newsfirstkannada.com

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ..!

Share :

22-06-2023

    ಕ್ಷೀರ ಭಾಗ್ಯದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

    ವಾರಕ್ಕೊಮ್ಮೆ ಮಾತ್ರ ಮೊಟ್ಟೆ ನೀಡುವ ಬಗ್ಗೆ ರಿಯಾಕ್ಟ್​​ ಮಾಡಿದ್ರು

    ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆಯೂ ಮಧು ಬಂಗಾರಪ್ಪ ಮಾತು..!

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೊಮ್ಮೆ ಮಾತ್ರ ಮೊಟ್ಟೆ ನೀಡುವುದರ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತಾಡಿದ ಮಧು ಬಂಗಾರಪ್ಪ ಹಿಂದಿನ ಸರ್ಕಾರ ವರ್ಷಕ್ಕೆ 42 ಬಾರಿ ಮೊಟ್ಟೆ ನೀಡುವ ನಿಯಮ ರೂಪಿಸಿದೆ. ಬಿಜೆಪಿ ಸರ್ಕಾರ ಕೇವಲ ಆರು ತಿಂಗಳು ಸಮಯವಿದ್ದ ಕಾರಣ ಮಕ್ಕಳಿಗೆ ಹೆಚ್ಚೆಚ್ಚು ಎಂದರೆ 2 ಮೊಟ್ಟೆ ನೀಡಿತ್ತು. ನಿಯಮದ ಪ್ರಕಾರ ಮಕ್ಕಳಿಗೆ ವಾರಕ್ಕೊಂದೇ ಮೊಟ್ಟೆ ನೀಡುವುದು. ಒಂದು ಮೊಟ್ಟೆ ಮೊದಲು ನೀಡಿ ಎಂದು ಆದೇಶ ಹೊರಡಿಸಿದ್ದೇನೆ. 2 ಮೊಟ್ಟೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.

ಕೇವಲ ಎಂಟನೇ ತರಗತಿವರೆಗೂ ಮಾತ್ರ ಮೊಟ್ಟೆ ನೀಡುವ ವ್ಯವಸ್ಥೆಯಿತ್ತು. ನಾನು 9 ಮತ್ತ 10ನೇ ಕ್ಲಾಸ್​​ನವರಿಗೂ ನೀಡಬೇಕು ಎಂದು ಸಿಎಂ ಬಳಿ ಮಾತಾಡಿದ್ದೇನೆ. ಕ್ಷೀರ ಭಾಗ್ಯದ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ಶಾಲೆ ಆರಂಭವಾಗಿದ್ದು, ನಾನು ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದು ಒಟ್ಟಿಗೆ ಆಯ್ತು. ಹೀಗಾಗಿ ಆದಷ್ಟು ಬೇಗ ಎಲ್ಲವನ್ನು ಸರಿ ಮಾಡುತ್ತೇನೆ ಎಂದಿದ್ದಾರೆ ಮಧು ಬಂಗಾರಪ್ಪ.

150 ಪೇಜ್​​ ಪಠ್ಯಪುಸ್ತಕ ಪರಿಷ್ಕರಣೆ ಆಗಲಿದೆ. ಇದಕ್ಕೆ 20 ಲಕ್ಷ ರೂಪಾಯಿ ಬಜೆಟ್​ ಬೇಕು. ಈ ಬಗ್ಗೆ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಮಾತಾಡಿದ್ದೇವೆ. ಇನ್ನು, 10 ದಿನಗಳಲ್ಲಿ ಪುಸ್ತಕಗಳು ಹೋಗಬೇಕು. ಅದಕ್ಕಾಗಿ ಸಮಿತಿ ಮಾಡಿ ಬೇರೆ ನಿಯಮ ಮಾಡಬೇಕು ಎಂದುಕೊಂಡಿದ್ದೇನೆ. ನಾವು ಎನ್​ಇಪಿ ವಿರುದ್ಧ ಇದ್ದೇವೆ. ಮಕ್ಕಳಿಗೆ ಪರೀಕ್ಷೆ ನೀಡುವುದು ಅವರ ಕಲಿಕೆಯನ್ನು ಪರೀಕ್ಷಿಸಲು, ಫೇಲ್​ ಮಾಡಲು ಅಲ್ಲ ಎಂದು ಹೇಳಿದರು.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ..!

https://newsfirstlive.com/wp-content/uploads/2023/06/Madhu-Bangarappa-1.jpg

Load More