‘ಕಾಪಾಡು ಮಾದಪ್ಪ’..ಸಿದ್ದುಗಾಗಿ ಸ್ತ್ರೀಯರ ಬೆಟ್ಟದ ಯಾತ್ರೆ!
ಸಿಎಂ ಪತ್ನಿಗೆ ತುಂಬಾ ಘಾಸಿ... ಎಷ್ಟು ನೊಂದಿದ್ದಾರೆ ಪಾರ್ವತಮ್ಮ
ಭೂಚಕ್ರದ ಸುಳಿಯಿಂದ ಸಿದ್ದುನ ಕಾಪಾಡುವನೇ ಮಾದಪ್ಪ?
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಬಲೆಯೊಳಗೆ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಬರೀ ಸಿದ್ದರಾಮಯ್ಯನವ್ರು ಮಾತ್ರವಲ್ಲ, ಸಿದ್ದು ಮುಡಾ ಪ್ರಕರಣದಲ್ಲಿ A1 ಆಗಿದ್ರೆ, ಪತ್ನಿ ಪಾರ್ವತಿ A2 ಆಗಿದ್ದಾರೆ. ಈ ಪ್ರಕರಣದಲ್ಲಿ ಅಚ್ಚರಿಯೆಂಬಂತೆ ಜಾರಿ ನಿರ್ದೇಶನಾಲಯ (ED) ಕೂಡ ಎಂಟ್ರಿಯಾಗಿದ್ದು, ಸಿದ್ದರಾಮಯ್ಯಗೆ ಬಂಧನ ಭೀತಿಯೂ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
40 ವರ್ಷಗಳ ಕ್ಲೀನ್ ರಾಜಕೀಯ ಇಮೇಜ್ಗೆ ಜಸ್ಟ್ 14 ಸೈಟುಗಳು ಕಪ್ಪುಮಸಿ ಬಳೀತಿರೋದನ್ನ ಸಿದ್ದು ತವರಿನ ಜನಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೈಟ್ಗಳನ್ನ ವಾಪಸ್ ಕೊಟ್ಟಿದ್ದು, ನನ್ನ ಪತಿಯ ಘನತೆಗೆ ಧಕ್ಕೆ ತರಬೇಡಿ ಅಂತಾ ನೊಂದು ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಜನರಿಗೆ ಆಗಿದ್ದೇನು, ಈ ಬೆಳವಣಿಗೆಗಳಿಂದ ತಮಗೆಷ್ಟು ನೋವಾಗಿದೆ ಅನ್ನೋದನ್ನ ಪತ್ರದಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವ್ರು ರಾಜೀನಾಮೆ ಕೊಡಬೇಕು ಅಂತಾ ವಿಪಕ್ಷಗಳು ಒತ್ತಾಯಿಸುತ್ತಿವೆ. ಕಾಂಗ್ರೆಸ್ನೊಳಗೇ ಸಿಎಂ ಕುರ್ಚಿಗೆ ಟವೆಲ್ ಹಾಕಿರೋ ನಾಯಕರ ಗೌಪ್ಯ ಸಭೆಗಳು ನಡೀತಿವೆ. ಇದೆಲ್ಲಾ ಬೆಳವಣಿಗೆ ಮಧ್ಯೆ ನ್ಯೂಸ್ ಫಸ್ಟ್ ಸಿದ್ದರಾಮಯ್ಯನವರ ತವರಾಗಿರೋ ಸಿದ್ದರಾಮಯ್ಯನ ಹುಂಡಿಯಲ್ಲಿ ಏನಾಗ್ತಿದೆ, ಈ ಪ್ರಕರಣದಲ್ಲಿ ಅಲ್ಲಿನ ಜನರ ಅಭಿಪ್ರಾಯಗಳೇನು ಅನ್ನೋದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ.
ಇದನ್ನೂ ಓದಿ: 14 ಮುಡಾ ಸೈಟ್ ವಾಪಸ್.. ಮೈಸೂರು ನೋಂದಣಿ ಕಚೇರಿಗೆ ಹಾಜರಾದ ಸಿಎಂ ಪತ್ನಿ; ಕಾನೂನು ಏನ್ ಹೇಳುತ್ತೆ?
ಮುಡಾ ಕಂಟಕ.. ಸಿದ್ದು ಹುಟ್ಟೂರಿನಲ್ಲಿ ಜನರ ಬೇಸರ!
‘ಕಾಪಾಡು ಮಾದಪ್ಪ’.. ಸಿದ್ದುಗಾಗಿ ಸ್ತ್ರೀಯರ ಬೆಟ್ಟದ ಯಾತ್ರೆ!
ಸಿಎಂ ಸಿದ್ದರಾಮಯ್ಯ ಅವ್ರು ನಾಡಿನ ಹೃದಯ ಗೆಲ್ಲೋದ್ರ ಜೊತೆಗೆ ತಾವು ಹುಟ್ಟಿ ಬೆಳೆದ ಗ್ರಾಮಸ್ಥರ ಹೃದಯವನ್ನೂ ಗೆದ್ದಿದ್ದಾರೆ ಅನ್ನೋದು ಅಲ್ಲಿಯ ಜನರ ಮುಗ್ಧ ಮಾತಿನಲ್ಲಿಯೇ ಅರ್ಥವಾಗುತ್ತಿದೆ. ಮುಡಾ ಮುಳ್ಳು ಸಿಎಂ ಕುರ್ಚಿಗೆ ಬಲವಾಗಿ ಚುಚ್ಚುತ್ತಿದ್ರೂ? ಸಿಎಂ ಸ್ಥಾನ ಕಳ್ಕೊಳ್ಳುವ ಅಪಾಯ ಬಂದಿದ್ರೂ? ಸಿಎಂ ದೇವರಿಗೆ ಹರಕೆ ಹೊತ್ತಿದ್ದಾರೋ ಇಲ್ವೋ? ಗೊತ್ತಿಲ್ಲ. ಆದ್ರೆ, ಸಿದ್ದರಾಮಯ್ಯನಹುಂಡಿ ಜನ ದೇವರಿಗೆ ಪ್ರತಿನಿತ್ಯ ಪ್ರಾರ್ಥಿಸ್ತಿದ್ದಾರಂತೆ, ಸಿದ್ದರಾಮಯ್ಯನವ್ರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಳ್ತಿದ್ದಾರಂತೆ. ವಿಶೇಷವಾಗಿ ಮೈಸೂರು ಚಾಮರಾಜನಗರ ಜನರ ಭಾಗದ ಆರಾಧ್ಯ ದೈವ ಮಲೈ ಮಹದೇಶ್ವರನಲ್ಲಿ ಹರಕೆ ಕಟ್ಟಿಕೊಂಡಿದ್ದಾರಂತೆ. ಸಿದ್ದುಗಾಗಿ ಮಾದಪ್ಪನ ಸೇವೆ ಮಾಡಲು ಯಾತ್ರೆಯನ್ನೂ ಹೊರಟಿದ್ದಾರೆ.
ಸಿದ್ದರಾಮಯ್ಯನಹುಂಡಿ ಜನಕ್ಕೆ ಸಿದ್ದು ಮೇಲೆ ಬೆಟ್ಟದಷ್ಟು ಪ್ರೀತಿಯೂ ಇದೆ. ಯಾವುದೇ ಕಾರಣಕ್ಕೂ ಸಿದ್ದು ರಾಜೀನಾಮೆ ಕೊಡ್ಬಾರದು. ತಾವು ಸಿದ್ದುಗೆ ಸಂಕಷ್ಟ ದೂರವಾಗ್ಬೇಕು ಅಂತಾ ಮಾದಪ್ಪನ ಸೇವೆಗೆ ಹೋಗ್ತಿದ್ದೇವೆ ಅಂತಾ ಸಿದ್ದರಾಮನಹುಂಡಿ ಸ್ತ್ರೀಯರು ಯಾತ್ರೆಗೆ ಹೊರಟ್ಟಿದ್ದಾರೆ. ಹಾಗೆಯೇ, ಸಿದ್ದು ರಾಜ್ಯಕ್ಕಾಗಿ ಮಾಡ್ತಿರೋ ಸೇವೆಯ ಗುಣಗಾನ ಮಾಡಿದ್ದಾರೆ.
ಭೂಚಕ್ರದಿಂದ ಸಿದ್ದುನ ಪಾರು ಮಾಡುವನೇ ಮಾದಪ್ಪ?
ಸಿದ್ದು ಮೇಲೆ ಪ್ರೀತಿ… ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿ!
ಸಿದ್ದರಾಮಯ್ಯ ಬರೋಬ್ಬರಿ 40 ವರ್ಷ ರಾಜಕೀಯದಲ್ಲಿ ಇದ್ದವ್ರು. ಉಪಮುಖ್ಯಮಂತ್ರಿಗಳಾಗಿದ್ದಾರೆ, ಮುಖ್ಯಮಂತ್ರಿಗಳು ಆಗಿದ್ದಾರೆ. ಆದ್ರೆ, ಹುಟ್ಟೂರನ್ನು ಅವ್ರು ಯಾವತ್ತೂ ಮರೆತಿಲ್ಲ. ಬಾಲ್ಯದ ಗೆಳೆಯರನ್ನು ಮರೆತಿಲ್ಲ. ಸಮಯ ಸಿಕ್ಕಾಗ ಹುಟ್ಟೂರಿಗೆ ಹೋಗಿ ಅಲ್ಲಿಯ ಜನರನ್ನು ಪ್ರೀತಿಯಿಂದ ಮಾತಾಡಿಸ್ಕೊಂಡ್ ಬರ್ತಾ ಇದ್ರು. ವಿಶೇಷ ಅಂದ್ರೆ, ಹುಟ್ಟೂರಿನ ಜನ ಯಾವುದೇ ಸಭೆ ಸಮಾರಂಭದಲ್ಲಿ ಸಿಕ್ಕರೂ ಹೆಸರು ಹೇಳಿ ಕರೆಯುತ್ತಾ ಇದ್ರು. ಇದು ಎಲ್ಲೂ ಒಂದ್ ರೀತಿಯಲ್ಲಿ ಸಿದ್ದರಾಮಯ್ಯಹುಂಡಿ ಜನರ ಹೃದಯಕ್ಕೆ ತಟ್ಟಿದೆ.
ಇದನ್ನೂ ಓದಿ: ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಸಿದ್ದರಾಮಯ್ಯನಹುಂಡಿ ಜನರ ಪ್ರಕಾರ ಮುಡಾ ಹಗರಣದ ಆರೋಪ ಅನ್ನೋದ್ ಪಕ್ಕಾ ಜೆಡಿಎಸ್ ಮತ್ತು ಬಿಜೆಪಿಯ ಷಡ್ಯಂತ್ರವಂತೆ. ಹೀಗಾಗಿಯೇ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹೆಸ್ರು ಹೇಳಿ ಅವ್ರು ಕಿಡಿಕಾರುತ್ತಿದ್ದಾರೆ. ದೇವರಿಗೂ ಮೊರೆ ಹೋಗ್ತಿದ್ದಾರೆ. ಈಗ ಇರೋ ವಿಷ್ಯ ಅಂದ್ರೆ, ಮಾದಪ್ಪ ಸಿದ್ದುಗೆ ಎದುರಾಗಿರೋ ಭೂಚಕ್ರದ ಸುಳಿಯಿಂದ ಪಾರು ಮಾಡುತ್ತಾನಾ ಅನ್ನೋದು? ಅದ್ಕೆ ಕಾಲವೇ ಉತ್ತರ ನೀಡಬೇಕು. ಯಾಕಂದ್ರೆ, ಈ ಭಾಗದ ಪವರ್ಫುಲ್ ದೈವ ಮಲೆ ಮಹದೇಶ್ವರ…ಮಾದಪ್ಪನ ಬೆಟ್ಟ ಶಕ್ತಿಶಾಲಿ ಸ್ಥಳವೂ ಹೌದು. ಅಂತಹ ಸ್ಥಳಕ್ಕೆ ಸಿದ್ದರಾಮಯ್ಯನವ್ರಿಗಾಗಿ ಸಿದ್ದರಾಮನಹುಂಡಿಯ ಜನ ಯಾತ್ರೆ ಹೊರಟಿದ್ದಾರೆ. ಹರಕೆ ಕಟ್ಟಿಕೊಳ್ತಿದ್ದಾರೆ. ಹಾಗೆಯೇ, ಇನ್ನೊಂದ್ ಬಾರಿ ಬಸ್ ಮಾಡ್ಕೊಂಡ್ ಹೋಗಿ ಹರಕೆ ತೀರಿಸ್ತೀವಿ ಅಂತಾನೂ ಹೇಳಿಕೊಳ್ತಿದ್ದಾರೆ.
ಸಿಎಂ ಪತ್ನಿಗೆ ತುಂಬಾ ಘಾಸಿ.. ಎಷ್ಟು ನೊಂದರು ಪಾರ್ವತಿ?
ಪಾರ್ವತಿ ಅವರನ್ನು ಎಳೆತಂದಿದ್ದು ಯಾಕೆ? ಗ್ರಾಮಸ್ಥರ ಪ್ರಶ್ನೆ!
ಇಲ್ಲಿಯವರೆಗೂ ಸಿದ್ದರಾಮಯ್ಯ ಅವ್ರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರ ಪತ್ನಿ ಪಾರ್ವತಿಯವ್ರು ಎಲ್ಲೂ ಕಾಣಿಸಿಕೊಂಡಿಲ್ಲ. ಸಿದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರೂ ಆ ಪದಗ್ರಹಣಕ್ಕೂ ಪಾರ್ವತಿ ಅವರು ಬಂದಿಲ್ಲ. ಅಂದ್ರೆ, ತಮ್ಮಿಂದ ಯಾವುದೇ ಕಾರಣಕ್ಕೂ ಪತಿಯ ರಾಜಕೀಯ ಜೀವನಕ್ಕೆ ಕಳಂಕ ಬರಬಾರದು ಅನ್ನೋದು ಅವರ ಧ್ಯೇಯವಾಗಿತ್ತು. ಇಂತಹ ಪಾರ್ವತಿ ಅವ್ರಿಗೆ ಅರಿಶಿಣ ಕುಂಕುಮಕ್ಕಾಗಿ ತವರು ಮನೆಯಿಂದ ಭೂಮಿ ಬಂದಿತ್ತು. ಅದನ್ನ ಮುಡಾದವ್ರು ಭೂಸ್ವಾಧೀನ ಮಾಡ್ಕೊಂಡ ಮೇಲೆ 14 ಸೈಟ್ ನೀಡಲಾಗಿತ್ತು. ಇದೀಗ ಅದೇ ಭಾರೀ ವಿವಾದವಾಗಿದ್ದು, ಸಿದ್ದು ಕುರ್ಚಿಗೂ ಕಂಟಕ ತಂದಿಟ್ಟಿದೆ.. ಇದರಿಂದ ಸ್ವತಃ ಪಾರ್ವತಿ ಅವ್ರು ತುಂಬಾ ನೊಂದಿರೋದಾಗಿ ಅವ್ರೇ ಹೇಳ್ಕೊಂಡಿದ್ದಾರೆ.
ಪಾರ್ವತಿ ಅವ್ರು ಊರಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ತಾ ಇರ್ಲಿಲ್ಲವಂತೆ. ಅವರು ಊರಿಗೆ ಜನಕ್ಕೆ ಕಾಣಿಸೋದು ಅಂದ್ರೆ ಅದು ದೇವಸ್ಥಾನದಲ್ಲಿ ಮಾತ್ರವಾಗಿತಂತೆ. ಹೌದು, ಸಿದ್ದು ಪತ್ನಿ ಪಾರ್ವತಿ ಅಪಾರ ದೈವ ಭಕ್ತರಾಗಿದ್ದಾರೆ. ಅದ್ರಲ್ಲಿಯೂ ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ತಾಯಿದ ದೊಡ್ಡ ಭಕ್ತರಾಗಿದ್ದಾರೆ. ಇನ್ನು ಊರ ಅಕ್ಕಪಕ್ಕ ಇರೋ ದೇವಸ್ಥಾನಗಳಿಗೂ ಅವ್ರು ಭೇಟಿ ಕೊಡ್ತಾರೆ. ತಮ್ಮ ಪತಿಯ ಯಶಸ್ಸಿಗೆ ಪ್ರಾರ್ಥಿಸುತ್ತಾರೆ. ಆದರೆ ಅಂತವರ ಮೇಲೆ ರಾಜಕೀಯವಾಗಿ ಇಂತಾ ಆರೋಪ ಮಾಡೋದು ತಪ್ಪು ಅಂತಾ ಗ್ರಾಮಸ್ಥರೇ ಬೇಸರ ಪಡ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಮತ್ತು ಅವ್ರ ಪತ್ನಿ ಬಗ್ಗೆ ಕುಟುಂಬದವ್ರು ಹೇಳೋ ವಿಷ್ಯ ರಾಜಕಾರಣಿಗಳು ಹೀಗೂ ಇರಲು ಸಾಧ್ಯನಾ? ಅಂತಾ ಖುಷಿ ಕೊಡುತ್ತೆ. ಹಾಗೇ ಸಿದ್ದುಗೆ ಇಂದು ಎದುರಾಗಿರೋ ಸಂಕಷ್ಟದ ಬಗ್ಗೆ ಅವ್ರು ಆಡಿರೋ ಮಾತುಗಳು ಬೇಸರ ತರಿಸುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ