ಪಂಚ ರಾಜ್ಯಗಳ ಚುನಾವಣೆಗಳ ಪೈಕಿ 2 ರಾಜ್ಯಗಳಿಗೆ ಮತದಾನ
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಪಕ್ಷಗಳು ಫೈಟ್
ಈಗಾಗಲೇ ಮತಗಟ್ಟೆಯಲ್ಲಿ ಸಾಲಾಗಿ ನಿಂತಿರುವ ಮತದಾರರು
ಭೋಪಾಲ್: ಮಿನಿ ಲೋಕಸಭೆ ಎಂದೇ ಬಿಂಬಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಮತದಾನ ಶುರುವಾಗಿದೆ. ಒಟ್ಟು 230 ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶ, ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಹವಣಿಸುತ್ತಿವೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವಾರು ನಾಯಕರು ಭರ್ಜರಿಯಾಗಿ ಮತಬೇಟೆಯಾಡಿದ್ದಾರೆ. ಮತದಾನ ಪ್ರಭುಗಳು ಯಾವ ಪಕ್ಷದ ಪರವಾಗಿ ಒಲವು ವ್ಯಕ್ತಪಡಿಸಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ. ಛತ್ತೀಸ್ಘಡದಲ್ಲಿ 2 ಹಂತದಲ್ಲಿ ಮತದಾನ ನಿಗದಿಯಾಗಿದ್ದು, 2ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗೆ ಬರ್ತಿರೋ ಜನರು ತಮ್ಮ ಹಕ್ಕನ್ನು ಚಲಾಯಿಸ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿಯು ಮತ್ತೆ ಅಧಿಕಾರವನ್ನು ಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಿದೆ. ವಿಧಾನಸಭಾ ಕ್ಷೇತ್ರದ ಮತದಾರರ ಬಳಿ ತೆರಳಿ ಪ್ರಚಾರ ಮಾಡಿ ಮತ್ತೆ ಅಧಿಕಾರ ನೀಡುವಂತೆ ಕೇಳಿಕೊಂಡಿದ್ದಾರೆ. ಛತ್ತೀಸ್ಘಡದ ಸಿಎಂ ಭೂಪೇಶ್ ಬಘೇಲ್ ಅವರು ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ.
ಮತದಾರ ಪ್ರಭುಗಳು ಕೊನೆಗೆ ಯಾರಿಗೆ ಒಲಿಯುತ್ತಾರೆ ಎಂಬುವುದು ಡಿಸೆಂಬರ್ 3ರ ಬಳಿಕ ಎಲ್ಲವೂ ಗೊತ್ತಾಗಲಿದೆ. 5 ರಾಜ್ಯಗಳ ಪೈಕಿ ಇವತ್ತು ಮಧ್ಯಪ್ರದೇಶ, ಛತ್ತೀಸ್ಘಡದಲ್ಲಿ ಮತದಾನ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ