newsfirstkannada.com

ಆದಿಕವಿ ಪಂಪನ ನೆಲದಲ್ಲೇ ಪ್ರಸಿದ್ಧ ಮಧುಕೇಶ್ವರನಿಗೆ ಅವಮಾನ; ಅಸಲಿಗೆ ಆಗಿದ್ದೇನು..?

Share :

01-08-2023

  ಕಳೆದ 2 ವರ್ಷಗಳಿಂದ ಮಳೆಗೆ ಸೋರುತ್ತಿರೋ ದೇವಾಲಯ

  ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಮಧುಕೇಶ್ವರ ದೇವಾಲಯ

  ದೇವಾಲಯದ ಒಳಗೂ ಛತ್ರಿ ಹಿಡಿದು ಸಾಗಬೇಕಾದ ಪರಿಸ್ಥಿತಿ..!

ಉತ್ತರ ಕನ್ನಡ: ಕನ್ನಡದ ಮೊದಲ ರಾಜಧಾನಿ, ಆದಿಕವಿ ಪಂಪನ ನೆಲ, ಕದಂಬರ ಆರಾಧ್ಯ ದೈವ ಮಧುಕೇಶ್ವರ ನೆಲೆನಿಂತ ಇತಿಹಾಸ ಪ್ರಸಿದ್ಧ ಕ್ಷೇತ್ರ ಬನವಾಸಿ. ದಿನನಿತ್ಯ ಸಾವಿರಾರು ಪ್ರವಾಸಿಗರ ಮನಸೂರೆಗೊಳ್ಳೋ ಬನವಾಸಿಯ ಜೇನು ಬಣ್ಣದ ಶಿವಲಿಂಗವಾಗಿ ನೆಲೆನಿಂತ ಮಧುಕೇಶ್ವರನಿಗೆ ಉಳಿದ ಕಾಲದಲ್ಲಿ ಅರ್ಚಕರಿಂದ ಜಲಾಭಿಷೇಕ ನಡೆಯುತ್ತೆ. ಆದ್ರೆ ಮಳೆಗಾಲದಲ್ಲಿ ವರುಣದೇವನಿಂದಲೇ ಜಲಾಭಿಷೇಕ ನಡೆಯುತ್ತೆ. ಸಾಮಾನ್ಯವಾಗಿ ದೇವಾಲಯಗಳು ಅಂದ್ರೆ ಭಕ್ತರಿಗೆ ಶಾಂತಿ ನೀಡೋ, ಮನಸ್ಸಿಗೆ ಮುದ ನೀಡುವ ತಾಣವಾಗಿರುತ್ತೆ. ದೇವಾಲಯಗಳು ಹಿಂದೂ ಧಾರ್ಮಿಕತೆಯಲ್ಲಿ ವಿಶೇಷ ಸ್ಥಾನ ಪಡೆದಿವೆ. ದೇವಾಲಯಗಳಲ್ಲಿ ಸೋರಿಕೆ ಕಂಡು ಬಂದ್ರೆ ಕೂಡಲೇ ಸಂಬಂಧಪಟ್ಟ ಆಡಳಿತ ಮಂಡಳಿಯೋ ಅಥವಾ ಮುಜರಾಯಿ ಇಲಾಖೆಯೋ ಅಥವಾ ಸಂಬಂಧಪಟ್ಟ ಇಲಾಖೆ ಅದರತ್ತ ಗಮನಹರಿಸಿ ಸೋರಿಕೆ ತಡೆಯುವಿಕೆಗೆ ಶಾಶ್ವತ ಪರಿಹಾರ ರೂಪಿಸುತ್ತವೆ.

ಭಕ್ತರಿಗೆ ಮಳೆಗಾಲದಲ್ಲಿ ಜಲಾಭಿಷೇಕ ಆಗದಂತೆ ತಡೆಯೋ ಕೆಲಸವನ್ನ ಮಾಡುತ್ತವೆ. ಆದರೆ ಬನವಾಸಿಯ ಪ್ರಸಿದ್ಧ ಮಧುಕೇಶ್ವರ ದೇಗುಲ ಪ್ರಾಚ್ಯ ವಸ್ತು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿ ಮಾರ್ಪಟ್ಟಿದೆ. ಸುಂದರ ಶಿಲ್ಪ ಕೆತ್ತನೆಗೆ ಹೆಸರಾಗಿದ್ದ ಬನವಾಸಿಯ ಮಧುಕೇಶ್ವರ ದೇವಾಲಯ ಮಳೆಗಾಲದಲ್ಲಿ ಸೋರುವ ಕಾರಣಕ್ಕೆ ಟಾರ್ಪಲಿನ್ ಹೊದ್ದು ತನ್ನ ಸೌಂದರ್ಯ ಮರೆ ಮಾಚಿದೆ. ಪುರಾತತ್ವ ಇಲಾಖೆಯು ದುರಸ್ತಿ ಕಾರ್ಯ ಮಾಡುವಲ್ಲಿ ನಿರ್ಲಕ್ಷ್ಯ ತೋರಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕದಂಬರ ರಾಜಧಾನಿ ಬನವಾಸಿಯಲ್ಲಿನ ಮಧುಕೇಶ್ವರ ದೇವಾಲಯ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗರ್ಭಗುಡಿ, ನಂದಿ ಮಂಟಪ ಇತರೆಡೆಗಳಲ್ಲಿ ದೇವಾಲಯದ ಮೇಲ್ಛಾವಣಿಯ ಗಾರೆ ಕಳಚಿ ನೀರು ಒಳ ಬರುತ್ತಿದೆ. ದಶಕಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯವಾಗಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದರಿಂದ ದೇವಾಲಯದ ಸೌಂದರ್ಯ ಕಳೆಗುಂದುತ್ತಿದೆ ಅನ್ನೋದು ಆಡಳಿತ ಸಮಿತಿಯವರ ದೂರಾಗಿತ್ತು. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಿದರೂ ಯಾವುದೇ ಕ್ರಮವಾಗಿಲ್ಲ.

ಇಷ್ಟೆಲ್ಲಾ ಆಗಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಮತ್ತೆ ಸೋರಿಕೆ ಜೋರಾಗಿದೆ. ಇದನ್ನು ವಿರೋಧಿಸಿ ಸ್ಥಳೀಯರು ಧ್ವನಿಯೆತ್ತಿದ ಪರಿಣಾಮ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ಟಾರ್ಪಲಿನ್ ಹೊಂದಿಸಿ ತಾತ್ಕಾಲಿಕ ಕಾರ್ಯ ಮಾಡಿದ್ದಾರೆ. ಆದರೆ ಇದರಿಂದ ದೇವಾಲಯದ ಸೌಂದರ್ಯ ಮರೆಯಾಗುವಂತಾಗಿದೆ. ದೂರ ದೂರುಗಳಿಂದ ಬರುವ ಭಕ್ತರಿಗೆ ಮಧುಕೇಶ್ವರನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಇಡೀ ದೇವಾಲಯ ಕಪ್ಪು ಟಾರ್ಪಲಿನ್ ನಿಂದ ತುಂಬಿದೆ. ದೇವಾಲಯ ಕಟ್ಟಡ ನಿರ್ವಹಿಸುವ ಪದ್ದತಿ ಇದಲ್ಲ. ದೇವಾಲಯದ್ದೊಂದೇ ಇಂಥ ಸ್ಥಿತಿಯಲ್ಲ. ಇಲ್ಲಿನ ಪಾರ್ವತಿ ದೇವಾಲಯ, ಲಕ್ಷ್ಮೀ ನರಸಿಂಹ ದೇವಾಲಯಗಳೂ ಸೋರುತ್ತಿವೆ. ಮಳೆಗಾಲದಲ್ಲಿ ಸೋರುವಿಕೆ ತಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ನಂತರ ಶಾಶ್ವತ ಕೆಲಸ ಮಾಡಲಾಗುವುದು ಅನ್ನೋದು ಇಲಾಖೆ ಅಧಿಕಾರಿಗಳ ಮಾಹಿತಿ. ಆದರೆ ಕಳೆದ ಕೆಲ ವರ್ಷಗಳಿಂದಲೂ ಇದೇ ರೀತಿಯ ಪರಿಸ್ಥಿತಿ ಇದ್ರೂ ಕೂಡ ಶಾಶ್ವತ ಪರಿಹಾರ ಕಂಡು ಹಿಡಿಯೋಕೆ ಆಗದ ಇಲಾಖೆ ಈಗ ಹಾರಿಕೆಯ ಉತ್ತರ ನೀಡುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗಮನದಲ್ಲೂ ಈ ವಿಷಯ ಇಲ್ಲ ಅನ್ನೋದು ಖೇದಕರ. ಈ ಬಗ್ಗೆ ಗಮನಕ್ಕೆ ಈಗ ಬಂದಿದೆ. ಇದರ ಬಗ್ಗೆ ಕ್ರಮ ಕೈಗೊಳ್ತೇವೆ ಅಂತಾರೆ ಜಿಲ್ಲಾ ಉಸ್ತುವಾರಿ ಸಚಿವರು.

ಒಟ್ಟಿನಲ್ಲಿ ಕನ್ನಡದ ಪ್ರಥಮ ರಾಜಧಾನಿಯ ಪ್ರಸಿದ್ಧ ಮಧುಕೇಶ್ವರ ದೇವಾಲಯದ ಪರಿಸ್ಥಿತಿ ಬಗ್ಗೆ ಇಲಾಖೆಯ ಕಾರ್ಯ ಜಿಲ್ಲೆಯ ಇತಿಹಾಸಕ್ಕೆ ಅವಮಾನ ಮಾಡಿದಂತಿದೆ. ಪಾಪ ಪ್ರಾಚ್ಯವಸ್ತು ಇಲಾಖೆಗೆ ಬಡತನ ಕಾಡುತ್ತಿರಬಹುದು ಅಂತ ಪ್ರವಾಸಿಗರು ಆಡಿಕೊಳ್ಳುತ್ತಿದ್ದು, ಇಲಾಖೆಯ ಕಾರ್ಯ ನಗೆಪಾಟಲಿಗೀಡಾಗಿದೆ. ಈ ಮಳೆಗಾಲ ಮುಗಿದ ಮೇಲಾದ್ರೂ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿದು ಮಧುಕೇಶ್ವರ ದೇವಾಲಯವನ್ನ ರಕ್ಷಿಸೋ ಕಾರ್ಯ ಮಾಡಬೇಕಿದೆ.

ವರದಿ: ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್, ಶಿರಸಿ

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ರನ್ ಭೂಮಿ ಪ್ರತಿದಿನ ಬೆಳಗ್ಗೆ 8.27ಕ್ಕೆ

ಆದಿಕವಿ ಪಂಪನ ನೆಲದಲ್ಲೇ ಪ್ರಸಿದ್ಧ ಮಧುಕೇಶ್ವರನಿಗೆ ಅವಮಾನ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/08/serasi-5.jpg

Load More