newsfirstkannada.com

ರಷ್ಯಾ ಸೇನೆಗೆ ಬೇಕು ಭಾರತದ ಬೂಟು! ವಿದೇಶದಲ್ಲಿ ಕೇಳಿಬರುತ್ತಿದೆ ಬಿಹಾರದ ಹೆಜ್ಜೆ ಸಪ್ಪಳ

Share :

Published July 11, 2024 at 2:52pm

    ಭಾರತದ ಶೂಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​

    ಸ್ಥಳೀಯ ಕೈಗಾರಿಕಾ ಘಟಕದಲ್ಲಿ ತಯಾರಾಗುವ ಶೂಗಳಿಗೆ ಬೇಡಿಕೆ

    ಕಳೆದ ವರ್ಷ 100 ಕೋಟಿ ಮೌಲ್ಯದ ಶೂಗಳು ರಷ್ಯಾ ಸೈನಿಕರನ್ನು ಸೇರಿವೆ

ಬಲಿಷ್ಠ ರಾಷ್ಟ್ರವೊಂದರ ಸೇನೆಯು ಭಾರತದಲ್ಲಿ ತಯಾರಾಗುವ ಶೂಗಳನ್ನು ಬಯಸುತ್ತವೆ ಎಂದರೆ ನಂಬಲು ಅಸಾಧ್ಯ. ಭಾರತದಲ್ಲಿ ತಯಾರಾಗುವ ಶೂಗಳಿಗೆ ವಿದೇಶದಲ್ಲಿ ಡಿಮ್ಯಾಂಡ್​ ಹೆಚ್ಚಾಗಿದ್ದು, ರಷ್ಯಾ ದೇಶವು ತನ್ನ ಸೈನಿಕರಿಗಾಗಿ ಭಾರತದಿಂದ ಶೂಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಹೌದು. ಬಿಹಾರದ ಹಾಜಿಪುರದ ಕೈಗಾರಿಕಾ ಘಟಕದಲ್ಲಿ ತಯಾರಾಗುವ ಶೂಗಳ ಹೆಜ್ಜೆ ಸಪ್ಪಳ ರಷ್ಯಾದಲ್ಲಿ ಕೇಳಿಬರುತ್ತಿದೆ. ರಷ್ಯಾ ಸೈನಿಕರು ಆರಾಮ ಮತ್ತು ಕರ್ತವ್ಯಕ್ಕೆ ಈ ಶೂಗಳನ್ನೇ ಬಯಸುತ್ತಿದ್ದಾರೆ. ಯುದ್ಧಭೂಮಿಯಲ್ಲಿ, ಹಿಮದ ನೆಲದಲ್ಲಿ ಹೆಜ್ಜೆ ಹಾಕಲು ಹಾಜಿಪುರದಿಂದ ವಿಶೇಷವಾಗಿ ತಯಾರಿಸಿದ ಶೂಗಳು ರಷ್ಯಾ ದೇಶಕ್ಕೆ ರಫ್ತು ಆಗುತ್ತಿದೆ. ಇದು ಕೊರೆಯುವ ಚಳಿಯಲ್ಲೂ ಸೈನಿಕರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: KRS Dam: ಕಾವೇರಿ ಜಲಧಾರೆಗೆ ತುಂಬುತ್ತಿದೆ ಅಣೆಕಟ್ಟು.. ಇಂದು ಕೆಆರ್​ಎಸ್​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಇದನ್ನೂ ಓದಿ: 8 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕರಿಂದ ಲೈಂಗಿಕ ದೌರ್ಜನ್ಯ.. ಕೊಲೆ ಮಾಡಿ ಕಾಲುವೆಗೆ ಎಸೆದ ರಾಕ್ಷಸರು

ಶಿವ ಕುಮಾರ್​ ರಾಯ್​ ಎಂಬವರು ಕಾಂಪಿಟನ್ಸ್​​ ಎಕ್ಸ್​ಪೋರ್ಟ್ಸ್​​ ಪ್ರೈವೇಟ್​​ ಲಿಮಿಟೆಡ್​ ಎಂಬ ಕಂಪನಿ ಹುಟ್ಟುಹಾಕಿ ಅದರ ಮೂಲಕ ಹಾಜಿಪುರದಲ್ಲಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಲು ಮುಂದಾದರು. ಸುರಕ್ಷತಾ ಶೂಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ರಷ್ಯಾಗೆ ರಫ್ತು ಮಾಡಿದರು. ಸದ್ಯ ರಷ್ಯಾದ ಜೊತೆಗೆ ಯುರೋಪಿಯನ್​​ ಮಾರುಕಟ್ಟೆಗೆ ಈ ಶೂಗಳು ತಲುಪುತ್ತಿವೆ. ದೇಶಿಯ ಮಾರುಕಟ್ಟೆಗೂ ಸದ್ಯದಲ್ಲೇ ಬಿಡುಗಡೆ ಮಾಡಲು ಶಿವ ಕುಮಾರ್​ ರಾಯ್​ ಮುಂದಾಗಿದ್ದಾರೆ.

ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

ಶಿವ ಕುಮಾರ್​ ರಾಯ್ ಈ ಕುರಿತಾಗಿ ಮಾತನಾಡಿದ್ದು, ‘‘ರಷ್ಯಾ ದೇಶಕ್ಕೆ ಹಗುರವಾದ ಮತ್ತು ಸ್ಲಿಪ್​ ಆಗದ ಶೂಗಳ ಅಗತ್ಯವಿದೆ. 40 ಡಿಗ್ರಿ ಸೆಲ್ಸಿಯಸ್​ ಪರಿಸ್ಥಿತಿಯಲ್ಲಿ ಬಳಸಬಹುದಾದ ಶೂಗಳು ಇದಾಗಿದೆ. ಶೂ ಘಟಕದಲ್ಲಿ 300 ಉದ್ಯೋಗಿಗಳ ಪೈಕಿ ಶೇ.70ರಷ್ಟು ಮಹಿಳೆಯ ಉದ್ಯೋಗಿಗಳಿಗೆ ಒತ್ತು ನೀಡಲು ಮುಂದಾಗಿದ್ದೇವೆ. ಕಳೆದ ವರ್ಷ 100 ಕೋಟಿ ಮೌಲ್ಯದ 1.5 ಮಿಲಿಯನ್​​ ಜೋಡಿ ಶೂಗಳನ್ನು ರಫ್ತು ಮಾಡಿದ್ದೇವೆ ಎಂದು’’ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಷ್ಯಾ ಸೇನೆಗೆ ಬೇಕು ಭಾರತದ ಬೂಟು! ವಿದೇಶದಲ್ಲಿ ಕೇಳಿಬರುತ್ತಿದೆ ಬಿಹಾರದ ಹೆಜ್ಜೆ ಸಪ್ಪಳ

https://newsfirstlive.com/wp-content/uploads/2024/07/Russia-Army.jpg

Load More