newsfirstkannada.com

ರಾಹು ಗ್ರಸ್ತ ಚಂದ್ರ ಗ್ರಹಣಕ್ಕೆ ಕ್ಷಣಗಣನೆ; ಎಷ್ಟು ಗಂಟೆಗೆ ನೋಡಬಹುದು? ವಿಜ್ಞಾನಿಗಳು ಹೇಳೋದೇನು?

Share :

28-10-2023

    ಹಿರಿಯ-ಕಿರಿಯ ಎಲ್ಲರು ಗ್ರಹಣ ನೋಡಲು ಅನುಮತಿ ಇದೆಯಾ.?

    ದೇವಾಲಯಗಳಲ್ಲಿ ಮಹಾರುದ್ರ, ಪಂಚಾಮೃತ ಅಭಿಷೇಕ ಮಾಡಿದ್ರು

    ಬೆಳಗಿನ ಜಾವ 3.56ರ ವರೆಗೆ ರಾಹು ಗ್ರಸ್ತ ಚಂದ್ರ ಗ್ರಹಣ ಇರಲಿದೆ

ವರ್ಷದ ಕೊನೆಯ ರಾಹು ಗ್ರಸ್ತ ಚಂದ್ರಗ್ರಹಣಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಆಗಸದಲ್ಲಿ ಆಗೋ ಕೌತುಕವನ್ನ ಕಣ್ತುಂಬಿಕೊಳ್ಳಲು ಜವಾಹರ್ ಲಾಲ್ ನೆಹರು ತಾರಲಾಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದೆಡೆ ಗ್ರಹಣ ನಿಮಿತ್ತ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿವೆ.

ಈ ವರ್ಷದ ಕೊನೆಯ ರಾಹು ಗ್ರಸ್ತ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಾಲಯಗಳಲ್ಲಿ ದೇವರಿಗೆ ಸ್ಪೆಷಲ್ ಪೂಜೆಯನ್ನು ಸಲ್ಲಿಸಲಾಯಿತು. ಸಿಲಿಕಾನ್ ಸಿಟಿಯ ಪ್ರಖ್ಯಾತ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿವಿಧ ರೀತಿಯ ಅಭಿಷೇಕ ಮಾಡಲಾಯಿತು. ಬಳಿಕ ಗ್ರಹಣ ಶಾಂತಿ ಹೋಮವನ್ನು ಕೂಡ ನೆರವೇರಿಸಲಾಯ್ತು. ಬಳಿಕ ದೇವರಿಗೆ ದರ್ಬಾ ಬಂಧನ ಮಾಡಿ ಗರ್ಭಗುಡಿಯನ್ನ ಕ್ಲೋಸ್ ಮಾಡಲಾಯಿತು.

ಚಂದ್ರ

ವಿಶೇಷ ಪೂಜೆ ಸಲ್ಲಿಸಿ, 2 ಗಂಟೆಗೆ ದೇವಾಲಯ ಕ್ಲೋಸ್

ಅತ್ತ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೂಡ ವಿಶೇಷ ಪೂಜೆ ಸಲ್ಲಿಸಿ, 2 ಗಂಟೆಗೆ ದೇವಾಲಯ ಕ್ಲೋಸ್ ಮಾಡಲಾಯಿತು. ಸೂರ್ಯೋದಯ ಆಗುವ ಮುನ್ನ ನಾಳೆ ದೇವಾಲಯ ಕ್ಲೀನ್ ಮಾಡಿ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ.

ಇಂದು ರಾತ್ರಿ 11.32ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಬೆಳಗಿನ ಜಾವ 3.56ರ ವರೆಗೆ ಇರಲಿದೆ. ಭಾರತದಲ್ಲಿ ಒಟ್ಟಾರೆ 1 ಗಂಟೆ 19 ನಿಮಿಷಗಳ ಕಾಲ ಗ್ರಹಣ ಗೋಚರವಾಗಲಿದೆ. ಭಾರತದಲ್ಲಿ ತಡರಾತ್ರಿ 1.05 ರಿಂದ 2 ಗಂಟೆ 24 ನಿಮಿಷದವರೆಗೆ ಗ್ರಹಣ ಗೋಚರಿಸಲಿದೆ. ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲೂ ಗ್ರಹಣ ಗೋಚರಿಸಲಿದೆ.

ಮೇಷ ರಾಶಿ, ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸುತ್ತಿರುವ ರಾಹುಗ್ರಸ್ತ ಗ್ರಹಣ 39 ವರ್ಷಗಳ ನಂತರ ಇದೇ ಸಂಯೋಗದಲ್ಲಿ ಸಂಭವಿಸ್ತಿದೆ. ಈ ಹಿಂದೆ 1947 ಹಾಗೂ 1984ರಲ್ಲಿ ಇದೇ ಸಂಯೋಗದಲ್ಲಿ ಸಂಭವಿಸಿತ್ತು. ಮೇಷ, ವೃಷಭ, ಕನ್ಯಾ, ಮಕರ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಹೆಚ್ಚಾಗಿ ಇರಲಿದ್ದು, ಸಿಂಹ, ತುಲಾ, ಧನಸ್ಸು, ಮೀನ ರಾಶಿಗಳ ಮೇಲೆ ಮಿಶ್ರ ಪ್ರಭಾವ ಸಾಧ್ಯತೆ ಇದೆ.

ಮತ್ತೊಂದೆಡೆ ಜವಾಹರ್ ಲಾಲ್ ನೆಹರು ತಾರಲಾಯದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಲೈವ್ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗಿದೆ. ರಾತ್ರಿ 11 ಗಂಟೆಯಿಂದ ತಾರಾಲಯ ಓಪನ್ ಇದ್ದು, 11.31 ರಿಂದ ಗ್ರಹಣ ಆರಂಭ ಆಗಲಿದೆ.. ತಡರಾತ್ರಿ 1 ಗಂಟೆ 5 ನಿಮಿಷದಿಂದ 2 ಗಂಟೆ 24 ನಿಮಿಷದರವರೆಗೆ ಚಂದ್ರ ಗ್ರಹಣ ಗೋಚರವಾಗಲಿದ್ದು, ಹಿರಿಯ ಕಿರಿಯ ಎಲ್ಲಾ ವಯೋಮಾನದವರು ಗ್ರಹಣ ನೋಡಲು ಅನುಮತಿಯಿದೆ.

ಸಾರ್ವಜನಿಕರು ಯಾರಿಗೆ ಆಗಲಿ ಆಸಕ್ತಿ ಇದ್ದವರು ಚಂದ್ರ ಗ್ರಹಣ ನೋಡಲು ಬರಬಹುದು. ಎಲ್ಲೆಲ್ಲಿ ಚಂದ್ರ ಕಾಣುತ್ತೆ ಅಲ್ಲೆಲ್ಲಾ ಚಂದ್ರನನ್ನು ಯಾವುದೇ ಸಲಕರಣೆ ಅಥವಾ ಟೆಲಿಸ್ಕೋಪ್ ಇಲ್ಲದೇ ನೋಡಬಹುದು. ಮನೆಯ ಟೆರಸ್​ನಿಂದಲೂ ಚಂದ್ರನನ್ನು ನೋಡಬಹುದು.

ಡಾ. ಎಂ. ವೈ ಆನಂದ್ , ಹಿರಿಯ ವಿಜ್ಞಾನಿ, ಜವಾಹರ್ ಲಾಲ್ ನೆಹರು ತಾರಾಲಯ

ವರ್ಷದ ಕೊನೆಯ ಚಂದ್ರಗ್ರಹಣ ಯಾರ ಮೇಲೂ ಕೆಟ್ಟ ಪರಿಣಾಮ ಬೀರದಿರಲಿ ಅನ್ನೋದು ಜನರ ಪ್ರಾರ್ಥನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹು ಗ್ರಸ್ತ ಚಂದ್ರ ಗ್ರಹಣಕ್ಕೆ ಕ್ಷಣಗಣನೆ; ಎಷ್ಟು ಗಂಟೆಗೆ ನೋಡಬಹುದು? ವಿಜ್ಞಾನಿಗಳು ಹೇಳೋದೇನು?

https://newsfirstlive.com/wp-content/uploads/2023/10/MOON.jpg

Load More