ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್..!
‘ರೋಹಿತ್ಗೆ ಅಷ್ಟು ಕೋಟಿ ಕೊಟ್ಟು ನಾವೇನು ಮಾಡಬೇಕು’
ಐಪಿಎಲ್ ತಂಡದ ಮಾಲೀಕನ ಬಹಿರಂಗ ಆಕ್ರೋಶಕ್ಕೆ ಕಾರಣವೇನು?
ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ರಿಲೀಸ್ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗ ಹಬ್ಬಿರುವ ಊಹಾಪೋಹಗಳು ಅನಗತ್ಯ. ರೋಹಿತ್ ಹರಾಜಿಗೆ ಬಂದರೂ, ಒಬ್ಬ ಆಟಗಾರನಿಗೆ 50 ಕೋಟಿ ನೀಡಿದ್ರೆ, ಉಳಿದ 22 ಆಟಗಾರರನ್ನು ಹೇಗೆ ನಿರ್ವಹಿಸುತ್ತೀರಿ? ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಪ್ರಶ್ನೆ ಮಾಡಿದ್ದಾರೆ.
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. 6 ತಿಂಗಳ ನಂತರ ನಡೆಯಲಿರೋ ಐಪಿಎಲ್ ಲೀಗ್ ಈಗಿನಿಂದಲೇ ರೋಚಕತೆ ಹುಟ್ಟಿಸಿದೆ. ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಯಾವ ತಂಡಕ್ಕೆ ಸೇಲ್ ಆಗಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ.
ಮೆಗಾ ಹರಾಜಿಗೆ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು? ಯಾರನ್ನು ರಿಲೀಸ್ ಮಾಡಬೇಕು? ಅನ್ನೋದರ ಬಗ್ಗೆ ಐಪಿಎಲ್ ತಂಡಗಳ ಮಾಲೀಕರು ಪ್ಲಾನ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಎಲ್ಲಾ ತಂಡಗಳು ಬಿಸಿಸಿಐಗೆ ರೀಟೈನ್ ಲಿಸ್ಟ್ ಕೂಡ ಸಲ್ಲಿಸಬೇಕಿದೆ. ಹಾಗಾಗಿ ರೋಹಿತ್ ಶರ್ಮಾ ಹರಾಜು ಅಂಗಳಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ.
ರೋಹಿತ್ ಬಗ್ಗೆ ಸಂಜೀವ್ ಖಡಕ್ ರಿಯಾಕ್ಷನ್!
ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹಲವು ತಂಡಗಳು ಆಸಕ್ತಿ ಹೊಂದಿವೆ. ಈ ಪಟ್ಟಿಯಲ್ಲಿ ಎಲ್‌ಎಸ್‌ಜಿ ಹೆಸರು ಕೂಡ ಇದೆ. ಹಿಟ್‌ಮ್ಯಾನ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಲಿದೆ. ಲಕ್ನೋ ಸೂಪರ್ ಜೈಂಟ್ಸ್ ರೋಹಿತ್ ಖರೀದಿಗೆ 50 ಕೋಟಿ ಎತ್ತಿಡಲಿದೆ ಎಂಬ ವದಂತಿಗಳು ಹಬ್ಬಿದ್ದವು. ಇದಕ್ಕೆ ಗೋಯೆಂಕಾ ಖಡಕ್ ಉತ್ತರ ನೀಡಿ, ಎಲ್ಲಾ ವದಂತಿಗಳು ತೆರೆ ಎಳೆದರು.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಭಾರೀ ಮೋಸ; ಗಳಗಳನೆ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ