ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ!
ಮುಂದಿನ ಸೀಸನ್ಗೆ ಲಕ್ನೋ ತಂಡ ಈಗಿನಿಂದಲೇ ಭರ್ಜರಿ ತಯಾರಿ
ಲಕ್ನೋ ತಂಡದ ಹೊಸ ಮೆಂಟರ್ ಆಗಿ ದಿಗ್ಗಜ ಜಹೀರ್ ಖಾನ್ ಆಯ್ಕೆ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ 6 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ 2025ರ ಮೆಗಾ ಆಕ್ಷನ್ ನಡೆಯಲಿದೆ. ಈ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಮೆಂಟರ್ ಆಗಿ ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ನೇಮಕಗೊಂಡಿದ್ದಾರೆ.
ಐಪಿಎಲ್ 2023 ಟೂರ್ನಿ ಬಳಿಕ ಗೌತಮ್ ಗಂಭೀರ್ ಎಲ್‌ಎಸ್‌ಜಿ ಮೆಂಟರ್ ಸ್ಥಾನ ತೊರೆದು ಕೆಕೆಆರ್ ತಂಡ ಸೇರಿದ್ದರು. ಅಂದಿನಿಂದ ಲಕ್ನೋ ತಂಡದ ಮೆಂಟರ್ ಸ್ಥಾನ ಖಾಲಿ ಇತ್ತು. ಮೆಂಟರ್ ಸ್ಥಾನಕ್ಕೆ ಈಗ ಎಲ್‌ಎಸ್‌ಜಿ ಫ್ರಾಂಚೈಸಿ ಜಹೀರ್ ಖಾನ್ ಅವರನ್ನು ಕರೆ ತಂದಿದೆ.
ಜಹೀರ್ ಖಾನ್ ಮೆಂಟರ್ ಆದ ಬಗ್ಗೆ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮಾತಾಡಿದ್ರು. ಇದೇ ಸಂದರ್ಭದಲ್ಲಿ ಮುಂಬರುವ ಮೆಗಾ ಆಕ್ಷನ್ಗೆ ತಂಡದ ಪ್ಲಾನ್ ಬಗ್ಗೆ ಕೂಡ ಹೇಳಿದ್ರು.
ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಭಾಗ ಎಂದ ಸಜೀವ್
ಇನ್ನು, ಈ ವೇಳೆ ಕೆ.ಎಲ್ ರಾಹುಲ್ ಬಗ್ಗೆ ಮಾತಾಡಿದ ಸಂಜೀವ್ ಅವರು, ನಾನು ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದೆ. ನಾನು ಕೆ.ಎಲ್ ರಾಹುಲ್ ಅವರನ್ನು ಭೇಟಿ ಮಾಡಿದ ವಿಚಾರ ಯಾಕಿಷ್ಟು ಚರ್ಚೆ ಆಗುತ್ತಿದೆ ಎಂದು ಗೊತ್ತಿಲ್ಲ. ನಾವು ಯಾವಾಗಲೂ ಸಿಗುತ್ತಲೇ ಇರುತ್ತೇವೆ. ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ಹಾಗಾಗಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದರು. ಜತೆಗೆ ಕ್ಯಾಪ್ಟನ್ ಯಾರು? ಯಾರನ್ನು ಖರೀದಿ ಮಾಡಬೇಕು? ಎಂಬ ನಿರ್ಧಾರ ಮಾಡಲು ಇನ್ನೂ ಸಮಯ ಇದೆ ಎಂದರು. ಈ ಮೂಲಕ ಕೆ.ಎಲ್ ರಾಹುಲ್ ಮುಂದಿನ ಸೀಸನ್ಗೆ ಕ್ಯಾಪ್ಟನ್ ಅಲ್ಲ ಅನ್ನೋದು ಪರೋಕ್ಷವಾಗಿ ಕನ್ಫರ್ಮ್ ಮಾಡಿದ್ರು.
ಇದನ್ನೂ ಓದಿ: KL ರಾಹುಲ್ಗೆ ಬಿಗ್ ಶಾಕ್.. ಲಕ್ನೋ ತಂಡಕ್ಕೆ ವಿರಾಟ್ ಕೊಹ್ಲಿ ಆಪ್ತನ ಎಂಟ್ರಿ; ರೋಲ್ ಏನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ