newsfirstkannada.com

ಹಣದ ದಾಹ: ಕೇವಲ 40 ಸಾವಿರಕ್ಕಾಗಿ ಹೆತ್ತ ಮಗಳನ್ನೇ ಮಾರಿದ ಪಾಪಿ ಪೋಷಕರು

Share :

29-06-2023

    ಪೋಷಕರೇ ತಮ್ಮ ಮಗಳನ್ನು ಮಾರಾಟ ಮಾಡಿದ ಕೃತ್ಯವಿದು

    ಸಮಾಜದಲ್ಲಿ ಇನ್ನು ನಿಲ್ಲದ ಬಾಲ್ಯವಿವಾಹ ಪದ್ಧತಿ ಆಚರಣೆ

    ಹಣದಾಸೆಗೆ ಸ್ವಂತ ಮಗಳನ್ನೇ 27 ವರ್ಷದ ವ್ಯಕ್ತಿಗೆ ಮಾರಿದ್ರಾ?

ಭೋಪಾಲ್​: 40 ಸಾವಿರ ರೂಪಾಯಿಗಳಿಗೆ 12 ವರ್ಷದ ಬಾಲಕಿಯನ್ನು ಮಾರಾಟ ಮಾಡಿದ್ದು 27 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಗಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಈ ಸಂಬಂಧ ಬಾಲ್ಯ ವಿವಾಹ ಮತ್ತು ಮಾನವ ಕಳ್ಳಸಾಗಣೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಐವರನ್ನು ಪೋಲಿಸರು ಬಂಧಿಸಿದ್ದಾರೆ. ಭೋಪಾಲ್ ನಗರದಿಂದ ಸ್ವಲ್ಪ ದೂರದಲ್ಲಿರುವ ಗುನಗಾ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಯೊಂದರ ಬುಡಕಟ್ಟು ಸಮುದಾಯಕ್ಕೆ ಬಾಲಕಿ ಸೇರಿದ್ದಾಳೆ ಎನ್ನಲಾಗಿದೆ. ಬಾಲಕಿಯ ಪೋಷಕರು 40 ಸಾವಿರ ರೂಪಾಯಿಗಳಿಗೆ ಆಕೆಯನ್ನು ಮಾರಾಟ ಮಾಡಿದ್ದಾರೆ. ಇಷ್ಟೇ ಅಲ್ಲದೇ ಮದುವೆಗೆ ಮೊದಲು 20 ಸಾವಿರ ರೂ.ಗಳನ್ನು ಮುಂಗಡವಾಗಿ ಪಡೆದಿದ್ದಾರೆ. ಇನ್ನುಳಿದ ಹಣವನ್ನು ಮದುವೆ ನಂತರ ಕೊಡುವುದಾಗಿ 2 ಕುಟುಂಬದ ನಡುವೆ ಒಪ್ಪಂದವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಈ ಒಪ್ಪಂದಕ್ಕೆ ಬಾಲಕಿ ಒಪ್ಪಿಲ್ಲ. ಆದ್ರೆ ಪೋಷಕರ ಒತ್ತಾಯದ ಮೇರೆಗೆ ಮದುವೆ ನಡೆದಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದಾಗ ಮನೆಯಲ್ಲಿ ಅರಿಶಿಣ ಶಾಸ್ತ್ರ ಸಮಾರಂಭ ನಡೆಯುತ್ತಿತ್ತು. ಬಾಲಕಿಯನ್ನು ಪ್ರಶ್ನಿಸಿದಾಗ ಒತ್ತಾಯದಿಂದ ಮದುವೆ ಮಾಡ್ತಿದ್ದಾರೆಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಐವರನ್ನು ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ದಾಹ: ಕೇವಲ 40 ಸಾವಿರಕ್ಕಾಗಿ ಹೆತ್ತ ಮಗಳನ್ನೇ ಮಾರಿದ ಪಾಪಿ ಪೋಷಕರು

https://newsfirstlive.com/wp-content/uploads/2023/06/MP_CHILD_WEDDING.jpg

Load More