newsfirstkannada.com

IPL 2025: ಈ ಸ್ಟಾರ್​ ಆಟಗಾರನ ಖರೀದಿಗೆ ಬರೋಬ್ಬರಿ 50 ಕೋಟಿ ಮೀಸಲಿಟ್ಟ ಲಕ್ನೋ ತಂಡ!

Share :

Published August 29, 2024 at 4:42pm

Update August 29, 2024 at 4:43pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಭರ್ಜರಿ ತಯಾರಿ!

    ವರ್ಷದ ಕೊನೆಗೆ ನಡೆಯಲಿದೆ ಇಂಡಿಯನ್​ ಪ್ರೀಮಿಯರ್ ಲೀಗ್​​​ ಮೆಗಾ ಹರಾಜು

    ಸ್ಟಾರ್​​ ಆಟಗಾರನ ಖರೀದಿಗೆ 50 ಕೋಟಿ ಮೀಸಲಿಟ್ಟ ಲಕ್ನೋ ಸೂಪರ್​ ಜೈಂಟ್ಸ್​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. 6 ತಿಂಗಳ ನಂತರ ನಡೆಯಲಿರೋ ಐಪಿಎಲ್​​ ಲೀಗ್​​​ ಈಗಿನಿಂದಲೇ ರೋಚಕತೆ ಹುಟ್ಟಿಸಿದೆ. ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಯಾವ ತಂಡಕ್ಕೆ ಸೇಲ್ ಆಗಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ.

ಮೆಗಾ ಹರಾಜಿಗೆ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು? ಯಾರನ್ನು ರಿಲೀಸ್​ ಮಾಡಬೇಕು? ಅನ್ನೋದರ ಬಗ್ಗೆ ಐಪಿಎಲ್​ ತಂಡಗಳ ಮಾಲೀಕರು ಪ್ಲಾನ್​ ಮಾಡುತ್ತಿದ್ದಾರೆ. ಸದ್ಯದಲ್ಲೇ ಎಲ್ಲಾ ತಂಡಗಳು ಬಿಸಿಸಿಐಗೆ ರೀಟೈನ್​ ಲಿಸ್ಟ್​ ಕೂಡ ಸಲ್ಲಿಸಬೇಕಿದೆ. ಹಾಗಾಗಿ ರೋಹಿತ್ ಶರ್ಮಾ ಹರಾಜು ಅಂಗಳಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ.

ಲಕ್ನೋ ತಂಡಕ್ಕೆ ರೋಹಿತ್​​!

ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹಲವು ತಂಡಗಳು ಆಸಕ್ತಿ ಹೊಂದಿವೆ. ಈ ಪಟ್ಟಿಯಲ್ಲಿ ಎಲ್‌ಎಸ್‌ಜಿ ಹೆಸರು ಕೂಡ ಇದೆ. ಇತ್ತೀಚೆಗೆ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ರೋಹಿತ್​ ಶರ್ಮಾ ಬಗ್ಗೆ ಮಾತಾಡಿದ್ದು, ಇದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ರೋಹಿತ್​ ಖರೀದಿಗೆ 50 ಕೋಟಿ ರೂ!

ಹಿಟ್‌ಮ್ಯಾನ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಲಿದೆ. ಲಕ್ನೋ ಸೂಪರ್ ಜೈಂಟ್ಸ್ ರೋಹಿತ್​ ಖರೀದಿಗೆ 50 ಕೋಟಿ ಎತ್ತಿಡಲಿದೆ ಎಂಬ ವದಂತಿಗಳು ಹಬ್ಬಿವೆ. ಈ ವಿಷಯದ ಬಗ್ಗೆ ಗೋಯೆಂಕಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡಿಗನಿಗೆ ಬಿಸಿಸಿಐನಿಂದ ಯಾಕಿಷ್ಟು ಮೋಸ; ಅವಕಾಶ ಸಿಗದಿದ್ದಕ್ಕೆ ಕಣ್ಣೀರು ಹಾಕಿದ ಕರುಣ್​ ನಾಯರ್​​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL 2025: ಈ ಸ್ಟಾರ್​ ಆಟಗಾರನ ಖರೀದಿಗೆ ಬರೋಬ್ಬರಿ 50 ಕೋಟಿ ಮೀಸಲಿಟ್ಟ ಲಕ್ನೋ ತಂಡ!

https://newsfirstlive.com/wp-content/uploads/2024/07/IPL-Teams.jpg

Load More