ ನಿರೀಕ್ಷೆ
ರೋಹಿತ್ ಶರ್ಮಾರ ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ರೆಡಿ
ಡಿಸೆಂಬರ್ನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ
ಐಪಿಎಲ್-2025 ಟೂರ್ನಿಗೂ ಮೊದಲು ಮೆಗಾ ಹರಾಜು ನಡೆಯಲಿದೆ. ಪರಿಣಾಮ ತಂಡದಲ್ಲಿ ಭಾರೀ ಬದಲಾವಣೆ ಆಗಲಿದೆ. ಕೆಲವು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಉಳಿಸಿಕೊಂಡು, ಮಿಕ್ಕೆಲ್ಲ ಆಟಗಾರರನ್ನೂ ರಿಲೀಸ್ ಮಾಡುತ್ತವೆ.
ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್ನಲ್ಲಿ ನಡೆಯುತ್ತಿದ್ದರೂ, ಈಗಿನಿಂದಲೇ ಕೆಲವು ಆಟಗಾರರ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನು ರಿಲೀಸ್ ಮಾಡಿದ್ರೆ, ಎಲ್ಎಸ್ಜಿ ತಂಡ ಖರೀದಿ ಮಾಡೋದಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ರೋಹಿತ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಅವರನ್ನು ಶ್ಲಾಘಿಸಿದ ರೋಡ್ಸ್, ಪ್ರತಿ ತಂಡವೂ ಅವರನ್ನು ತೆಗೆದುಕೊಳ್ಳಲು ಬಯಸುತ್ತದೆ. ರೋಹಿತ್ ಶರ್ಮಾ ಸಾಕಷ್ಟು ಅನುಭವ ಹೊಂದಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರತಿ ತಂಡವೂ ರೋಹಿತ್ ಅವರನ್ನು ಖರೀದಿಸಲು ಬಯಸುತ್ತದೆ ಎಂದಿದ್ದಾರೆ. ನಾನು ರೋಹಿತ್ ಮತ್ತು ಮುಂಬೈ ಜೊತೆ ಕೆಲಸ ಮಾಡಿದ್ದೇನೆ. ಅವರು ಒತ್ತಡದ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ ಎಂದಿದ್ದಾರೆ.
ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ಸಿ ಪಟ್ಟ ನೀಡಿತ್ತು. ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿತ್ತು. ಇದರಿಂದ ರೋಹಿತ್ ಅಭಿಮಾನಿಗಳು ಕೋಪಿಸಿಕೊಂಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೂವರು ಕನ್ನಡಿಗರ ಖರೀದಿಗೆ RCB ಪಕ್ಕಾ ಪ್ಲಾನ್.. KL ರಾಹುಲ್ ಸೇರಿ ಇನ್ನಿಬ್ಬರು ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ